spot_img
Friday, April 3, 2026
spot_img

ಬ್ಲಾಕ್ ಕಾಂಗ್ರೆಸ್ ಕುಂದಾಪುರ: ರಾಜೀವ್ ಗಾಂಧಿ, ಅರಸು ದಿನಾಚರಣೆ

ಕುಂದಾಪುರ: ಉಳುವವನೇ ಹೊಲದ ಒಡೆಯ ಎಂಬ ಘೋಷವಾಕ್ಯದೊಂದಿಗೆ ಜಾರಿಗೆ ತಂದ, ಭೂ ಸುಧಾರಣೆ ಕಾಯಿದೆ ಬಡವರ, ಶೋಷಿತ ಸಮಾಜದ, ಗೇಣಿದಾರರ ಕುಟುಂಬದ ಭವಿಷ್ಯ ಉಜ್ವಲವಾಗಿಸಿತು, ಮಾತ್ರವಲ್ಲದೆ ಪ್ರಧಾನಿ ಇಂದಿರಾಗಾಂಧಿಯವರ ೨೦ ಅಂಶದ ಕಾರ್ಯಕ್ರಮ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸರು, ಕೃಷಿ , ನೀರಾವರಿ ಮತ್ತು ಪ್ರತಿ ಬಡವರ ಮನೆಗೆ ಒಂದು ದೀಪವೆನ್ನುವ ಭಾಗ್ಯಜ್ಯೋತಿ ಯೋಜನೆಗೆ ಒತ್ತು ನೀಡಿದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು ಹೇಳಿದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ರಾಜೀವ ಗಾಂಧಿ ಮತ್ತು ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲಾ ವಕ್ತಾರ ವಿಕಾಸ ಹೆಗ್ಡೆ ಮಾತನಾಡಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಆಧುನಿಕ ಭಾರತದ ರೂವಾರಿ, ವಿಶ್ವದ ಹೊಸ ತಂತ್ರಜ್ಞಾನದ ಆವಿಷ್ಕಾರವನ್ನು, ಭಾರತದಲ್ಲಿ ಅಳವಡಿಸಿ, ದೇಶದಲ್ಲಿ ದೂರಸಂಪರ್ಕದ ಕ್ರಾಂತಿಯಾಗಲು ಮುನ್ನುಡಿ ಹಾಕಿದರು ಎಂದು ಹೇಳಿದರು.

ಸಭೆಯಲ್ಲಿ ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಜಿತ್ ಪೂಜಾರಿ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರಿಗಾರ್, ಐ ಟಿ ಸೆಲ್ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಜಿಲ್ಲಾ ಸೋಷಿಯಲ್ ಮೀಡಿಯಾ ಅಧ್ಯಕ್ಷ ರೋಷನ್ ಶೆಟ್ಟಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುನಾಫ್ ಕೋಡಿ, ಪಂಚಾಯತ್ ಸದಸ್ಯರಾದ ಗೀತಾ ಎಸ್, ವಿಜಯಧರ್ ಕೆವಿ, ಪುರಸಭಾ ಸದಸ್ಯರಾದ ಶ್ರೀಧರ್ ಶೇರಿಗಾರ್, ಪ್ರಭಾವತಿ ಶೆಟ್ಟಿ, ಮಹಮ್ಮದ್ ಅಶ್ವಕ್, ಅಶೋಕ್ ಸುವರ್ಣ, ಶಶಿಧರ ಕೋಟೆ, ಶಶಿ ರಾಜ್ ಎಂ ಪೂಜಾರಿ, ಸದಾನಂದ ಖಾರ್ವಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಜೋಸೆಫ್ ರೆಬೆಲ್ಲೊ, ಗ್ಯಾರೆಂಟಿ ಸಮಿತಿಯ ಸದಸ್ಯೆ ಆಶಾ ಕರ್ವಾಲ್ಲೊ, ಯೋಜನಾ ಪ್ರಾಧಿಕಾರದ ಸದಸ್ಯ ಅಲ್ಫಾಜ್, ಪಕ್ಷದ ಸಕ್ರಿಯ ಸದಸ್ಯರಾದ ರಾಕೇಶ ಶೆಟ್ಟಿ, ಕೆ ಎಸ್ ವಿಜಯ, ವಿವೇಕಾನಂದ ಚರ್ಚ್ ರಸ್ತೆ, ಪ್ರಭಾಕರ ಕಡ್ಗಿಮನೆ, ಕ್ಲಿಫರ್ಡ್ ಡಿಸಿಲ್ವಾ, ಎಡಾಲ್ಫ್ ಡಿಕೋಸ್ಟಾ ಇನ್ನಿತರರು ಉಪಸ್ಥಿತರಿದ್ದರು.

ಅಕ್ರಮ ಸಕ್ರಮ ಸಮಿತಿಯ ಸದಸ್ಯೆ ಜಾನಕಿ ಬಿಲ್ಲವ ಸ್ವಾಗತಿಸಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ ಪ್ರಾಸ್ತಾವಿಕ ಮಾತುಗಳನ್ನಾಡಿ , ನಿರೂಪಿಸಿದರು. ಪುರಸಭಾ ಸದಸ್ಯ ಅಬ್ಬು ಮಹಮ್ಮದ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!