spot_img
Saturday, March 7, 2026
spot_img

ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ‘ವೈದ್ಯವಾಣಿ’ ಮಾಸಿಕ ಬಿಡುಗಡೆ

ಕುಂದಾಪುರ: ಕುಂದಾಪುರ ತಾಲೂಕು ಆಲೂರು ಕಳಿಯ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ವೈದ್ಯವಾಣಿ ಮಾಸಿಕ ಜು.27ರಂದು ಬಿಡುಗಡೆಗೊಂಡಿತು.

ಜ್ಯೋತಿಷ್ಯರಾದ ದಿನಕರ ಉಡುಪ ಹರವರಿ ಅವರು ವೈದ್ಯವಾಣಿ ಮಾಸಿಕ ಬಿಡುಗಡೆಗೊಳಿಸಿ ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಿಸುವ ಆಯುರ್ವೇದ ಔಷಧದ ಮೇಲೆ ನಂಬಿಕೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ನಿತ್ಯ ಜೀವನಕ್ಕೆ ಆರೋಗ್ಯ ಮಾಹಿತಿಯನ್ನು ಒದಗಿಸುವ ಮಾಸಿಕವನ್ನು ಡಾ.ರಾಜೇಶ್ ಬಾಯರಿ ಯವರು ಹೊರತರುತ್ತಿರುವುದು ಶ್ಲಾಘನೀಯ. ಆಧುನಿಕ ವೈದ್ಯ ಪದ್ದತಿಯಲ್ಲೂ ಔಷಧ ನೀಡುವ ಆಯುರ್ವೇದ ವೈದ್ಯರ ನಡುವೆ ಡಾ.ರಾಜೇಶ್ ಬಾಯರಿ ಕಳೆದ ೧೫ ವರ್ಷಗಳಿಂದ ಆಯುರ್ವೇದ ವೈದ್ಯಪದ್ದತಿಯಲ್ಲೇ ಚಿಕಿತ್ಸೆ ನೀಡುತ್ತಾ ಆಯುರ್ವೇದದಲ್ಲೂ ಅನೇಕ ರೀತಿಯ ಔಷಧಗಳಿವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ದೇಶ ವಿದೇಶಗಳಿಂದ ಆಗಮಿಸುವ ರೋಗಿಗಳಿಗೆ ಚಿಕಿತೆ ನೀಡಿ ಗುಣಪಡಿಸುತ್ತಿದ್ದಾರೆ. ಜನರಿಗೆ ಒಂದಷ್ಟು ಆರೋಗ್ಯ ಮಾಹಿತಿ ಒದಗಿಸಲು ಹೊರತರುತ್ತಿರುವ ಮಾಸಿಕ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.

ಡಾ. ಪ್ರಸನ್ನರವರು ಮಾತನಾಡಿ ಆಯುರ್ವೇದದಲ್ಲಿ ಜನರಿಗೆ ನೀಡಬಹುದಾದ ಸಾಕಷ್ಟು ಮಾಹಿತಿ ಇದೆ. ಚಿಕಿತ್ಸೆಯಲ್ಲೂ ನಾನಾ ವಿಧಗಳಿವೆ. ವೈದ್ಯವಾಣಿ ಮಾಸಿಕದಲ್ಲಿ ಪ್ರತೀ ತಿಂಗಳು ಆ ಎಲ್ಲಾ ಮಾಹಿತಿ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಮುಖ್ಯ ಅತಿಥಿಯಾಗಿ ಉಡುಪಿಮಿತ್ರ ಪತ್ರಿಕೆಯ ಸಂಪಾದಕ ಚಿತ್ತೂರು ಪ್ರಭಾಕರ ಆಚಾರ್ಯ, ಡಾ. ಸುಮಂತ್ ಗೋಯಲ್ ಭಾಗವಹಿಸಿ ಶುಭ ಹಾರೈಸಿದರು. ಮಹಾಬಲ ಬಾಯರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಿತ್ರಕೂಟದ ವೈದ್ಯಕೀಯ ನಿರ್ದೇಶಕ ಡಾ. ರಾಜೇಶ್ ಬಾಯರಿ ಪ್ರಾಸ್ತಾವಿಕವಾಗಿ ಮಾತನಾಡಿ ವೈದ್ಯವಾಣಿ ಮಾಸಿಕವನ್ನು ಆರೋಗ್ಯ ಮಾಹಿತಿಯ ಉದ್ದೇಶದಲ್ಲಿ ಖಾಸಗಿಯಾಗಿ ಇಂಗ್ಲೀಷ್‌ನಲ್ಲಿ ಹೊರತರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೂ ಸಿಗುವ ಉದ್ದೇಶದಲ್ಲಿ ವೈದ್ಯವಾಣಿಯಲ್ಲಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲೂ ಪಸರಿಸಲಾಗುವುದು ಎಂದರು.

ಡಾ. ಅನುಲೇಖ ಬಾಯರಿ ವಂದಿಸಿದರು. ಆರಾಧ್ಯ ಬಾಯರಿ ಕಾರ್ಯಕ್ರಮ ನಿರೂಪಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!