spot_img
Saturday, February 14, 2026
spot_img

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ : 76 ಲಕ್ಷ ನಿವ್ವಳ ಲಾಭ| ಶೇ.13.5 ಡಿವಿಡೆಂಡ್ ಘೋಷಣೆ

ಕುಂದಾಪುರ: ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘವು ರೈತಾಪಿ ಸದಸ್ಯರಿಗೆ ಸಾಲಸೌಲಭ್ಯ ಒದಗಿಸುತ್ತಾ, ಅವರ ಅವಶ್ಯತೆಗಳನ್ನು ಸ್ಪಂದಿಸುವ ಕೆಲಸ ಮಾಡುತ್ತಿದ್ದು ಆರ್ಥಿಕ ವರ್ಷದಲ್ಲಿ ಪ್ರಗತಿಯ ಪಥದಲ್ಲಿ ಮುನ್ನೆಡೆಯುತ್ತಿದೆ. ವರದಿ ವರ್ಷದ ಅಂತ್ಯಕ್ಕೆ ರೂ.38,99,58,237 ಠೇವಣಾತಿ ಸಂಗ್ರಹಿಸಿದೆ. ಸಂಘವು ಆಡಿಟ್‍ನಲ್ಲಿ ‘ಎ’ ವರ್ಗೀಕರಣಗೊಂಡಿದ್ದು, ವರ್ಷಾಂತ್ಯಕ್ಕೆ ಸಂಘವು ರೂ.76,51,847 ನಿವ್ವಳ ಲಾಭ ಗಳಿಸಿದೆ. ಇದರಲ್ಲಿ ಸದಸ್ಯರ ಪಾಲುಬಂಡವಾಳದ ಮೇಲೆ ಶೇ.13.50 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಎಂ.ಮಹೇಶ ಹೆಗ್ಡೆ ಹೇಳಿದರು.
ಅವರು, ಬಿದ್ಕಲ್‍ಕಟ್ಟೆಯ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ನಡೆದ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
1922ರಲ್ಲಿ ಸ್ಥಾಪನೆಯಾಗಿ 2011ರಿಂದ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಬಿದ್ಕಲ್‍ಕಟ್ಟೆಯಾಗಿ ಪರಿವರ್ತನೆಗೊಂಡ ಈ ಸಂಘವು ಮೊಳಹಳ್ಳಿ, ಹಾರ್ದಳ್ಳಿ-ಮಂಡಳ್ಳಿ, ಹಳ್ಳಾಡಿ-ಹರ್ಕಾಡಿ, ಯಡಾಡಿ-ಮತ್ಯಾಡಿ, ಹೊಂಬಾಡಿ-ಮಂಡಾಡಿ ಮತ್ತು ಹೆಸ್ಕುತ್ತೂರು ಗ್ರಾಮಗಳ ಕಾರ್ಯಕ್ಷೇತ್ರ ಹೊಂದಿದೆ. ಸಂಘವು ಬಿದ್ಕಲ್‍ಕಟ್ಟೆಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿ, ಹುಣ್ಸೆಮಕ್ಕಿ, ಹಳ್ಳಾಡಿ, ಮೊಳಹಳ್ಳಿಯಲ್ಲಿ ಶಾಖೆಗಳನ್ನು ಹೊಂದಿದೆ. ಯಡಾಡಿ-ಮತ್ಯಾಡಿ, ಮೊಳಹಳ್ಳಿ, ಹಳ್ಳಾಡಿ, ಬಿದ್ಕಲ್‍ಕಟ್ಟೆಗಳಲ್ಲಿ ಮಾರಾಟ ವಿಭಾಗವನ್ನು ಹೊಂದಿದೆ ಎಂದರು.
ಸಂಘದಲ್ಲಿ ವರದಿ ವರ್ಷದ ಅಂತ್ಯಕ್ಕೆ ಒಟ್ಟು 7717 ಸದಸ್ಯರಿದ್ದು, ರೂ.2,11,46,241 ಪಾಲುಬಂಡವಾಳವನ್ನು ಹೊಂದಿದೆ. ಸಂಘದ ಸದಸ್ಯರ ಸಹಕಾರದಿಂದ ಠೇವಣಿ ಸಂಗ್ರಹ ಕಳೆದ ವರ್ಷಕ್ಕಿಂತ ಶೇ.18.35 ಹೆಚ್ಚಳವಾಗಿದೆ ಸಾಲ ನೀಡುವಿಕೆ ಹಾಗೂ ಮುಂಗಡದಲ್ಲೂ ಹೆಚ್ಚಳ ಸಾಧಿಸಲಾಗಿದೆ ಎಂದರು.
ವರ್ಷಾರಂಭಕ್ಕೆ ರೂ 46,98,88,892.90 ಸಾಲ ಹೊರಬಾಕಿ ಇದ್ದು ವರ್ಷಾಂತ್ಯಕ್ಕೆ ರೂ. 55,05,85,790.98 ಹೊರಬಾಕಿ ಇದ್ದು ವರದಿ ಸಾಲಿನಲ್ಲಿ ರೂ. 8,06,96,898.08 ವೃದ್ಧಿಯಾಗಿದೆ. ಹೆಚ್ಚಳದ ಪ್ರಮಾಣವು ಶೇಕಡ 17.17ರಷ್ಟಾಗಿರುತ್ತದೆ. ವರದಿ ವರ್ಷದಲ್ಲಿ ಶೇ. 98.87ರಷ್ಟು ಸಾಲವನ್ನು ಸದಸ್ಯರು ಮರುಪಾವತಿ ಮಾಡಿದ್ದಾರೆ. ಹೊರಬಾಕಿ ಸಾಲದ ಪೈಕಿ ರೂ 54,78,062.60 ವಾಯಿದೆ ದಾಟಿದ ಸಾಲವಾಗಿರುತ್ತದೆ. ಸುಸ್ತಿ ಸಾಲದ ಪ್ರಮಾಣವು ಹಿಂದಿನ ಸಾಲಿನಲ್ಲಿ ಶೇಕಡ 0.93ರಷ್ಟಿದ್ದು, ವರದಿ ಸಾಲಿನಲ್ಲಿ ಶೇಕಡ 1.13 ಆಗಿರುತ್ತದೆ ಎಂದರು.
ಸಂಘವು ತನ್ನ ಸದಸ್ಯರಿಗೆ ಕಡಿಮೆ ಬಡ್ಡಿಯ ಕೃಷಿ ಸಾಲಗಳ ಅವಶ್ಯಕತೆ ಪೂರೈಸಲು ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ವರದಿ ವರ್ಷದ ಅಂತ್ಯಕ್ಕೆ ರೂ.16,82,12,600 ಸಾಲವನ್ನು ಪಡೆಯಲಾಗಿದೆ. ಸಂಘವು ಕೇಂದ್ರ ಸಹಕಾರಿ ಬ್ಯಾಂಕು ಮತ್ತು ಇತರ ಸಂಘಗಳಲ್ಲಿ ಠೇವಣಿಯಾಗಿ ರೂ. 14,67,78,122 ಕ್ಷೇಮನಿಧಿ ಮತ್ತು ಇತರ ನಿಧಿಗಳಲ್ಲಿ ರೂ.2,64,30,833.82 ಮತ್ತು ಷೇರುಗಳ ರೂಪದಲ್ಲಿ ರೂ.91,74,000 ಒಟ್ಟು ರೂ.18,23,82,955.82 ವಿನಿಯೋಗಿಸಲಾಗಿದೆ . ವರದಿ ವರ್ಷದ ಅಂತ್ಯಕ್ಕೆ ಸಂಘವು ರೂ.1,63,09,829.94 ಮೌಲ್ಯದ ಸ್ಥಿರ ಆಸ್ತಿಗಳು, ಮತ್ತು 77,03,493.94 ಮೌಲ್ಯದ ಚರ ಆಸ್ತಿಗಳನ್ನು ಹೊಂದಿದೆ ಎಂದರು.
ಸಂಘದ ವ್ಯಾಪಾರ ವಹಿವಾಟು ದಾಸ್ತಾನು ರೂ.1,43,191.96 ಇದ್ದು ವರದಿ ಸಾಲಿನಲ್ಲಿ ರೂ.10,24,307.17 ವ್ಯಾಪಾರ ಲಾಭಗಳಿಸಿದೆ. ಸಂಘದಲ್ಲಿ 157 ಸ್ವಸಹಾಯ ಗುಂಪುಗಳ ಖಾತೆಗಳಿದ್ದು, ಒಟ್ಟು ಗುಂಪುಗಳಿಂದ ರೂ.28,95,480.60 ಉಳಿತಾಯದ ಮೊತ್ತವಿರುತ್ತದೆ. ಒಟ್ಟು ರೂ.2,28,63,051 ರೂ ಸಾಲ ಹೊರಬಾಕಿ ಇರುತ್ತದೆ. ವರದಿ ವರ್ಷದಲ್ಲಿ ಸಂಘಕ್ಕೆ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ಲಭಿಸಿರುತ್ತದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾರ್ವತಿ ಎಂ ಅವರು ವಾರ್ಷಿಕ ವರದಿ ಮಂಡಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸಿ.ಜಗನ್ನಾಥ ಶೆಟ್ಟಿ ಚಿಟ್ಟಬೈಲು, ನಿರ್ದೇಶಕರಾದ ಹೆಚ್.ಹರಿಪ್ರಸಾದ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಲವಕರ ಶೆಟ್ಟಿ, ಅನಿಲಕುಮಾರ ಶೆಟ್ಟಿ, ಇಂದಿರಾ ಯು.ಶೆಟ್ಟಿ, ವಾಣಿ ಆರ್.ಶೆಟ್ಟಿ, ಚೈತ್ರಾ ಅಡಪ, ದಿನೇಶ ಮೊಗವೀರ, ಉಮೇಶ ಶೆಟ್ಟಿ, ಗಣೇಶ ಬಿ., ಗಿರೀಶ್, ವೃತ್ತಿಪರ ನಿರ್ದೇಶಕರಾದ ಚಂದ್ರ ಕಾಂಚನ್, ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ವಲಯ ಮೇಲ್ವಿಚಾರಕ ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ವ್ಯಾಪ್ತಿಯಲ್ಲಿ ಸಾಧನೆ ಮಾಡಿದ ಸಾಧಕರಾದ ವೈದ್ಯಾಧಿಕಾರಿ ಡಾ.ರಾಘವೇಂದ್ರ ಹೆಬ್ಬಾರ್, ಆರೋಗ್ಯ ಸುರಕ್ಷಾಧಿಕಾರಿ ಸರಸ್ವತಿ ವಿ.ಪಟಗಾರ್, ಪ್ರಥಮದರ್ಜೆ ಆರೋಗ್ಯ ಸಹಾಯಕ ಸುಭಾಶ್ಚಂದ್ರ, ಪತ್ರಕರ್ತ ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರನ್ನು ಸನ್ಮಾನಿಸಲಾಯಿತು. ಡಾ.ರಾಘವೇಂದ್ರ ಹೆಬ್ಬಾರ್ ಸನ್ಮಾನಕ್ಕೆ ಪ್ರತ್ಯುತ್ತರ ನೀಡಿದರು.
2024-25ನೇ ಶೈಕ್ಷಣಿಕ ಸಾಲಿನಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಸಂಘದ ಅಭಿವೃದ್ಧಿ, ಕೃಷಿಕರ ವಿಚಾರದಲ್ಲಿ ಚರ್ಚೆ ನಡೆಯಿತು.
ಸಂಘದ ಉಪಾಧ್ಯಕ್ಷರಾದ ಸಿ.ಜಗನ್ನಾಥ ಶೆಟ್ಟಿ ಚಿಟ್ಟೆಬೈಲು ಸ್ವಾಗತಿಸಿದರು. ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!