spot_img
Wednesday, March 11, 2026
spot_img

ಕೊಲ್ಲೂರು: ಕೊಡಚಾದ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ದಶಮಾನೋತ್ಸವ ಸಂಪನ್ನ

ಉತ್ತಮ ನಾಯಕತ್ವದಿಂದ ಯಶಸ್ಸು ಕಾಣಲು ಸಾಧ್ಯ-ಶಾಸಕ ಗುರುರಾಜ ಗಂಟಿಹೊಳೆ
ಜನಪ್ರತಿನಿಧಿ ವಾರ್ತೆ] ಕೊಲ್ಲೂರು, ಅ.18: ಸಹಕಾರ ಕ್ಷೇತ್ರ ಜನರ ಅವಶ್ಯಕತೆಯನ್ನು ಪೂರೈಸುತ್ತಿದೆ. ಉತ್ತಮ ನಾಯಕತ್ವ ದೊರೆತಾಗ ಪರಿಪೂರ್ಣತೆ ಕಾಣಲು ಸಾಧ್ಯವಾಗುತ್ತದೆ. ಕೊಲ್ಲೂರು ರಮೇಶ ಗಾಣಿಗರ ನಾಯಕತ್ವದಲ್ಲಿ ಕೊಡಚಾದ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಸಹಕಾರ ಸಂಘದ ಯಶಸ್ಸನ್ನು ಜನಸ್ತೋಮ ಸಾಕ್ಷೀಕರಿಸುತ್ತದೆ. ಕೊಡಚಾದ್ರಿ ಹೆಸರಿನ ಈ ಸಂಸ್ಥೆ ಕೊಡಚಾದ್ರಿಯಷ್ಟೇ ಎತ್ತರಕ್ಕೆ ಬೆಳೆಯಲಿ ಎಂದು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು.

ಅ.18ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ಸಭಾ ಭವನದಲ್ಲಿ ನಡೆದ ಕೊಲ್ಲೂರು ಕೊಡಚಾದ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೆ.ಬಾಬು ಶೆಟ್ಟಿ ಶುಭಾಶಂಸನೆ ನೀಡಿ, ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಇಂಥಹ ಸಹಕಾರ ಸಂಘಗಳು ಜನರಿಗೆ ಆಪ್ತವಾಗಿವೆ. ಸಾರ್ವಜನಿಕರ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿವೆ. ಆರ್ಥಿಕ ಪ್ರಗತಿಗೆ ಕಾರಣವಾಗುತ್ತವೆ. ರಮೇಶ ಗಾಣಿಗರ ನೇತೃತ್ವದಲ್ಲಿ ಹತ್ತು ವರ್ಷಗಳನ್ನು ಪೂರೈಸಿರುವ ಈ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು.

ದಶಮಾನೋತ್ಸವ ಸ್ಮರಣ ಸಂಚಿಕೆಯನ್ನು ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ ಬಿಡುಗಡೆ ಮಾಡಿ. ರಮೇಶ ಗಾಣಿಗರು ಸಹಕಾರ ವ್ಯವಸ್ಥೆಯಲ್ಲಿ ಸಾಕಷ್ಟು ಅನುಭವ ಸಾಧಿಸಿದ್ದಾರೆ. ಎರಡು ಸಹಕಾರ ಸಂಘಗಳನ್ನು ಹುಟ್ಟುಹಾಕಿ ಬಲಿಷ್ಠವಾಗಿ ಕಟ್ಟಿದ್ದಾರೆ. ಜನರ ವಿಶ್ವಾಸವನ್ನು ಅವರು ಸಂಪಾದಿಸಿದ್ದರಿಂದ ಸಹಕಾರ ಸಂಘಗಳನ್ನು ಯಶಸ್ವಿಯನ್ನು ಮುನ್ನಡೆಸಲು ಸಾಧ್ಯವಾಗಿದೆ. ಕೊಡಚಾದ್ರಿ ವಿವಿಧೋದ್ದೇಶ ಸೌಹಾರ್ದ ಸಂಘದಿಂದ ಈ ಭಾಗದ ಜನರಿಗೆ ಇನ್ನಷ್ಟು ಅನುಕೂಲವಾಗಲಿ ಎಂದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಮಂಜುನಾಥ ಎಸ್.ಕೆ ವಿದ್ಯಾರ್ಥಿವೇತನ ವಿತರಣೆ ಮಾಡಿ, ರಾಜ್ಯದಲ್ಲಿ ಸೌಹಾರ್ದ ಕಾಯ್ದೆ ಪ್ರಬಲವಾಗಿ ಬೆಳೆಯುತ್ತಿದೆ. ರಾಜ್ಯದಲ್ಲಿ 6400 ಸೌಹಾರ್ದ ಸಹಕಾರಿ ಸಂಘಗಳಿವೆ. ಉಡುಪಿ ಜಿಲ್ಲೆಯಲ್ಲಿ 105 ಸಂಘಗಳಿವೆ. ಒಂದು ಕೋಟಿ ಸದಸ್ಯರು ರಾಜ್ಯದಲ್ಲಿದ್ದಾರೆ. ಒಂದು ಲಕ್ಷ ಸೌಹಾರ್ದ ಸಹಕಾರಿ ನೌಕರರಿದ್ದಾರೆ. ಜನರ ಅಭಿವೃದ್ಧಿಯಲ್ಲಿ ಅತ್ಯಂತ ಸಕ್ರೀಯವಾಗಿ ಸೌಹಾರ್ದ ಸಹಕಾರಿ ತೊಡಗಿಸಿಕೊಂಡಿದೆ ಎಂದರು.

ಕೊಡಚಾದ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಕೆ.ರಮೇಶ ಗಾಣಿಗ ಕೊಲ್ಲೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರ ಸಹಕಾರದಿಂದ ಕೊಡಚಾದ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘವು ಲಾಭದಾಯಕವಾಗಿ ಮುನ್ನೆಡೆಯುತ್ತಿದೆ. ವಾರ್ಷಿಕ 40 ಕೋಟಿಗೂ ಮಿಕ್ಕಿ ವ್ಯವಹಾರ ಮಾಡಿದೆ. 12 ಕೋಟಿಯಷ್ಟು ಠೇವಣಿ ಸಂಗ್ರಹವಾಗಿದೆ. 9 ಕೋಟಿಗೂ ಮಿಕ್ಕಿ ಸಾಲ ನೀಡಲಾಗಿದೆ. ಸದಸ್ಯರು ಪಡೆದ ಸಾಲವನ್ನು ಸದ್ವಿನಿಯೋಗಗೊಳಿಸಿಕೊಂಡಿದ್ದಾರೆ. ಕ್ಲಪ್ತ ಸಮಯಕ್ಕೆ ಮರುಪಾವತಿ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸಂಘವು ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಯಶಸ್ವಿಯಾಗಿ ಹತ್ತು ವರ್ಷವನ್ನು ಪೂರೈಸಿದ್ದೇವೆ. ಸದಸ್ಯರು ಸಂಘದ ಮೇಲೆ ಇರಿಸಿರುವ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್.ರಾಜು ಪೂಜಾರಿ, ನೂಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ವೇ.ಮೂ.ಕೃಷ್ಣ ಭಟ್ ನೂಜಾಡಿ, ಕುಂದಾಪುರ ಉಪವಿಭಾಗದ ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ಕೆ., ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರಸನ್ನಾ ವಿ.ಶರ್ಮ, ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ಸುಭಾಶ್ ಎಂ.ಶೆಟ್ಟಿ, ಸೌಹಾರ್ದ ಸಹಕಾರಿಯ ವಿಜಯ ಕೆ.ಎಸ್ ಮೊದಲಾದವರು ಭಾಗವಹಿಸಿದ್ದರು.

ದಶಮಾನೋತ್ಸವದ ಅಂಗವಾಗಿ ಧಾರ್ಮಿಕ ಸೇವೆಯಲ್ಲಿ ಗುರುತಿಸಿಕೊಂಡ ಮೂರ್ತಿ ಕಾಳಿದಾಸ್ ಭಟ್, ಅರ್ಚಕರಾದ ಗೋವಿಂದ ಅಡಿಗ, ನಿವೃತ್ತ ಶಿಕ್ಷಕ ಹೆಚ್.ನಾಗರಾಜ್ ಭಟ್, ಕೃಷಿಕ ಗಂಗಾಧರ ಭಟ್, ಸಹಕಾರ ಕ್ಷೇತ್ರದ ಸಾಧಕ ಎಸ್.ರಾಜು ಪೂಜಾರಿ, ಕುಂದಾಪುರ ಉಪವಿಭಾಗದ ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ಕೆ., ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಸಂಘದ ಉತ್ತಮ ಗ್ರಾಹಕ ಪಿ.ಎನ್.ಶ್ರೀಧರ, ಪುರೋಹಿತರಾದ ಕೃಷ್ಣ ಭಟ್ ನೂಜಾಡಿ, ಯುವ ಉದ್ಯಮಿ ಧೀರಜ್ ಹೆಜಮಾಡಿ ಇವರನ್ನು ಸನ್ಮಾನಿಸಲಾಯಿತು.

ಕೊಡಚಾದ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಹೇಮಾಲತಾ ಹೆಬ್ಬಾರ್, ನಿರ್ದೇಶಕರಾದ ರಘುನಾಥ ಕೆ,, ಪುಟ್ಟಯ್ಯ ಗಾಣಿಗ, ಗೀತಾ ಆರ್.ಹೆಗ್ಡೆ, ಲೋಲಾಕ್ಷಿ ಪಂಡಿತ್, ನಾಗೇಂದ್ರ ಬಂಕೇಶ್ವರ, ಪ್ರಸನ್ನ ಕುಮಾರ್, ಪ್ರೇಮಾ, ನೇತ್ರಾ ಆಚಾರ್, ಸುರೇಶ ಪೂಜಾರಿ ದಳಿ ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಣಮ್ಯ ಪ್ರಾರ್ಥನೆ ಮಾಡಿದರು. ಸುಮನಾ ಪಡುಕೋಣೆ ಸನ್ಮಾನ ಪತ್ರ ವಾಚಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಗಾಣಿಗ ವಂದಿಸಿದರು. ಆಕಾಶವಾಣಿ, ದೂರದರ್ಶನ ಕಲಾವಿದೆ ರೇವತಿ ಶೆಟ್ಟಿ ಕೋಟ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ, ಕೊಲ್ಲೂರು ಭಾಗದ ಅಂಗನವಾಡಿಯಿಂದ ಕಾಲೇಜು ತನಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಂಘದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಸಂಘದ ಬೆಳವಣಿಗೆಯಲ್ಲಿ ಹತ್ತು ವರ್ಷಗಳಿಂದ ಸಹಕಾರ ನೀಡುತ್ತಾ ಬಂದಿರುವವರನ್ನು ಗೌರವಿಸಲಾಯಿತು. ಸಂಘದ ವ್ಯಾಪ್ತಿಯ ಅತ್ಯುತ್ತಮ ಸ್ವಸಹಾಯ ಸಂಘಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಿಸಲಾಯಿತು. ಅದೃಷ್ಟಶಾಲಿ ಸಭಾಸದರಿಗೆ ಆಕರ್ಷಕ ಬೆಳ್ಳಿಯ ನಾಣ್ಯದ ಬಹುಮಾನ ನೀಡಲಾಯಿತು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಸಂಘದ ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಮಕ್ಕಳಿಂದ ನೃತ್ಯ ವೈಭವ ನಡೆಯಿತು.
ಅಪರಾಹ್ನ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಅದ್ದೂರಿಯ ಯಕ್ಷಗಾನ ‘ಕವಿರತ್ನ ಕಾಳಿದಾಸ’ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!