spot_img
Friday, January 30, 2026
spot_img

ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ

ಕುಂದಾಪುರ: ಗುರುವಿಗೆ ಗೌರವ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ವಿದ್ಯೆಯೊಂದಿಗೆ ವಿವೇಕ ಮತ್ತು ತಾಳ್ಮೆ
ಇರಬೇಕು. ಸಜ್ಜನರ ಸಹವಾಸ ವ್ಯಕ್ತಿತ್ವವನ್ನು ಒಳ್ಳೆಯ ದಾರಿಗೆ ಕೊಂಡೊಯ್ಯುತ್ತದೆ. ವ್ಯಕ್ತಿತ್ವ ನಿರ್ಮಾಣಕ್ಕೆ ಜೀವನದಲ್ಲಿ ದೃಢ
ನಿಶ್ಚಯ ಮತ್ತು ಸ್ಪಷ್ಟ ಗುರಿ ಅತೀ ಮುಖ್ಯ. ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ; ಸನ್ಮಾರ್ಗದಲ್ಲಿ ಸೃಜನಶೀಲ ಬದುಕನ್ನು
ರೂಪಿಸಿಕೊಂಡಾಗ ಗುರಿ ಸಾಧನೆ ಸುಲಭವಾಗುತ್ತದೆ. ಹವ್ಯಾಸ ಬದಲಾದರೆ ಹಣೆಬರಹ ಬದಲಾಗುತ್ತದೆ; ದೃಷ್ಟಿ ಬದಲಾದರೆ ಜೀವನದ
ದೃಶ್ಯವೇ ಬದಲಾಗುತ್ತದೆ ಎಂದು ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆಯ ಪರಿವೀಕ್ಷಣಾಧಿಕಾರಿ ಹಾಗೂ ಉಡುಪಿ ಜಿಲ್ಲೆಯ ಕನ್ನಡ ಸಾಹಿತ್ಯ
ಪರಿಷತ್ತಿನ ಕಾರ್ಯದರ್ಶಿ  ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.

ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಗುಣಮಟ್ಟ ಭದ್ರತಾ ಘಟಕವು ಆಯೋಜಿಸಿರುವ ವ್ಯಕ್ತಿತ್ವ
ವಿಕಸನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ
ಕಾರ್ಯಕ್ರಮ ಸಂಯೋಜಿಸಿದರು.

ಈ ಸಂದರ್ಭ ವಾಣಿಜ್ಯ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಜೋಸ್ಲಿನ್ ಅಲ್ಮೇಡಾ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮ
ಸಂಯೋಜಕರಾದ ಶ್ರೀಮತಿ ಮಾಲತಿ ಕುಂದರ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!