spot_img
Friday, January 30, 2026
spot_img

ಉಡುಪಿ ಬರುವುದು ಯಾವಾಗಲೂ ಅದ್ಬುತ-ಪ್ರಧಾನ ನರೇಂದ್ರ ಮೋದಿ | ಪುತ್ತಿಗೆ ಮಠದಿಂದ ಪ್ರಧಾನಿಗೆ ಭಾರತ ಭಾಗ್ಯವಿದಾತ ಬಿರುದು ಪ್ರದಾನ

ಉಡುಪಿ, ನ.28: ಉಡುಪಿಯ ಈ ಸಭೆ, ಸಾಧು ಸಂತರ ಉಪಸ್ಥಿತಿಯಲ್ಲಿ ನಾನು ಭಾಗವಹಿಸುತ್ತಿರುವುದು ನನ್ನ ಧನ್ಯನಾಗಿಸಿದೆ. ಇಂಥಹ ಆಶಿರ್ವಾದ ನನಗೆ ಸಿಕ್ಕಿದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸವನ್ನು ಮುನ್ನಡೆಸುವ ಶಕ್ತಿ ದೇವರು ನೀಡಲಿ. ಮಧ್ಚಾಚಾರ್ಯರ ತಪೋಭೂಮಿಗೆ ಬರುವುದು ಅದೊಂದು ಪುಣ್ಯದ ಫಲ. ಕರ್ನಾಟಕದ ಭೂಮಿಯಲ್ಲಿ ವಿಶೇಷವಾದ ಶಕ್ತಿ ಇದೆ. ಅದರಲ್ಲೂ ಕೃಷ್ಣನ ನಾಡು ಉಡುಪಿಗೆ ಬರುವುದೆಂದರೆ ಯಾವಾಗಲೂ ಅದ್ಭುತ, ಶ್ರೀಕೃಷ್ಣನ ದರ್ಶನದಿಂದ ಆತ್ಮೀಯ ಆದ್ಯಾತ್ಮಕ ಅನುಭವ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅವರು ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸಿಗುಣೇಂದ್ರ ತೀರ್ಥ ಶ್ರೀಪಾದ ನೇತೃತ್ವದಲ್ಲಿ ನಡೆದ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನನ್ನ ಜನ್ಮಭೂಮಿ ಗುಜರಾತ್. ಆದರೆ ಉಡುಪಿಗೂ ನನಗೂ ಅವಿನಾಭಾವ ಸಂಬಂಧವಿದೆ. ರಾಮಚರಿತ ಮಾನಸ ಆಧ್ಮಾತ್ಮಕವಾಗಿ ವಿಶೇಷವಾದ ಅನುಭವ ನೀಡುತ್ತದೆ. ವೇದ ಉಪನಿಷತ್ ಭಾರತಕ್ಕೆ ವಿಶೇಷ ಪರಂಪರೆಯನ್ನು ಒದಗಿಸಿದೆ. ಉತ್ತಮ ಸಂಸ್ಕಾರವನ್ನು ನೀಡಿದೆ. ಅಯೋಧ್ಯ ಶ್ರೀರಾಮ ಮಂದಿರ ನಿರ್ಮಾಣ ಅಂದೋಲನದಲ್ಲಿ ಉಡುಪಿಯ ಪಾತ್ರ ಮಹತ್ವದ್ದು. ಭಗವಾನ್ ಶ್ರೀರಾಮನ ಅನನ್ಯ ಭಕ್ತ ಮಧ್ಚಾಚಾರ್ಯರ ಪುಣ್ಯಭೂಮಿ ಉಡುಪಿ ಕರ್ನಾಟಕ ಮಾತ್ರವಲ್ಲ ದೇಶದ ಜನ ಗೌರವಿಸುವ ಪುಣ್ಯಭೂಮಿ. ಭಕ್ತಿ ಹಾಗೂ ಸೇವಾ ಸಂಗಮ ಕ್ಷೇತ್ರ ಇದು. ಸನಾತನ ಧರ್ಮದ ಶ್ರೇಷ್ಠತೆ ದಾಸಶ್ರೇಷ್ಟರು ದೇವರನ್ನು ಸ್ತುತಿಸಿದ ಕ್ಷೇತ್ರವಿದು. ಕನಕದಾಸರ ಭಕ್ತಿವಂತ ಒಲಿದ ಉಡುಪಿಯ ಶ್ರೀಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಶ್ರೀ ಕೃಷ್ಣ ಗೀತೆಯಲ್ಲಿ ತಿಳಿಸಿದಂತೆ ಜಗತ್ತು ಸುಖಮಯವಾಗಿರಬೇಕು. ಭಕ್ತಿಯ ಮಾರ್ಗದಲ್ಲಿ ನೆಡೆಯೋಣ. ಈ ಕಲಿಯುಗದಲ್ಲಿ ಗೀತೆಯ ಕೀರ್ತನೆ ಪಠಣದಿಂದ ಮನಸ್ಸಿನ ಸಂಕಲ್ಪಿತ ಸಾಧನೆ ಸಾಧ್ಯವಿದೆ. ನಾವೆಲ್ಲ ಧಾರ್ಮಿಕ ಒಲವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ, ಜನಸಂಘ ಮತ್ತು ಬಿಜೆಪಿಯ ಉತ್ತಮ ಆಡಳಿತದ ಮಾದರಿಯ ಕರ್ಮಭೂಮಿ ಉಡುಪಿ ಎಂದು ಹೇಳಿದರು.

ಲಕ್ಷಕಂಠ ಗೀತಾ ಕಾರ್ಯಕ್ರಮ ಅಂಗವಾಗಿ ಭಗದ್ಗೀತೆಯ ೧೮ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಸಾಮೂಹಿಕವಾಗಿ ಪಠಣ ಮಾಡಿದರು. ಡಾ.ವಿ.ಎಸ್.ಆಚಾರ್ಯರ ಸೇವೆ, ಉಡುಪಿಗೆ ಅವರ ಕೊಡುಗೆಯನ್ನು ಪ್ರಧಾನಿಗಳು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಪ್ರಧಾನಿಗೆ ಭಾರತ ಭಾಗ್ಯವಿದಾತ ಬಿರುದು ನೀಡಿ ಗೌರವಿಸಿದರು. ಕಾಶಿ ಕಾರಿಡಾರ್ ಮಾದರಿಯಲ್ಲಿ ಉಡುಪಿ ಕಾರಿಡಾರ್ ಅಭಿವೃದ್ಧಿ ಪಡಿಸುವಂತೆ ಪ್ರಧಾನಿಗೆ ಶ್ರೀಗಳು ಮನವಿ ಮಾಡಿದರು.

ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸಭಾ ಸಂಸದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ.ರಾಘವೇಂದ್ರ, ಬಿ.ವೈ ವಿಜಯೇಂದ್ರ, ಶಾಸಕರುಗಳಾದ ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಶೆಟ್ಟಿ ಗಂಟಿಹೊಳೆ, ಸುನೀಲ್ ಕುಮಾರ್, ಯಶಪಾಲ್ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!