spot_img
Friday, January 30, 2026
spot_img

ಬೆಳಗಾವಿ ಅಧಿವೇಶನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾ ಸಂಘದ ಐವರು ಭಾಗಿ

ಕುಂದಾಪುರ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ಸರಕಾರದ ಚಳಿಗಾಲದ ಅಧಿವೇಶದ ಪ್ರಯುಕ್ತ ಜಿಲ್ಲಾ ಆಡಳಿತ ಬೆಳಗಾವಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆನಕ ಇವೆಂಟ್ಸ್ ಮತ್ತು ಮ್ಯಾನೇಜ್ ಮೆಂಟ್ ಸಂದೇಶ ಶೆಟ್ಟಿ ಸಳ್ವಾಡಿ ಸಾರಥ್ಯದಲ್ಲಿ ನಡೆಯಲಿರುವ ಸುಶ್ಮಿತಾ ಸಾಲಿಗ್ರಾಮ ಅವರ ಕಲಾವಿಸ್ಮಯ ಸಾಲಿಗ್ರಾಮ ತಂಡದವರ ಯಕ್ಷಗಾನ ನೃತ್ಯ ರೂಪಕ, ಸಮೃದ್ಧಿ ಕೋಟೇಶ್ವರ ಅವರ ಯಕ್ಷಗಾನ ನೃತ್ಯ ಕಾರ್ಯಕ್ರಮದಲ್ಲಿ ಶಂಕರಪ್ಪನಕೊಡ್ಲು ಶ್ರೀ ಲಕ್ಷ್ಮೀವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾ ಸಂಘದ ಐವರು ಹವ್ಯಾಸಿ ಕಲಾವಿದರು ಭಾಗವಹಿಸಲಿದ್ದಾರೆ. ಶ್ರೀ ಲಕ್ಷ್ಮೀವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾ ಸಂಘದ ಸಂಚಾಲಕರಾದ ಪ್ರವೀಣ್ ಎಂ., ಕಲಾವಿದರಾದ ಕುಶ ಮೊಗವೀರ, ಕಲಿಕಾರ್ಥಿಗಳಾದ ಮನೀಷಾ ಸತೀಶ್, ತುಳಸಿ, ಆಯುಷಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಸಹಿತವಾಗಿ ಸಚಿವರು, ಶಾಸಕರು, ಅಧಿಕಾರಿಗಳು ವೀಕ್ಷಿಸಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!