spot_img
Monday, January 19, 2026
spot_img

ರಟ್ಟಾಡಿ: ಕೆಸರುಗದ್ದೆ ಕ್ರೀಡಾ ಕೂಟ ‘ಕೆಸರಾಟ’

ಕುಂದಾಪುರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಟ್ಟಾಡಿ ಇವರ ವತಿಯಿಂದ 30ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ರಟ್ಟಾಡಿ ಬಕ್ಕರ್ಕೆ ಶ್ರೀ ಸತ್ಯನಾರಾಯಣ ರಾವ್ ಅವರ ಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟ ಕೆಸರಾಟ ಅದ್ಧೂರಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ಕುಂದಾಪುರ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿ ಈ ಭಾಗದಲ್ಲಿ ಕಳೆದ ೨೯ ವರುಷಗಳಿಂದ ಸಾರ್ವಜನಿಕ ಗಣೇಶೋತ್ಸವು ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ ನಡೆದು ಬಂದಿದ್ದು ಈ ವರ್ಷ ಹಮ್ಮಿಕೊಂಡ ಕೆಸರುಗದ್ದೆ ಕ್ರೀಡಾಕೂಟ ಮತ್ತುಷ್ಟು ಮೆರುಗು ತಂದಿದೆ ಎಂದರು ಯಾವುದೇ ಜಾತಿ-ಮತ, ಬಡವ-ಶ್ರೀಮಂತ ಎನ್ನುವ ಭೇದ ಭಾವವಿಲ್ಲದೆ ಎಲ್ಲರನ್ನು ಒಂದುಗೂಡಿ ಹಮ್ಮಿಕೊಂಡ ಈ ಕಾರ್ಯಕ್ರಮವು ಯಶಸ್ವಿಯಾಗಲಿ ಹಾಗೂ ಪ್ರತೀ ವರ್ಷವು ನಿರಂತರ ನಡೆಯಲಿ ಎಂದು ಹಾರೈಸಿದರು.

ರಟ್ಟಾಡಿ ಶ್ರೀ ರಟ್ಟೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಆರ್ ನವೀನಚಂದ್ರ ಶೆಟ್ಟಿ ಮಾತನಾಡಿ ಈ ವರ್ಷ ಪ್ರಥಮವಾಗಿ ಹಮ್ಮಿಕೊಂಡ ಕ್ರಿಡಾಕೂಟವು ಮುಂದಿನ ಯುವ ಜನಾಂಗಕ್ಕೆ ನಮ್ಮ ಹಿಂದಿನ ಸಂಪ್ರದಾಯ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತಿಳಿಸುವುದಕ್ಕೆ ಈ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ. ಹಾಗೇಯೇ ಈ ಕಾರ್ಯಕ್ರಮಕ್ಕೆ ಉದಾರವಾಗಿ ಪ್ರೋತ್ಸಾಹಿಸಿದ ದಾನಿಗಳನ್ನು ಸ್ಮರಿಸಿದರು.

ಈ ಕಾರ್ಯಕ್ರಮಕ್ಕೆ ರಘುರಾಮ್ ಶೆಟ್ಟಿ ಹೊಸಬಾರು, ಢಾ ದಿಶಾ ಶೆಟ್ಟಿ ಹೊಸಬಾರು ಸಹಕರಿಸಿದರು.

ಕಾರ್ಯಕ್ರದಲ್ಲಿ ಸಮಿತಿ ಅಧ್ಯಕ್ಷರಾದ ಸುಜನ್ ಕುಮಾರ್ ಶೆಟ್ಟಿ , ಅಮಾಸೆಬೈಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಕುಲಾಲ್, ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಹಾ.ಉ.ಸ. ಸಂಘದ ಅಧ್ಯಕ್ಷರಾದ ಪ್ರಕಾಶ್ ಹೆಗ್ಡೆ, ವ್ಯ.ಸೇ.ಸ.ಸಂಘದ ಅದ್ಯಕ್ಷರಾದ ಸದಾನಂದ ಶೆಟ್ಟಿ, ಹಾಲಾಡಿ ಗಾಂಪಂ ಸದಸ್ಯರಾದ ಜನಾರ್ದನ ಹಾಲಾಡಿ ಮತ್ತು ಗುರುಪ್ರಸಾದ್ ಶೆಟ್ಟಿ, ತೀರ್ಪಗಾರರಾಗಿ ಆಗಮಿಸಿದ ಹೆಂಗವಳ್ಳಿ ಸುಯೋಗ್ ಹೆಗ್ಡೆ ಹಾಗೂ ಅದ್ಯಾಪಕಿಯಾದ ವಿಜಯಲಕ್ಷ್ಮೀ ಭಟ್ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಹೆಗ್ಡೆ ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತಿದ್ದರು. ಸತ್ಯನಾರಾಯಣ ರಾವ್ ಕಾರ್ಯಕ್ರಮ ನಿರೂಪಿಸಿದರು.

ಕ್ರೀಡಾಕೂಟದ ಅಂಗವಾಗಿ ಮಹಿಳೆ ಪುರುಷ ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆ ಹಾಗೂ ಕೋಣಗಳ ಓಟ ನಡೆಯಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!