spot_img
Wednesday, March 11, 2026
spot_img

ಆನಗಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಮಾಹಿತಿ ಶಿಬಿರ

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕುಂದಾಪುರ ತಾಲೂಕಿನ ಬಸ್ರೂರು ವಲಯದ ಆನಗಳ್ಳಿ ಬ್ರಾಹ್ಮಿ ಜ್ಞಾನವಿಕಾಸ ಕೇಂದ್ರ ಮತ್ತು ಪ್ರಗತಿಬಂಧು ಸ್ವಸಹಾಯ ಸಂಘ ಆನಗಳ್ಳಿ ಹಾಗೂ ಹೇರಿಕುದ್ರು ಒಕ್ಕೂಟದ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧಕ ಕೇಂದ್ರ ಕುತ್ಪಾಡಿ, ಉಡುಪಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಕುಂದಾಪುರ ತಾಲೂಕು, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ದತ್ತಾಶ್ರಮ ಆದಿಶಕ್ತಿ ಮಠ ಚಾರಿಟೇಬಲ್ ಟ್ರಸ್ಟ್ ಆನಗಳ್ಳಿ, ಗೆಳೆಯರ ಬಳಗ ರಿ., ಆನಗಳ್ಳಿ, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಸ್ರೂರು ಸಹಯೋಗದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭೀಷೇಕದ 58ನೇ ವರ್ಧಂತಿ ಪ್ರಯುಕ್ತ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ, ಎಸ್.ಡಿ.ಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ನುರಿತ ವೈದ್ಯರುಗಳಿಂದ ಆನಗಳ್ಳಿ ಗೆಳೆಯರ ಬಳಗದ ಕಲಾಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಮಾಹಿತಿ ಶಿಬಿರವನ್ನು ನಡೆಸಲಾಯಿತು.

ಸಭಾಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಅಶೋಕ್ ಕೆರೆಕಟ್ಟೆ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷರಾದ ಸಚಿನ್ ನೆಕ್ಕುತ್ತಾಯ, ಎಸ್ ಡಿ ಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಉಡುಪಿ ಇಲ್ಲಿನ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್ , ಧ.ಗ್ರಾ ಯೋಜನೆಯ ತಾಲೂಕು ಯೋಜನಾಧಿಕಾರಿ ಉಮೇಶ ಶೆಟ್ಟಿ ಎಚ್., ಗೆಳೆಯರ ಬಳಗ (ರಿ) ಆನಗಳ್ಳಿ ಇದರ ಅಧ್ಯಕ್ಷರಾದ ಗಣೇಶ್ ಕೆ ಕಾಂಚನ್, ಅನಗಳ್ಳಿ ಬೀಟ್ ಪೊಲೀಸ್ ಹಸನ್, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಸ್ರೂರು ಇಲ್ಲಿನ ಆರೋಗ್ಯ ಸಹಾಯಕಿ ಶೃತಿ, ಆನಗಳ್ಳಿ ಒಕ್ಕೂಟದ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ಹೇರಿಕುದ್ರು ಒಕ್ಕೂಟ ಒಕ್ಕೂಟದ ಅಧ್ಯಕ್ಷ ಸತೀಶ್ ಪೂಜಾರಿ ಉಪಸ್ಥಿತರಿದ್ದರು.

ಜ್ಞಾನವಿಕಾಸ ತಾಲೂಕು ಸಮನ್ವಯಾಧಿಕಾರಿ ರೇಣುಕಾ ಕೊಡಪದವು ಕಾರ್ಯಕ್ರಮವನ್ನು ನಿರೂಪಿಸಿದರು. ಆನಗಳ್ಳಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಗುಲಾಬಿ ಸ್ವಾಗತಿಸಿದರು. ಬಸ್ರೂರು ವಲಯದ ಮೇಲ್ವಿಚಾರಕಿ ಶಕುಂತಲಾ ವಂದಿಸಿದರು. ಜ್ಞಾನವಿಕಾಸ ಕೇಂದ್ರದ ಸದಸ್ಯರು, ಆನಗಳ್ಳಿ ಕಾರ್ಯಕ್ಷೇತ್ರದ ಸ್ವ – ಸಹಾಯ ಹಾಗೂ ಪ್ರಗತಿಬಂಧು ಒಕ್ಕೂಟದ ಸದಸ್ಯರು, ಆನಗಳ್ಳಿ ಗ್ರಾಮದ ಜನತೆ ಆರೋಗ್ಯ ತಪಾಸಣಾ ಶಿಬಿರದಲ್ಲಿ ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ ಪಾರ್ಶ್ವವಾಯು, ಸಂಧಿವಾತ, ಬೆನ್ನುಹುರಿ ಮತ್ತು ಕುತ್ತಿಗೆಯ ನರದ ತೊಂದರೆ, ಆಮ್ಲಪಿತ್ತ ಮತ್ತು ಕರುಳಿನ ಸಂಬಂಧಿ ಕಾಯಿಲೆ, ಚರ್ಮರೋಗ, ಸೋರಿಯಾಸಿಸ್, ಪೈಲ್ಸ್, ಪಿಸ್ತುಲಾ, ಸೈನಸ್, ಸ್ತ್ರೀ ರೋಗ, ಪ್ರಸೂತಿ ಸಂಬಂಧಿ ಕಾಯಿಲೆಗಳು, ಬಂಜೆತನ, ಗರ್ಭಸಂಸ್ಕಾರ, ಬಾಲ ರೋಗ (ಮಕ್ಕಳ ಚಿಕಿತ್ಸೆ) ಮನೋರೋಗ, ಅಸ್ತಮ ಮತ್ತು ಅಲರ್ಜಿ ಸಂಬಂಧಿ ಕಾಯಿಲೆ, ಶಿರ ಶೂಲ, ಕಣ್ಣು, ಕಣ್ಣಿನ ಪೊರೆಯ ತೊಂದರೆ, ಕಿವಿ, ಮೂಗು, ಗಂಟಲು ಸಮಸ್ಯೆಗಳು, ಮುಖದ ತ್ವಚೆ, ಸೌಂದರ್ಯ, ಸ್ವಾಸ್ಥ್ಯ ರಕ್ಷಣೆ ಬಗ್ಗೆ, ಬೊಜ್ಜುತನ, ಥೈರಾಯಿಡ್ ಖಾಯಿಲೆ, ಮಧುಮೇಹ ತಪಾಸಣೆ, ಉದ್ವೇಗ, ಖಿನ್ನತೆ, ನಿದ್ರಾಹೀನತೆ, ಗೀಳುರೋಗ, ಮದ್ಯ ಮತ್ತು ಮಾದಕ ವ್ಯಸನಜನ್ಯರೋಗ, ಮಾನಸಿಕ ಒತ್ತಡ, ಪಂಚಕರ್ಮ ಚಿಕಿತ್ಸೆಗಳ ಬಗ್ಗೆ ಮಾಹಿತಿಯೊಂದಿಗೆ ಎಲ್ಲಾ ರೋಗಗಳ ಉಚಿತ ತಪಾಸಣೆ ಮತ್ತು ಔಷಧ, ಹೃದ್ರೋಗ, ಮಾನಸಿಕ ತೊಂದರೆ ಹಾಗೂ ಮಹಿಳೆ ಮತ್ತು ಮಕ್ಕಳ ರೋಗಗಳ ಪ್ರತಿಬಂಧಕ ಉಪಾಯಗಳ ಬಗ್ಗೆ ವಿಶೇಷ ಮಾಹಿತಿ ನೀಡಲಾಗುತ್ತದೆ. ಈ ಶಿಬಿರದಲ್ಲಿ ಅಗತ್ಯವಿರುವ ಶಿಬಿರಾರ್ಥಿಗಳಿಗೆ ಇಸಿಜಿ, ಮೂಳೆ, ಖನಿಜ ಸಾಂದ್ರತೆ ಹಾಗೂ ಮಧುಮೇಹದ ರಕ್ತ ತಪಾಸಣೆಯನ್ನು ನಡೆಸಲಾಯಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!