spot_img
Wednesday, March 11, 2026
spot_img

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ: ಶೇ.100 ಪ್ರಗತಿ ಸಾಧಿಸಲು ಸಹಕಾರ-ದಿನಕರ ಶೆಟ್ಟಿ

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ 98% ಪ್ರಗತಿ ಸಾಧಿಸಿದ್ದೇವೆ, ಇನ್ನು 2 ದಿನದಲ್ಲಿ 100% ಪ್ರಗತಿ ಸಾಧಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದು ಅಗತ್ಯ ಸಹಕಾರ ನೀಡಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒಪ್ಪಿದೆ ಎಂದು ಜಿಲ್ಲಾಧ್ಯಕ್ಷ ಅಂಪಾರು ದಿನಕರ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಗಣತಿದಾರರು, ಸಮೀಕ್ಷೆಗೆ ಸಂಬಂಧಿಸಿದಂತೆ App ನಲ್ಲಿನ ಸಮಸ್ಯೆಗಳು, UHID ಮ್ಯಾಪ್ ಮೂಲಕ ಕುಟುಂಬಗಳ ಗುರುತಿಸುವುದು, ಮನೆಗಳ ಪಟ್ಟಿ ನೀಡದೇ ಇರುವುದು, ನ್ಯಾವಿಗೇಶನ್ ಸರಿಯಾಗಿ ನೀಡದೇ ಇರುವುದು, ಬ್ಲಾಕ್ ಸರಿಯಾಗಿ ಹಂಚಿಕೆಯಾಗದೇ ಇರುವುದು ಇತ್ಯಾದಿ ಅನೇಕ ಸಮಸ್ಯೆಗಳ ನಡುವೆಯೂ ನಾವು ಕುಟುಂಬಗಳನ್ನು 2-3ಬಾರಿ ಭೇಟಿಯಾಗಿ ತರಬೇತಿಯಲ್ಲಿ ತಿಳಿಸಿದಂತೆ App ನಲ್ಲಿ ಮಾಹಿತಿಯನ್ನು ಗಂಟೆಗಟ್ಟಲೆ ಪ್ರಯತ್ನ ಪಟ್ಟು ಅತ್ಯಂತ ಜಾಗರೂಕತೆಯಿಂದ ಗಣಕೀಕರಣಗೊಳಿಸಿದ್ದೇವೆ.

ಆದರೆ ಸಂಪೂರ್ಣ ಗಣತಿ ಮುಗಿದ ನಂತರ ಗಣತಿ ತರಬೇತಿ ಅಥವಾ ಗಣತಿ ಆರಂಭದಲ್ಲಿ ಮಾಹಿತಿ ನೀಡುವವರು ಸ್ವಯಂ ದೃಢೀಕರಣ ನಮೂನೆ ಹೊರತು ಪಡಿಸಿ ಯಾವುದೇ ನಮೂನೆಗಳನ್ನು ನೀಡದೇ ಇದೀಗ ಪಡಿತರ ಚೀಟಿ ಆಧಾರದಲ್ಲಿ ಸಮೀಕ್ಷೆ ಮಾಡಿದ ಮನೆಗಳ ಸಂಖ್ಯೆ, ಆಧಾರ್ ಆಧಾರಿತ ಗಣತಿ ಮನೆಗಳ ಸಂಖ್ಯೆ, ಮಾಹಿತಿ ನೀಡದವರ ಸಂಖ್ಯೆ, ಸಮೀಕ್ಷೆ ಒಳಪಡದ ವ್ಯಕ್ತಿಗಳ ಸಂಖ್ಯೆ, ಮೃತರಾದವರ ಮಾಹಿತಿ, ಹೊರದೇಶದಲ್ಲಿ ವಾಸಿಸುವರ ಸಂಖ್ಯೆ, ಚಿಕ್ಕ ಮಕ್ಕಳ ಸಂಖ್ಯೆ ಹೀಗೆ ಹಲವಾರು ಅಂಕಿ ಅಂಶಗಳನ್ನು ನಮೂನೆಗಳ ಮೂಲಕ ಕೇಳಲಾಗುತ್ತಿದೆ. ಈ ಮಾಹಿತಿಯನ್ನು ಮೊದಲೇ ತಿಳಿಸಿದ್ದರೇ. ಗಣತಿಯ ಸಮಯದಲ್ಲೇ ಸಂಗ್ರಹಿಸಿ ಬರುತ್ತಿದ್ದೆವು. ಗಣತಿಯ ಸಂದರ್ಭದಲ್ಲಿ ಸ್ವ ಇಚ್ಚೆಯಿಂದ ಸ್ವಯಂ ದೃಢೀಕರಣದೊಂದಿಗೆ ಮಾಹಿತಿದಾರರ ಹೇಳಿಕೆಯಂತೆ ಕುಟುಂಬದ ಸಂಪೂರ್ಣ ಮಾಹಿತಿ ಗಣಕೀಕರಣಗೊಳಿಸಿದ್ದೇವೆ. ನಮ್ಮಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ. ಇದಕ್ಕೆ ಸಂಬಂಧಿಸಿದ ಯಾವ ನಮೂನೆಯೂ ನಮ್ಮಲ್ಲಿ ಇರುವುದಿಲ್ಲ. ಶಾಲೆಗಳ ಆರಂಭಕ್ಕೆ ಒಂದೆರಡು ದಿನಗಳು ಉಳಿದಿರುವಾಗ ಶೈಕ್ಷಣಿಕ ಸಿದ್ಧತೆಯಲ್ಲಿ ತೊಡಗಬೇಕಾದ ಅನಿರ್ವಾಯತೆ ಇರುವುದರಿಂದ ಪುನಃ ಮತ್ತೊಮ್ಮೆ ಕುಟುಂಬಗಳನ್ನು ದೂರವಾಣಿ ಅಥವಾ ಮುಖಾಮುಖಿ ಭೇಟಿ ನಮ್ಮಿಂದ ಕಷ್ಟಸಾಧ್ಯವಾಗುತ್ತದೆ. ನಮ್ಮಲ್ಲಿರುವ ಸ್ವಯಂ ದೃಢೀಕರಣ, ಖಾಲಿ ಮನೆ, ಮೂಲಮನೆಯಲ್ಲಿ ಮಾಹಿತಿ ನೀಡಿದವರ ವಿವರ, ನಿರಾಕರಣೆ ಮಾಹಿತಿಗಳನ್ನು ಸೂಪರ ವೈಸರ್ ಗೆ ಈಗಾಗಲೇ ಒಪ್ಪಿಸಲಾಗಿದೆ. ನಮ್ಮ ಬ್ಲಾಕ್ ವ್ಯಾಪ್ತಿಯ ಸಮೀಕ್ಷೆಯ ಸಂಪೂರ್ಣ ವಿವರಗಳನ್ನು ಸೂಪರ್ ವೈಸರ್ ಲಾಗಿನ್ ನಲ್ಲಿ ದಾಖಲಾಗುವುದರಿಂದ, ಮೇಲ್ವಿಚಾರಕರೇ ದೃಢೀಕರಣಗೊಳಿಸುವುದು ಸಮಂಜಸವಾಗುತ್ತದೆ. ಆದಾಗೀಯೂ ಮುಂದುವರೆದು ಇನ್ನುಳಿದ ಅಗತ್ಯವಾದ ಮಾಹಿತಿ ಶೈಕ್ಷಣೆತರ ಸಿಬ್ಬಂದಿಯ ಮೂಲಕ ವಾರ್ಡ್‌ವಾರು ಪಡೆಯುವಂತೆ ಜಿಲ್ಲೆಯ ಸಮಸ್ತ ಗಣತಿದಾರ ಶಿಕ್ಷಕರ ಪರವಾಗಿ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದಿನಕರ ಶೆಟ್ಟಿ ಅಂಪಾರು ಅವರು ಮನವಿ ಸಲ್ಲಿಸಿದ್ದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!