spot_img
Saturday, March 7, 2026
spot_img

ಹಾಲಾಡಿ-ಬಿದ್ಕಲಕಟ್ಟೆ ಲಯನ್ಸ್ ಪದಗ್ರಹಣ

ಕುಂದಾಪುರ: ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳಲ್ಲೊಂದಾದ ಲಯನ್ಸ್ ಕ್ಲಬ್ ಸಮಾಜ ಸೇವೆಯ ಉದ್ದೇಶದಿಂದ ಪ್ರಾರಂಭಗೊಂಡಿದ್ದು, ಇಂದು ೨೦೦ಕ್ಕೂ ಹೆಚ್ಚಿನ ದೇಶಗಳಲ್ಲಿ ೪೬೦೦೦ ಕ್ಕೂ ಹೆಚ್ಚಿನ ಶಾಖೆಯನ್ನು ಹೊಂದಿದ್ದು, ೧೩.೫ ಲಕ್ಷಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದ್ದು, ೧೫ ಲಕ್ಷವನ್ನು ತಲುಪುವ ಗುರಿ ಹೊಂದಿದೆ. ಅನೇಕ ಸೇವಾ ಕಾರ್ಯಕ್ರಮಗಳನ್ನು ಲಯನ್ಸ್ ವತಿಯಿಂದ ಆಚರಿಸಲಾಗುತ್ತಿದ್ದು, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಇರುವವರಿಗೆ ಸಮಾಜ ಸೇವೆ ಮಾಡುವುದಕ್ಕೆ ಲಯನ್ಸ್ ಒಂದು ಉತ್ತಮ ಸೇವಾ ಸಂಸ್ಥೆಯಾಗಿದೆ ಎಂದು ಲಯನ್ಸ್ ಇಂಟರ್ ನ್ಯಾಷನಲ್ ನ ಪೂರ್ವ ಜಿಲ್ಲಾ ಗವರ್ನರ್ ಪಿ‌ಎಂಜೆ‌ಎಫ್ ,ಪಿಡಿಜಿ ಲಯನ್.ಕೆ. ಸುರೇಶ್ ಪ್ರಭು ಹೇಳಿದರು.
ಅವರು ಜು.೩೦ರಂದು ಹಾಲಾಡಿ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಹಾಲಾಡಿ – ಬಿದ್ಕಲ್ ಕಟ್ಟೆ ಲಯನ್ಸ್ ಕ್ಲಬ್ ನ ೧೦ ನೇಯ ವರ್ಷದ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರು ಹಾಗೂ ನೂತನ ಸದಸ್ಯರಿಗೆ ಪದಗ್ರಹಣ ನೆರವೇರಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು.

ಪ್ರಾಂತ್ಯ – v ವಲಯ – || ಹಾಲಾಡಿ – ಬಿದ್ಕಲ್ ಕಟ್ಟೆ ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಲಯನ್ ಬಿ. ಚಂದ್ರ ಶೇಖರ ಶೆಟ್ಟಿ, ಮಣಿಗೇರಿ, ಕಾರ್ಯದರ್ಶಿಯಾಗಿ ಲಯನ್ ಜಯಪ್ರಕಾಶ ಶೆಟ್ಟಿ, ಚಿಟ್ಟೆಬೈಲು. ಖಜಾಂಚಿಯಾಗಿ ಲಯನ್ ಗೌತಮ ಶೆಟ್ಟಿ, ಮೊಳಹಳ್ಳಿ ಅಧಿಕಾರ ಸ್ವೀಕರಿಸಿದರು.. ಮಿಷನ್ – ೧.೫ ಯೋಜನೆಯ ಅಡಿಯಲ್ಲಿ ೫ ಹೊಸ ಸದಸ್ಯರನ್ನು ಸೇರಿಸಲಾಯಿತು.

ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಚೀಫ್ ಅಡ್ಮಿನಿಸ್ಟ್ರೇಟರ್ ಲಯನ್ ಅರುಣ್ ಕುಮಾರ್ ಹೆಗ್ಡೆ, ಎಕ್ಸ್ತೆಟೆನ್ಶನ್ ಚೇರ್ ಪರ್ಸನ್ ಲಯನ್ ಉದಯ ಕುಮಾರ್ ಶೆಟ್ಟಿ,ಜಿಲ್ಲಾ ಸಂಪುಟ ಖಜಾಂಚಿ, ಲಯನ್ ಶಶಿಧರ ಶೆಟ್ಟಿ, ರೀಜನ್ ಸೆಕ್ರೆಟರಿ ಲಯನ್ ಏಕನಾಥ ಬೋಳಾರ್, ಪ್ರಾಂತೀಯ ಅಧ್ಯಕ್ಷರಾದ ರಜತ್ ಹೆಗ್ಡೆ ,ಜೋನ್ ಚೇರ್ ಪರ್ಸನ್ ಲಯನೆಸ್ ರಮಾ ಬೋಳಾರ್ ಉಪಸ್ಥಿತರಿದ್ದರು..

ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ೬೨೫ ಅಂಕ ಗಳಿಸಿ ಸಾಧನೆಗೈದ ಹೆ.ರಾ. ಶೆ.ಸ.ಪ.ಪೂ.ಕಾಲೇಜಿನ ವಿದ್ಯಾರ್ಥಿ ಶ್ರೀ ರಾಮ ಶೆಟ್ಟಿಯವರನ್ನು ಗೌರವಿಸಲಾಯಿತು..

ನಿಕಟ ಪೂರ್ವ ಅಧ್ಯಕ್ಷರಾದ ಲಯನ್ ಜಯಪ್ರಕಾಶ ಹೆಗ್ಡೆ ಸ್ವಾಗತಿಸಿದರು.ಲಯನ್ ಹಾಲಾಡಿ ಉದಯ ಶೆಟ್ಟಿ ಅಧ್ಯಕ್ಷರ ಪರಿಚಯ ಮಾಡಿಕೊಟ್ಟರು. ಲಯನ್ ಸೂರ್ಯಪ್ರಕಾಶ ದಾಮ್ಲೆ ಕಾರ್ಯಕ್ರಮವನ್ನು ನಿರೂಪಿಸಿದರು. ನಿಕಟಪೂರ್ವ ಕಾರ್ಯದರ್ಶಿ ಲಯನ್ ಗೌತಮ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!