spot_img
Wednesday, March 25, 2026
spot_img

ಎಲ್ಲಾ ಆಡಳಿತ ವ್ಯವಸ್ಥೆ ಇದ್ದರೂ ಬೈಂದೂರು ಪರಿಪೂರ್ಣ ತಾ.ಪಂ.ಆಗದ ಬಗ್ಗೆ ಅಸಮಾಧಾನ

ಬೈಂದೂರು ತಾ.ಪಂ.3ನೇ ಸಾಮಾನ್ಯ ಸಭೆ


ಕುಂದಾಪುರ, ನ.27: ನೂತನ ಬೈಂದೂರು ತಾ.ಪಂ.ಗೆ ಮೂಲಭೂತ ಸೌಕರ್ಯಗಳ ಕೊರತೆ, ಪಡುವರಿಯ ತಾರಾಪತಿಯಲ್ಲಿ ಒಂದು ತಿಂಗಳಿಂದ ಪಡಿತರ ವಿತರಣೆ ಇಲ್ಲ, ಸೇತುವೆ ಮುರಿದು ಮೂರು ತಿಂಗಳಾದರೂ ತುರ್ತು ಪರ್ಯಾಯ ವ್ಯವಸ್ಥೆ ಆಗಿಲ್ಲ, ಮಾಜಿ ಸೈನಿಕರಿಗೆ ಭೂಮಿ ಗುರುತಿಸುವ ಕೆಲಸವಾಗದ ಬಗ್ಗೆ ಸದಸ್ಯರ ಅಸಮಾಧಾನ, ಅಧಿಕಾರಿಗಳ ಉತ್ತರಕ್ಕೆ ಅತೃಪ್ತಿ ಇವು ಬೈಂದೂರು ತಾ.ಪಂ.ನ 3ನೇ ಸಾಮಾನ್ಯ ಸಭೆಯಲ್ಲಿ ಕಂಡುಬಂದ ಮುಖ್ಯಾಂಶಗಳು.

ಬೈಂದೂರು ತಾ.ಪಂ.ನ 3ನೇ ಸಾಮಾನ್ಯ ಸಭೆ ತಾ.ಪಂ.ಅಧ್ಯಕ್ಷರಾದ ಮಹೇಂದ್ರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಕುಂದಾಪುರ ತಾ.ಪಂ.ಸಭಾಂಗಣದಲ್ಲಿ ನಡೆಯಿತು.

ಬೈಂದೂರು ತಾ.ಪಂ.ನ ಸಾಮಾನ್ಯ ಸಭೆ ಬೈಂದೂರಿನಲ್ಲಿಯೇ ನಡೆಸಬೇಕು ಎನ್ನುವುದು ಸದಸ್ಯರು ಹಾಗೂ ಅಲ್ಲಿನ ಜನರ ಬಯಕೆ. ಆದರೆ ಬೈಂದೂರು ತಾ.ಪಂ.ಗೆ ಪೂರ್ಣ ಪ್ರಮಾಣದ ಅಧಿಕಾರ ಹಸ್ತಾಂತರವಾಗಿಲ್ಲ, ಮೂಲಭೂತ ಸೌಲಭ್ಯಗಳು ಇಲ್ಲ. ಖಾಸಗಿ ಕಲ್ಯಾಣ ಮಂಟಪಗಳಲ್ಲಿ ಸಾಮಾನ್ಯ ಸಭೆ ನಡೆಸುವುದು ತಾ.ಪಂ. ಘನತೆ, ಗೌರವಕ್ಕೆ ಕುಂದು ತರುವಂತಾಹದ್ದು. ತಾ.ಪಂ.ಸಭೆಯ ಗೌಪ್ಯತೆ, ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಅನಿವಾರ್ಯವಾಗಿ ಕುಂದಾಪುರ ತಾ.ಪಂ.ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯುತ್ತಿದೆ ಎಂದು ಸಭೆಯ ಆರಂಭದಲ್ಲಿ ಅಧ್ಯಕ್ಷರಾದ ಮಹೇಂದ್ರ ಪೂಜಾರಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಜಗದೀಶ ದೇವಾಡಿಗ, ತಾ.ಪಂ.ರಚನೆಯಾಗಿ ಇಷ್ಟು ವರ್ಷವಾಯಿತು. ಅಧ್ಯಕ್ಷರ ಆಯ್ಕೆಯಾಗಿ ಮೂರು ತಿಂಗಳು ಆಯಿತು. ಗ್ರಾಮ ಮಟ್ಟದಿಂದ ಕೇಂದ್ರದ ತನಕ ನಿಮ್ಮದೆ ಅಧಿಕಾರವಿದೆ. ಆದರೂ ಕೂಡಾ ಬೈಂದೂರು ತಾ.ಪಂ.ಮಾದರಿಯಾಗಿ ರೂಪುಗೊಳ್ಳದೆ ಇರುವುದು ಹಾಸ್ಯಾಸ್ಪದ. ಅಷ್ಟೇ ಅಲ್ಲ, 15ನೇ ಹಣಕಾಸು ಸಹ ಸಿಗದೇ ಇರುವುದು ದುರಾದೃಷ್ಟಕರ. ಬೈಂದೂರು ತಾ.ಪಂ.ಗೆ ಮೂಲಭೂತ ಸೌಲಭ್ಯ ಒದಗಿಸದೆ ಇರುವುದು ತಾಲೂಕಿನ ಜನತೆಗೆ ಆಗುತ್ತಿರುವ ಅನ್ಯಾಯ. ಪಟ್ಟಣ ಪಂಚಾಯತಿಗೆ ಸಭಾಭವನದ ಬಗ್ಗೆ ಚರ್ಚೆ ಆಗುತ್ತಿರುವ ಸಂದರ್ಭದಲ್ಲಿ ತಾ.ಪಂ.ಪಂಚಾಯತ್ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಅನುಮಾನ ಕಾಡುತ್ತಿದೆ ಎಂದ ಅವರು, ಅದೇ ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೆ ನಾವು ಹೋರಾಟ ಮಾಡಿ, ಸೌಲಭ್ಯಗಳನ್ನು ತರುವ ಕೆಲಸ ಮಾಡುತ್ತಿದ್ದೇವು ಎಂದು ತೀಕ್ಷ್ಣವಾಗಿ ನುಡಿದರು.

ಮಹೇಂದ್ರ ಪೂಜಾರಿ ಮಾತನಾಡಿ, 15ನೇ ಹಣಕಾಸು ಯೋಜನೆಯ ಹಣ ಬಿಡುಗಡೆಯ ಬಗ್ಗೆ ನಾವು ಶಕ್ತಿಮೀರಿ ಪ್ರಯತ್ನ ಮಾಡಿದ್ದೇವೆ. ತಾ.ಪಂ.ಸಭಾಭವನದ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು. ಇದಕ್ಕೆ ಪುಷ್ಪರಾಜ ಶೆಟ್ಟಿ, ಪ್ರಮೀಳಾ ದೇವಾಡಿಗ ಧ್ವನಿಗೂಡಿಸಿದರು.

ಬೈಂದೂರು ಪಟ್ಟಣ ಪಂಚಾಯತಿ ಆಗಿರುವುದರಿಂದ ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿತರಣೆ ಆಗುತ್ತಿದ್ದ ಪಡಿತರ ಒಂದು ತಿಂಗಳಿಂದ ವಿತರಣೆ ಆಗುತ್ತಿಲ್ಲ ಎಂದು ಸದಸ್ಯೆ ಗಿರಿಜಾ ಖಾರ್ವಿ ದೂರಿದರು. ಇದಕ್ಕೆ ಧ್ವನಿಗೂಡಿಸಿದ ಪ್ರವೀಣ್ ಶೆಟ್ಟಿ ಏಕೆ ಹೀಗಾಗುತ್ತಿದೆ? ಪಟ್ಟಣ ಪಂಚಾಯತಿ ರಚನೆ ಜನರ ಅನುಕೂಲಕ್ಕಾಗಿ. ಆದರೆ ಇದ್ದ ಸೌಲಭ್ಯವನ್ನು ಸ್ತಗಿತಗೊಳಿಸುವುದು ಏಕೆ ಎಂದು ಪ್ರಶ್ನಿಸಿದರು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಮಾತನಾಡಿ, ಈಗ ಆಡಳಿತಾತ್ಮಕ ಸಮಸ್ಯೆಯನ್ನು ಹೇಳಿದರೆ ಒಂದು ತಿಂಗಳ ಪಡಿತರವನ್ನು ಜನರಿಗೆ ಯಾರು ಕೊಡುವುದು? ಎಂದು ಎಂದು ಪ್ರಶ್ನಿಸಿದರು. ಅಧ್ಯಕ್ಷ ಮಹೇಂದ್ರ ಪೂಜಾರಿ ಮಾತನಾಡಿ, ಜನರಿಗೆ ಸಮಸ್ಯೆಯಾಗಬಾರದು. ತಕ್ಷಣ ಪಡಿತರ ನೀಡುವ ಕ್ರಮ ವಹಿಸಿ, ಮತ್ತೆ ಇದು ಪುನರವರ್ತಿಸಬಾರದು. ಅಧಿಕಾರಿಗಳು ಪಡುವರಿ ಪಡಿತರ ವಿತರಣೆಯ ತಾಂತ್ರಿಕ ದೋಷವನ್ನು ನಿವಾರಿಸುವಂತೆ ಸೂಚಿಸಿದರು. ಪುಷ್ಪರಾಜ ಶೆಟ್ಟಿ ಮಾತನಾಡಿ, ತಾಂತ್ರಿಕ ಸಮಸ್ಯೆಯನ್ನು ಅಧಿಕಾರಿಗಳು ಪರಿಹರಿಸಿಕೊಂಡು ಸೋಮವಾರ ಪುನಃ ಪಡಿತರ ನೀಡುವ ಕೆಲಸ ಆಗಬೇಕು ಎಂದರು.

ಉಪಾಧ್ಯಕ್ಷೆ ಮಾಲಿನಿ ಕೆ ಮಾತನಾಡಿ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕಿರು ಸೇತುವೆ ಮುರಿದು ಮೂರು ತಿಂಗಳಾದರೂ ತಾತ್ಕಾಲಿಕ ಸಂಪರ್ಕ ಕಲ್ಪಿಸುವ ಕೆಲಸವಾಗಿಲ್ಲ. ಈ ಬಗ್ಗೆ ಕೂಡ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕುಂದಾಪುರ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಬಗ್ಗೆ ಸದಸ್ಯರ ಪ್ರಶ್ನೆಗೆ ಜಿಲ್ಲಾ ಆರೋಗ್ಯಾಧಿಕಾರಿ ಉತ್ತರಿಸಿದರು. ಅವರ ಉತ್ತರಕ್ಕೆ ತೃಪ್ತರಾಗದ ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿ, ಆಸ್ಪತ್ರೆ ಆವರಣದ ದೇವಸ್ಥಾನದ ವಿಚಾರದಲ್ಲಿ ಪುನಃ ಪರಿಶೀಲನೆ ಆಗಬೇಕು ಎಂದರು.
ಬೈಂದೂರು ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಕೂಡಲೇ ರಚಿಸುವಂತೆ ಅಧ್ಯಕ್ಷರು ತಿಳಿಸಿದರು. ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಡಯಾಲಿಸ್ ಯಂತ್ರಗಳನ್ನು ಮಂಜೂರು ಹಾಗೂ ನಿರ್ವಹಣೆಯ ಬಗ್ಗೆ ಚರ್ಚಿಸಲಾಯಿತು.

ಸೈನಿಕರಿಗೆ ಭೂಮಿ ಕಾದಿರಿಸುವ ಕುರಿತಂತೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡ ಅಧ್ಯಕ್ಷರು ಬೈಂದೂರು ತಾಲೂಕಿನಲ್ಲಿ ಕಂದಾಯ ಇಲಾಖೆಯಲ್ಲಿ ಖಾಲಿ ಸ್ಥಳವೇ ಇಲ್ಲವೇ ಎಂದು ಪ್ರಶ್ನಿಸಿದರು. ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ, ಡಿಸಿ ಮನ್ನಾ ಭೂಮಿ, ಸರ್ಕಾರಿ ಭೂಮಿ ಒತ್ತುವರಿ ಗುರುತಿಸುವ ಕಾರ್ಯ ಆಗಿದೆಯೇ ಎಂದು ಪ್ರಶ್ನಿಸಿದರು.

ಪುಷ್ಪರಾಜ ಶೆಟ್ಟಿ ಮಾತನಾಡಿ ಬೈಂದೂರು ತಾಲೂಕಿನಲ್ಲಿ ಪಿಂಚಣಿ ಆದಾಲತ್ ಮಾಡುವುದಾಗಿ ಕಳೆದ ಸಭೆಯಲ್ಲಿ ತಹಶೀಲ್ದಾರರು ತಿಳಿಸಿದ್ದರು. ಆದಾಲತ್ ಮಾಡುವುದು ಜನಸಾಮಾನ್ಯರಿಗೆ ಸ್ಥಳದಲ್ಲಿ ಅನುಕೂಲ ಮಾಡಿಕೊಡುವ ಸಲುವಾಗಿ. ಅಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಫಲಾನುಭವಿಗಳು ಇರಬೇಕು. ಇವತ್ತು ಪಿಂಚಣಿ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದರು. ವಿಧವಾ ವೇತನ, ಸಂಧ್ಯಾ ಸುರಕ್ಷಾ ಕೆಲವರಿಗೆ 10 ತಿಂಗಳಿಂದ ಬರುತ್ತಿಲ್ಲ ಎಂದು ಮಾಲಿನಿ ಕೆ ದೂರಿದರು.

ತಾ.ಪಂ.ಉಪಾಧ್ಯಕ್ಷೆ ಮಾಲಿನಿ ಕೆ., ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಭಾರತಿ ಉಪಸ್ಥಿತರಿದ್ದರು.

 

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!