spot_img
Wednesday, March 25, 2026
spot_img

ಸರ್ಕಾರಿ ಪ್ರೌಢಶಾಲೆ ಮೆಟ್ಟಿನಹೊಳೆಯಲ್ಲಿ ವಿದ್ಯಾರ್ಥಿ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನೆ

ಬೈಂದೂರು :ಸರಕಾರಿ ಪ್ರೌಢಶಾಲೆ ಮೆಟ್ಟಿನಹೊಳೆ ಇದರ 2025 26 ನೇ ಸಾಲಿನ ವಿದ್ಯಾರ್ಥಿ ಸಂಸತ್ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಹಾಗೂ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಸ್ಕೂಲ್ ಬ್ಯಾಗ್ ವಿತರಣೆ ಕಾರ್ಯಕ್ರಮ  ಜರುಗಿತು

ಕಂಬದಕೋಣಿ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ    ಪ್ರಕಾಶ್ ಚಂದ್ರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಲು ಯುವ ಸಂಸತ್ತು ಪೂರಕವಾಗಲಿದೆ ಎಂದರು ಹಾಗೆಯೇ ಸಂಸ್ಥೆಯ ಬೆಳವಣಿಗೆಯಲ್ಲಿ ಶಿಕ್ಷಕರು ಹಾಗೂ ಊರವರು ನಿರ್ವಹಿಸಿದ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆಯ ಕಚೇರಿಯ ಪೀಠೋಪಕರಣದ ಖರೀದಿ ಬಗ್ಗೆ ಸಹಕಾರಿ ಸಂಘದ ವತಿಯಿಂದ ಚೆಕ್ ವಿತರಿಸಿದರು.

ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಅಧ್ಯಕ್ಷರಾದ ಡಾ. ನಿತ್ಯಾನಂದ ಶೆಟ್ಟಿ ಅಂಪಾರು, ಪ್ರಧಾನ ಕಾರ್ಯದರ್ಶಿ  ಭುಜಂಗ ಶೆಟ್ಟಿ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಿ ವಿದ್ಯಾರ್ಥಿಗಳು ಉತ್ತಮ ಮೌಲ್ಯವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್  ನಿತಿನ್ ಶೆಟ್ಟಿ ಸ್ಕೂಲ್ ಬ್ಯಾಗ್ ನ ಪ್ರಾಯೋಜಕರಾದ ಸ್ಪೀಡ್ ಮೊಬೈಲ್ ಮಾಲಕರಾದ ಲಯನ್ ಈ ಮಹಮ್ಮದ್ ಅಶ್ರಫ್, ವಿಶೇಷ ಆಹ್ವಾನಿತ ಸಂಪನ್ಮೂಲ ಶಿಕ್ಷಕರಾದ  ಸೂಲಿಯಣ್ಣ ಶೆಟ್ಟಿ  ಗೋವಿಂದ ಬಿಲ್ಲವ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶಾರದ ಕುಲಾಲ್ಎಸ್ ಡಿ ಎಂ ಸಿ ಅಧ್ಯಕ್ಷ  ಭಾಸ್ಕರ್ ದೇವಾಡಿಗ ಮುಖ್ಯ ಶಿಕ್ಷಕಿ ಶ್ರೀಮತಿ ಉಮಾ ಬಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುರೇಶ
ಕುಲಾಲ್ ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯ  ಕರುಣಾಕರ ಶೆಟ್ಟಿ ಸ್ವಾಗತಿಸಿದರು.ಸಹ ಶಿಕ್ಷಕ ಶ   ಕ್ರಮ ನಿರೂಪಿಸಿದರು

ಗೌರವ ಶಿಕ್ಷಕಿ  ಅನುಶ್ರೀ ವಂದಿಸಿದರು
ಶಿಕ್ಷಕಿ ಶ್ರೀಮತಿ ಸುನಂದ, ಗೌರವ ಶಿಕ್ಷಕರಾದ ನಮ್ರತಾ ಮತ್ತು ಬೀನಾ ಪಡಿಯಾರ್ ಸಹಕರಿಸಿದರು

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!