spot_img
Sunday, March 15, 2026
spot_img

ಶ್ರೀ ಲಕ್ಷ್ಮೀ ವೆಂಕಟರಮಣ ಯಕ್ಷಗಾನ ಕಲಾ ಸಂಘ ಶಂಕರಪ್ಪನಕೊಡ್ಲು| ‘ಹೆಜ್ಜೆ ಗೆಜ್ಜೆ’ ದಶಮ ಸಂಭ್ರಮಕ್ಕೆ ಚಾಲನೆ

ಶ್ರೀ ಲಕ್ಷ್ಮೀ ವೆಂಕಟರಮಣ ಯಕ್ಷಗಾನ ಕಲಾ ಸಂಘ ಶ್ರೀ ಕ್ಷೇತ್ರ ಶಂಕರಪ್ಪನಕೊಡ್ಲು, ಕೆಂಚನೂರು ಸತತ 10 ವರ್ಷಗಳಿಂದ ಉಚಿತ ಯಕ್ಷಗಾನ ಹೆಜ್ಜೆ ತರಬೇತಿಯನ್ನು ನೀಡುತ್ತಾ ಬಂದಿದ್ದು ಈ ದಶ ಸಂಭ್ರಮದಲ್ಲಿ ನವೆಂಬರ್ 14 ರಂದು ಬಡಗುತಿಟ್ಟಿನ ಯಕ್ಷಗಾನದಲ್ಲಿ ಪ್ರಥಮ ಬಾರಿಗೆ 130 ಮಕ್ಕಳು ಗೆಜ್ಜೆ ಕಟ್ಟಿ ರಂಗ ಪ್ರವೇಶ ಮಾಡಲಿದ್ದಾರೆ.

ದಶಮ ಸಂಭ್ರಮದ ಪ್ರಯುಕ್ತ ದಶ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ನೆಡೆಸಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವೇದಮೂರ್ತಿ ರಾಮಕೃಷ್ಣ ಭಟ್ ಶಾರ್ಕೆ ನೆರವೇರಿಸಿದರು. ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪ್ರದಾನ ಅರ್ಚಕರಾದ ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಗುರುರಾಜ್ ಭಟ್, ಸಂಘದ ಗುರುಗಳಾದ ನವೀನ್ ಕೋಟ, ಸಂಘದ ಮದ್ದಳೆವಾದಕರಾದ ಗಣೇಶ ಶೆಣೈ ಶಿವಪುರ ಹಾಗೂ ಚಂಡೆವಾದಕರಾದ ಭಾಸ್ಕರ್ ಆಚಾರ್ಯ ಕನ್ಯಾನ ಹಾಗೂ ಸಂಘದ ಸಂಯೋಜಕರಾದ ಪ್ರವೀಣ್ ಎಂ ಬಾಳಿಕೆರೆ ಹಾಗೂ ಉಪಸ್ಥಿತರಿದ್ದರು.

ಬಳಿಕ ಸಂಘದ ಸದಸ್ಯರಿಂದ ಶ್ರೀ ಕೃಷ್ಣ ಪಾರಿಜಾತ ಪ್ರಸಂಗದ ಪ್ರದರ್ಶನ ನಡೆಯಿತು.

ಸಂಘದ ದಶಮ ಸಂಭ್ರಮದ ಕಾರ್ಯಕ್ರಮದ ಮುಂದಿನ ಉಚಿತ ದಶ ಯಕ್ಷಗಾನ ಕಾರ್ಯಕ್ರಮಗಳು ಚಿತ್ರಕೂಟ ಚಿತ್ತೂರು, ಚೈತನ್ಯ ವಿಕಲಚೇತನ ಶಾಲೆ ಕುಂದಾಪುರ, ವಾಗ್ಜ್ಯೋತಿ ವಿಕಲಚೇತನ ಶಾಲೆ ಮೂಡುಬಗೆ, ಚೈತನ್ಯ ವೃದ್ಧಾಶ್ರಮ ಕುಂದಾಪುರ, ಮಾನಸಜ್ಯೋತಿ ವಿಕಲಚೇತನ ಶಾಲೆ ಕೋಣಿ, ಹೊಸಬದುಕು ಆಶ್ರಮ ಸಾಲಿಗ್ರಾಮ, ಅಪ್ಪ ಅಮ್ಮ ಆಶ್ರಮ ಬ್ರಹ್ಮಾವರ, ಸ್ಪಂದನ ವಿಕಲಚೇತನ ಶಾಲೆ ಕೊಳಲಗಿರಿ, ಸ್ವರ್ಗ ಆಶ್ರಮ ಕೊಳಲಗಿರಿ, ಸುಮೇಧ ವಿಕಲಚೇತನ ಶಾಲೆ ನೀಲಾವರ ಇಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ರಾಜ್ ಬ್ರದರ್ಸ್ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

ನವೀನ್ ಕೋಟ ನಿರ್ದೇಶನ, ಪ್ರವೀಣ್ ಎಂ.ಬಾಳಿಕೆರೆ ಸಂಯೋಜನೆ ಮಾಡುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!