spot_img
Sunday, March 15, 2026
spot_img

ಮಣಿಪಾಲ ಎಂ.ಐ.ಟಿ.: ಪ್ರೊ ಎಸ್.ವಿ ಉದಯ ಕುಮಾರ್ ಶೆಟ್ಟಿಯವರಿಗೆ ಬೀಳ್ಕೊಡುಗೆ

ಮಣಿಪಾಲ: ಸುದೀರ್ಘ 37 ವರ್ಷಗಳ ಮಣಿಪಾಲ ಎಂ.ಐ.ಟಿ ಕಾಲೇಜಿನ ಮೆಕ್ಯಾನಿಕಲ್ ಮತ್ತು ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ ಎಸ್.ವಿ ಉದಯಕುಮಾರ್ ಶೆಟ್ಟಿಯವರನ್ನು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾದ ಅರುಣಾಚಲ ಚಂದಾವರ ಅವರ ಅದ್ಯಕ್ಷತೆಯಲ್ಲಿ ಕಾಲೇಜು ಸೆಮಿನಾರ್ ಹಾಲ್ ನಲ್ಲಿ ನೆರವೇರಿತು.

ಅರುಣಾಚಲ ಅವರು ನಿವೃತ್ತರ ಸುದೀರ್ಘ ಸೇವೆಯನ್ನು ಮತ್ತು ವಿದ್ಯಾರ್ಥಿಗಳೊಂದಿಗೆ ಅವರ ಬಾಂಧವ್ಯವನ್ನು ಸ್ಮರಿಸಿದರು. ಹಿರಿಯ ಪ್ರಾಧ್ಯಾಪಕರಾದ ಡಾ.ಸತ್ಯ ಶಂಕರ ಶರ್ಮಾ, ಹಾಗೂ ಡಾ.ಶ್ರೀಹರಿ ಉಪಾದ್ಯಾಯ ಅವರು ನಿವೃತ್ತರ ಸ್ನೇಹಮಯ ವ್ಯಕ್ತಿತ್ವವನ್ನು ಕೊಂಡಾಡಿದರು. ಡಾ.ರವಿರಾಜ್ ಶೆಟ್ಟಿ ಯವರು ನಿವೃತ್ತರೊಂದಿಗಿನ ಉತ್ತಮ ಗೆಳೆತನವನ್ನು ನೆನಪಿಸಿದರು. ಎಸ್.ವಿ ಉದಯ್ ಕುಮಾರ್ ಶೆಟ್ಟಿಯವರ ವಿದ್ಯಾರ್ಥಿಯಾಗಿದ್ದು ಈಗ ಪ್ರಾಧ್ಯಾಪಕರಾಗಿರುವ ಡಾ.ಅಶ್ವಿನ್ ಕುಮಾರ್ ಮತ್ತು ಡಾ.ಶ್ರೀನಿವಾಸ್ ಶೆಣೈ ತಮ್ಮ ಗುರುಗಳ ಬಗ್ಗೆ ಮಾತನಾಡಿದರು. ಸನ್ಮಾನಿತರಿಗೆ ಶಾಲು ಹೊದಿಸಿ ಶ್ರೀ ದುರ್ಗಾಪರಮೇಶ್ವರಿ ವಿಗ್ರಹ ನೀಡಿ ಸನ್ಮಾನಿಸಲಾಯಿತು. ಡಾ. ಸುಹಾಸ್ ನಾಯಕ್ ಸ್ವಾಗತಿಸಿ, ಡಾ.ಸುಬ್ರಾಯ ಕೃಷ್ಣ ಭಟ್ ವಂದಿಸಿದರು.

ಮೆಕ್ಯಾನಿಕಲ್ ವಿಭಾಗದ ಎಲ್ಲಾ ಶಿಕ್ಷಕೇತರ ಸಿಬ್ಬಂದಿಗಳು ಟೆಕ್ನೆಷಿಯನ್‌ಗಳು, ಆಫೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸನ್ಮಾನಿತರು ಕೃತಜ್ಞತೆ ಸಲ್ಲಿಸಿ ಎಂ .ಐ.ಟಿಯ ಆಡಳಿತ ಮಂಡಳಿ ಮತ್ತು ಸಹೋದ್ಯೋಗಿಗಳ ಸಹಕಾರವನ್ನು ಸ್ಮರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!