spot_img
Friday, April 3, 2026
spot_img

ಎಸ್.ಎಸ್.ಎಲ್.ಸಿ ಅಂಕ ಮಾನದಂಡವನ್ನು ಐವತ್ತಕ್ಕೆ ಏರಿಸಬೇಕು-ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು

ಕುಂದಾಪುರ: ನಾವೆಲ್ಲ ಈಗ ನೆಲೆಸಿರುವ ಪರಶುರಾಮ ಸೃಷ್ಠಿ ಎಂದು ಕರೆಯುವ ಈ ಭೂ ಪ್ರದೇಶ ಓರ್ವ ಬ್ರಾಹ್ಮಣನಾದ ಪರಶುರಾಮನಿಂದ ನಮಗೆ ದೊರೆತ ಭಿಕ್ಷೆ. ಆದರೆ ಇಂದು ಮೀಸಲಾತಿ ಇತ್ಯಾದಿ ಸರ್ಕಾರಿ ನಿಯಮಾವಳಿಗಳಿಂದ ಬ್ರಾಹ್ಮಣರಿಗೇ ಜೀವನ ದುಸ್ತರವಾಗಿದೆ. ಎಸ್ ಎಸ್ ಎಲ್ ಸಿ ಯ ಅಂಕ ಮಾನದಂಡಗಳನ್ನು ಸರ್ಕಾರ ೩೦ ಕ್ಕೆ ಇಳಿಸಿದರೆ ಬ್ರಾಹ್ಮಣರಿಗೆ ಎಲ್ಲ ರಂಗಗಳಲ್ಲೂ ಸ್ಪರ್ಧೆ ಹೆಚ್ಚುತ್ತದೆ. ಆದ್ದರಿಂದ ಅದನ್ನು ಸರ್ಕಾರ ೫೦ಅಂಕಗಳಿಗೆ ಏರಿಸಬೇಕು ಎಂದು ಮಾರಣಕಟ್ಟೆಯ ಎಮ್ ಎಸ್ ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಹೇಳಿದರು.

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಾಹ್ಮಣರು ಎಂದೂ ಯಾರಿಗೂ ಮೋಸ ಮಾಡಿಲ್ಲ. ಅವರ ಕರ್ತೃತ್ವ ಶಕ್ತಿಯಿಂದ ವಿಶ್ವದ ಯಾವ ಮೂಲೆಯಲ್ಲೂ ಬ್ರಾಹ್ಮಣರು ಬದುಕು ಕಟ್ಟಿಕೊಳ್ಳಬಲ್ಲರು. ನಾವು ಸಮಾಜದಿಂದ ಬಹಳಷ್ಟು ಪಡೆದಿರುತ್ತೇವೆ. ಆದ್ದರಿಂದ ಪ್ರತಿಯೊಬ್ಬರೂ ಅದರಲ್ಲಿ ಒಂದಂಶವನ್ನಾದರೂ ಸಮಾಜಕ್ಕೆ ನೀಡಬೇಕು ಎಂದವರು ಕರೆ ನೀಡಿದರು. ಮುಂದಿನ ಬಾರಿಯಿಂದ ಪ್ರತಿಭಾ ಪುರಸ್ಕಾರ ಮೊತ್ತವನ್ನು ಹೆಚ್ಚಿಸುವಂತೆ ಸಲಹೆ ಮಾಡಿದ ಅವರು, ತಾವು ಸಹಕರಿಸುವುದಾಗಿ ಭರವಸೆ ನೀಡಿದರು.

ಪರಿಷತ್ ನ ವಿವಿಧ ವಲಯಗಳಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಗರಿಷ್ಠ ಸಾಧನೆ ಮಾಡಿದ ೩೨ ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ತಾಲೂಕು ಪರಿಷತ್ ಅಧ್ಯಕ್ಷ ಕೃಷ್ಣಾನಂದ ಚಾತ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ. ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು. ಪರಿಷತ್ ಗೌರವಾಧ್ಯಕ್ಷ ಶುಭಚಂದ್ರ ಹತ್ವಾರ್, ಉಪಾಧ್ಯಕ್ಷ ಗಣೇಶ್ ಮಯ್ಯ, ಪವಿತ್ರ ಅಡಿಗ, ಯುವ ವಿಪ್ರ ವೇದಿಕೆ ಅಧ್ಯಕ್ಷ ಕೇಶವ ಅಡಿಗ, ಗಣೇಶ್ ರಾವ್, ಮಹಿಳಾ ಘಟಕಾಧ್ಯಕ್ಷೆ ಭಾರ್ಗವಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಜುಳಾ ಹೆಬ್ಬಾರ್ ಪುರಸ್ಕೃತರ ಪಟ್ಟಿ ವಾಚಿಸಿದರು. ಯುಕ್ತಾ ಹೊಳ್ಳ ಪ್ರಾರ್ಥಿಸಿದರು. ಶಾಂತಾ ಗಣೇಶ್ ಮತ್ತು ವಾಣಿಶ್ರೀ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿ, ವಿಪ್ರವಾಣಿ ಪ್ರಧಾನ ಸಂಪಾದಕ ಪ್ರೊ. ಶಂಕರ ರಾವ್ ಕಾಳಾವರ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!