spot_img
Friday, March 13, 2026
spot_img

ಹೆಸಕುತ್ತೂರು ಶಾಲೆ ಮುಖ್ಯ ಶಿಕ್ಷಕ ಶೇಖರ ಕುಮಾರ್ ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಕುಂದಾಪುರ: ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಇವರು ಕೊಡಮಾಡುವ 2025-26ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕುಂದಾಪುರ ಶೈಕ್ಷಣಿಕ ವಲಯದ ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶೇಖರ ಕುಮಾರ ಆಯ್ಕೆಯಾಗಿದ್ದಾರೆ.

ಗುಣಾತ್ಮಕ ಶಿಕ್ಷಣ, ಪರಿಣಾಮಕಾರಿ ಭೋದನೆ, ಹೊಸಹೊಸ ಪ್ರಯೋಗಗಳು, ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ವಿನೂತನ ಪ್ರಯತ್ನ, ಪಾಠೇತರ ಚಟುವಟಿಕೆಗಳಿಗೆ ಒತ್ತು, ಶಾಲೆಯ ಸರ್ವಾಂಗೀಣ ಪ್ರಗತಿಯಲ್ಲಿ ಇವರು ತೊಡಗಿಸಿಕೊಂಡಿದ್ದಾರೆ. ಹೆಸಕುತ್ತೂರು ಶಾಲೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಇಲ್ಲಿ ಉಲ್ಲೇಖನೀಯ. ಕನ್ನಡ, ಸಮಾಜ ವಿಜ್ಞಾನ, ಪರಿಸರ ವಿಜ್ಞಾನ ವಿಷಯ ಭೋದಕರಾಗಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದಾರೆ.

ಕಾವಡಿ ಹಿರಿಯ ಪ್ರಾಥಮಿಕ ಶಾಲೆ, ಬಾರಕೂರಿನ ನ್ಯಾಷನಲ್ ಪದವಿಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ, ಕೊಕ್ಕರ್ಣೆಯ ಕುಮುದಾ ಉಮಾಶಂಕರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕ ತರಬೇತಿ ಪಡೆದರು. ಧಾರವಾಡದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪದವಿ ಶಿಕ್ಷಣ ಪಡೆದರು.

1994ರಲ್ಲಿ ಶಿಕ್ಷಕ ವೃತ್ತಿಗೆ ಸೇರಿದ ಇವರು, ಕೆರಾಡಿ, ಹೆಂಗವಳ್ಳಿ,ನೂಜಿ ಪ್ರಾಥಮಿಕ ಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ಬೀಜಾಡಿ ಪಡು ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ 2009ರಲ್ಲಿ ಹೆಸಕುತ್ತೂರು ಶಾಲೆಗೆ ವರ್ಗಾವಣೆಗೊಂಡರು. ಶಿಕ್ಷಣ ಕ್ಷೇತ್ರದಲ್ಲಿ ಒಟ್ಟು 30 ವರ್ಷಗಳ ಸೇವಾವಧಿ ಇವರದ್ದು.

ಮುಖ್ಯ ಶಿಕ್ಷಕರಾಗಿ ಶಾಲೆಯ ಶೈಕ್ಷಣಿಕ ಹಾಗೂ ಬೌತಿಕ ಅಭಿವೃದ್ಧಿಗಾಗಿ ಸರ್ವಾಂಗೀಣ ಪ್ರಯತ್ನ ಮಾಡಿರುವ ಇವರು, ದಾನಿಗಳು, ಇಲಾಖೆ, ಸಾರ್ವಜನಿಕ, ಸಂಘ ಸಂಸ್ತೇಗಳು, ಶಿಕ್ಷಣಾಭಿಮಾನಿಗಳಿಂದ ಕೊಡುಗೆಗಳನ್ನು ಸ್ವೀಕರಿಸಿ ಶಾಲೆಯ ಭೌತಿಕ ಕೊರತೆಗಳನ್ನು ನೀಗಿಸುವ ಪ್ರಮುಖ ಪಾತ್ರ ವಹಿಸಿದ್ದಾರೆ. ಗ್ರಾಮೀಣ ಪ್ರದೇಶದ ಈ ಶಾಲೆಯಲ್ಲಿ ಯಾವುದೇ ಮೂಲಭೂತ ಸೌಕರ್ಯದ ಕೊರತೆ ಇಲ್ಲದಂತೆ ಒಂದು ಮಾದರಿ ಶಾಲೆಯಾಗಿ ರೂಪಿಸಲು ಎಲ್ಲಾ ಸವಾಲುಗಳ ಮಧ್ಯೆ, ಸಹದ್ಯೋಗಿಗಳ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಕಲಿಕಾ ಚಪ್ಪರ, ಮಕ್ಕಳ ಹಸ್ತಪತ್ರಿಕೆ, ಮೊದಲಾದ ವಿನೂತನ ಪ್ರಯೋಗಗಳ ಯಶಸ್ಸಿನ ಹಿಂದೆ ಇವರ ಶ್ರಮವಿದೆ. ಉತ್ತಮ ಆಡಳಿತಗಾರರು ಆಗಿರುವ ಇವರು ಹಿರಿಯ ಮತ್ತು ಪದವೀಧರೇತರ ಮುಖ್ಯೋಪಾಧ್ಯಾಯರ ಸಂಘದ ಮೈಸೂರು ವಿಭಾಗೀಯ ಮಟ್ಟದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಶಾಲೆಯಲ್ಲಿ ಸ್ಪೋಕನ್ ಇಂಗ್ಲೀಷ್ ಹಾಗೂ ಇಂಗ್ಲೀಷ್ ಭಾಷೆ ಲ್ಯಾಬ್ ಸಿದ್ಧ ಪಡಿಸಿ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ, ವಿಷಯವಾರು ತರಗತಿಗಳ ಆಧ್ಯತೆ, ಭೋದನೆಯಲ್ಲಿ ಅತೀ ಹೆಚ್ಚು ಪ್ರಭಾವ ಬೀರಲು ನಾವಿನ್ಯತರ ಪ್ರಯೋಗಗಳು, ಐ.ಸಿ.ಟಿ ಬಳಕೆ, ಸಂತಸದಾಯಕ ಕಲಿಕೆಯ ತಂತ್ರಗಳು ಪರಿಣಾಮಕಾರಿ ಬೋಧನಾ ಕೌಶಲ್ಯ ಅಭಿವೃದ್ಧಿ ಪಡಿಸುವಿಕೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಕರ್ನಾಟಕ ರಾಜ್ಯ ಗುಣಮಟ್ಟ ಮೌಲ್ಯಂಕನ ಮತ್ತು ಅಂಗೀಕರಣ ಸಂಸ್ಥೆ ರಾಜ್ಯ ವ್ಯಾಪಿ ನಡೆಸಿದ ‘ಪೈಲೆಟ್ ಅಧ್ಯಯನ’ದಲ್ಲಿ ‘ಎ’ ಶ್ರೇಣಿ ಮಾನ್ಯತೆ ಪಡೆದ ರಾಜ್ಯದ ಐದು ಶಾಲೆಗಳಲ್ಲಿ ಹೆಸಕುತ್ತೂರು ಶಾಲೆ ನಾಲ್ಕನೆ ಸ್ಥಾನ ಪಡೆದಿರುವುದು ಇಲ್ಲಿ ಗಮನಾರ್ಹ.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!