spot_img
Saturday, February 14, 2026
spot_img

ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ರೂ.1,41 ಕೋಟಿ ನಿವ್ವಳ ಲಾಭ | ಶೇ.15 ಡಿವಿಡೆಂಡ್ ಘೋಷಣೆ

ಕುಂದಾಪುರ, ಆ.23: ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘವು ಕೃಷಿಕರು, ಸದಸ್ಯರ ಏಳಿಗೆಗಾಗಿ ಪಾರದರ್ಶಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ವರದಿ ವರ್ಷದಲ್ಲಿ ಎಲ್ಲರ ಸಹಕಾರದಿಂದ ಗುರಿಮೀರಿದ ಸಾಧನೆ ಮಾಡಿದೆ. ವ್ಯವಸಾಯ ಸೇವಾ ಸಹಕಾರಿ ಸಂಘಗಳು ವ್ಯವಸಾಯಗಾರರ ಪ್ರಗತಿಯಲ್ಲಿ ಕಾರ್ಯನಿರ್ವಹಿಸಬೇಕು ಎನ್ನುವುದನ್ನು ಪ್ರಾಮಾಣಿಕವಾಗಿ ಅನುಷ್ಟಾನಿಸುತ್ತಾ ಬಂದಿರುವ ಸಂಘ ಗೋದಾಮು ನಿರ್ಮಾಣ, ಶಾಖೆಗಳ ಉನ್ನತೀಕರಣಕ್ಕೆ ಒತ್ತು ನೀಡಿದೆ. ವರದಿ ವರ್ಷದಲ್ಲಿ ಸಂಘವು 104,70,65,595.28 ಠೇವಣಾತಿ ಸಂಗ್ರಹಿಸಿದ್ದು ರೂ.1,41,33,561.62 ನಿವ್ವಳ ಲಾಭ ಗಳಿಸಿದೆ. ಈ ಲಾಭವನ್ನು ವಿಂಗಡಿಸಿ ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕೋಟೇಶ್ವರ ಇದರ ಅಧ್ಯಕ್ಷರಾದ ಸದಾನಂದ ಶೆಟ್ಟಿ ಕೆದೂರು ಹೇಳಿದರು.
ಆ.23 ಶನಿವಾರ ಕೋಟೇಶ್ವರದ ಕಮಲಮ್ಮ ಸರ್ವೋತ್ತಮ ಬುಧ್ಯ ಕಲ್ಯಾಣ ಮಂಟಪದಲ್ಲಿ ನಡೆದ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವರದಿ ವರ್ಷದ ಅಂತ್ಯಕ್ಕೆ ಒಟ್ಟು 13142 ಸದಸ್ಯರನ್ನು ಹೊಂದಿದ್ದು, ರೂ.1,80,29,245 ಪಾಲುಹಣವನ್ನು ಹೊಂದಿದೆ. ಸಂಘವು ಕ್ಷೇಮನಿಧಿ ಹಾಗೂ ಇತರ ನಿಧಿಗಳಲ್ಲಿ ಒಟ್ಟು ರೂ.10,92,05,403.27 ನಿಧಿಗಳನ್ನು ಸಂಚಯಿಸಿದೆ. ವರದಿ ವರ್ಷದಲ್ಲಿ ಸಂಘವು 8,34,80,846.53 ಹೆಚ್ಚುವರಿ ಠೇವಣಿ ಸಂಗ್ರಹ ಮಾಡಿ ಶೇ.8.66 ಹೆಚ್ಚಳದ ಸಾಧನೆ ಮಾಡಿದೆ. ಸಂಘವು ಸದಸ್ಯರಿಗೆ ಕಡಿಮೆ ಬಡ್ಡಿಯ ಕೃಷಿ ಸಾಲಗಳ ಅವಶ್ಯಕತೆ ಪೂರೈಸುವ ನಿಟ್ಟಿನಲ್ಲಿ ಹೆಚ್ಚು ರೈತ ಸದಸ್ಯರುಗಳಿಗೆ ಕ್ರಮಿಕ ಪತ್ತಿನ ಯಾದಾಸ್ತು ಮಿತಿ ನಿರ್ಧರಿಸಿಕೊಳ್ಳಲು ಪ್ರೋತ್ಸಾಹಿಸಿ, ಸಾಲ ನೀಡುವ ಸಲುವಾಗಿ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಒಟ್ಟು ರೂ.15,98,84,000 ಆರ್ಥಿಕ ನೆರವನ್ನು ಪಡೆಯಲಾಗಿದೆ ಎಂದರು.
ವರ್ಷಾರಂಭಕ್ಕೆ ರೂ.88,42,27,659 ಸಾಲ ಹೊರಬಾಕಿ ಇದ್ದು, ವರದಿ ಸಾಲಿನಲ್ಲಿ ಸದಸ್ಯರಿಗೆ ರೂ.84,00,81,274 ಸಾಲ ವಿತರಿಸಿದ್ದು, ಸದಸ್ಯರಿಂದ ರೂ.77,25,89,599 ಮರುಪಾವತಿ ಆಗಿದ್ದು ವರ್ಷಾಂತ್ಯಕ್ಕೆ ರೂ.95,17,19,334 ಸಾಲ ಹೊರಬಾಕಿ ಇದ್ದು, ವರದಿ ವರ್ಷದಲ್ಲಿ ಸದಸ್ಯರ ಸಾಲವು 6,74,91,675 ಕೋಟಿ ವೃದ್ಧಿಯಾಗಿದೆ. ಹೆಚ್ಚಳದ ಪ್ರಮಾಣವು ಶೇ.7.63ರಷ್ಟು ಹೆಚ್ಚಳವಾಗಿದೆ ಎಂದರು.
ಸಂಘದ ವ್ಯಾಪ್ತಿಯಲ್ಲಿ ವರ್ಷಾಂತ್ಯಕ್ಕೆ 283 ಸ್ವಸಹಾಯ ಗುಂಪುಗಳಿಂದ ರೂ.83.77 ಲಕ್ಷ ಠೇವಣಿಯಿದ್ದು, 234 ಸ್ವಸಹಾಯ ಸಂಘಗಳಿಂದ 460.78 ಲಕ್ಷ ಸಾಲ ಹೊರಬಾಕಿಯಿರುತ್ತದೆ. ಈ ಪೈಕಿ ಸುಸ್ತಿ ಸಾಲ 24.10 ಲಕ್ಷ ಬಾಕಿ ಇರುತ್ತದೆ ಎಂದರು.
ವರ್ಷಾಂತ್ಯಕ್ಕೆ ವಿವಿಧ ಬ್ಯಾಂಕು ಖಾತೆಗಳಲ್ಲಿ ಒಟ್ಟು ರೂ.1,60,24,732.24 ಇರುತ್ತದೆ. ಸಂಘವು ವಿವಿಧ ಬ್ಯಾಂಕು ಮತ್ತು ಸಂಘ ಸಂಸ್ಥೆಗಳಲ್ಲಿ ಮಾಡಿದ ಧನವಿನಿಯೋಗವು ಒಟ್ಟು ರೂ.27,55,60,000 ಆಗಿದೆ. ಸಂಘವು ಕೋಟೇಶ್ವರ, ಕಾಳಾವರ, ಕೆದೂರು ಹಾಗೂ ತೆಕ್ಕಟ್ಟೆ ಗ್ರಾಮಗಳಲ್ಲಿ ಸ್ವಂತ ಆಸ್ತಿ ಕಛೇರಿ ಕಟ್ಟಡ ಹಾಗೂ ಗೋದಾಮುಗಳನ್ನು ಹೊಂದಿದ್ದು ವರ್ಷಾಂತ್ಯಕ್ಕೆ ಸಂಘದ ಹೊಂದಿದ ಒಟ್ಟು ಸ್ಥಿರ ಚರಾಸ್ತಿಗಳ ಮೌಲ್ಯ ರೂ.68,09,792.91 ಆಗಿದೆ. ಚರಾಸ್ಥಿಗಳ ಮೌಲ್ಯ ರೂ.80,05,385.41 ಆಗಿದೆ ಎಂದರು.
ಸಂಘವು ಪಡಿತರ ಸಾಮಾಗ್ರಿ ಹಾಗೂ ರಸಗೊಬ್ಬರ ಪೂರೈಸುತ್ತಿದ್ದು ವರ್ಷಾಂತ್ಯಕ್ಕೆ ರೂ.7,55,501.63ರಷ್ಟು ಮ್ಹಾಲು ದಾಸ್ತಾನು ಹೊಂದಿದ್ದು ರೂ.20,02,762.50 ಮಾರಾಟ ಆದಾಯ ಬಂದಿದ್ದು 18,51,121.89 ಮಾರಾಟ ವೆಚ್ಚ ಮಾಡಿ ರೂ.5,57,909.89 ವ್ಯಾಪಾರ ಲಾಭಗಳಿಸಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿಶ್ವೇಶ್ವರ ಐತಾಳ್ ವಾರ್ಷಿಕ ವರದಿ ಮಂಡಿಸಿದರು.
ಸಂಘದ ಉಪಾಧ್ಯಕ್ಷರಾದ ಗೋಪಾಲ ಪೂಜಾರಿ ಕುಂಭಾಶಿ, ನಿರ್ದೇಶಕರಾದ ಮೋಹನದಾಸ ಶೆಟ್ಟಿ, ಮಲ್ಯಾಡಿ-ತೆಕ್ಕಟ್ಟೆ, ಅಶೋಕ್ ಪೂಜಾರಿ ಬೀಜಾಡಿ, ಶರತ್ ಕುಮಾರ್ ಹೆಗ್ಡೆ ಶಾನಾಡಿ-ಕೆದೂರು, ಗೋಪಾಲ ಶೆಟ್ಟಿ ಹೆಚ್.ಕೊರ್ಗಿ, ನವೀನ್ ಕುಮಾರ್ ಹೆಗ್ಡೆ ಶಾನಾಡಿ-ಕೆದೂರು, ಭರತ್ ಕುಮಾರ್ ಶೆಟ್ಟಿ ಕಾಳಾವರ, ರಮೇಶ ಸುವರ್ಣ ಬೀಜಾಡಿ, ಶ್ರೀಮತಿ ಆಶಾಲತಾ ಶೆಟ್ಟಿ ವಕ್ವಾಡಿ, ಶ್ರೀಮತಿ ಸುಶೀಲ ಕೋಟೇಶ್ವರ, ಸುರೇಶ ಕೆ.ವಿ ಕಾಳಾವರ, ಶ್ರೀಮತಿ ಚಿಕ್ಕು ಅಸೋಡು, ವೃತ್ತಿಪರ ನಿರ್ದೇಶಕರಾದ ಶ್ರೀಮತಿ ಅಶ್ವಿನಿ ಶೆಟ್ಟಿ, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಸಂದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದ.ಕ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಇದರ ಆಡಳಿತ ನಿರ್ದೇಶಕರಾಗಿ ಚುನಾಯಿತರಾದ ಸಂಘದ ಅಧ್ಯಕ್ಷರಾದ ಸದಾನಂದ ಶೆಟ್ಟಿ ಕೆದೂರು, ಬೀಜಾಡಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ನಿರ್ದೇಶಕರಾದ ಅಶೋಕ ಪೂಜಾರಿ ಬೀಜಾಡಿ, ಉಡುಪಿಯ ಪ್ರಿಯದರ್ಶಿನಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ ಆಯ್ಕೆಯಾದ ಸಂಘದ ನಿರ್ದೇಶಕ ಭರತ್ ಕುಮಾರ್ ಶೆಟ್ಟಿ ಕಾಳಾವರ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಸಂಘದ ಕಾರ್ಯವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯುಸಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಅಭಿನಂದಿಸಲಾಯಿತು. ಸಂಘದ ಸಿಬ್ಬಂದಿ ರಾಜಶೇಖರ ಶೆಟ್ಟಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.
ಇತ್ತೀಚೆಗೆ ನಿಧನರಾದ ಸಂಘದ ತೆಕ್ಕಟ್ಟೆ ಶಾಖೆಯ ಶಾಖಾಧಿಕಾರಿ ವಾಸು  ದೇವಾಡಿಗ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಸಂಘದ ನಿರ್ದೇಶಕರಾದ ಶರತ್ ಕುಮಾರ್ ಹೆಗ್ಡೆ ಶಾನಾಡಿ ಸ್ವಾಗತಿಸಿದರು. ನಿರ್ದೇಶಕ ಮೋಹನದಾಸ ಶೆಟ್ಟಿ ಮಲ್ಯಾಡಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!