spot_img
Saturday, March 7, 2026
spot_img

ನಾಗರ ಪಂಚಮಿ ಸಂಭ್ರಮ: ಎಲ್ಲೆಡೆ ನಾಗತನು ಸಮರ್ಪಣೆ

ಕುಂದಾಪುರ: ಮಂಗಳವಾರ ಎಲ್ಲೆಡೆ ನಾಗರ ಪಂಚಮಿ ಸಂಭ್ರಮ. ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿ ಮನೆಮನೆಯ ಹಬ್ಬ. ಕರಾವಳಿಯಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದ್ದು ಮನೆಮನೆಯಲ್ಲೂ ನಾಗಬನಗಳಿವೆ. ಮೂಲ ನಾಗಬನ ಎನ್ನುವ ಭಾವಾನಾತ್ಮಕವಾದ ಸಂಬಂಧ ನಾಗಾರಾಧನೆಯೊಂದಿಗೆ ಕೌಟುಂಬಿಕ ಬಾಂಧವ್ಯಗಳು ಬೆಸೆದುಕೊಂಡಿವೆ. ಆ ಹಿನ್ನೆಲೆಯಲ್ಲಿ ನಾಗರಪಂಚಮಿಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಗುತ್ತಿದೆ.

ಕರಾವಳಿಯಾದ್ಯಂತ ನಾಗರ ಪಂಚಮಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಾಗ ತನು ಅರ್ಪಣೆ ಕೇದಿಗೆ ಹೂವು ಸಮರ್ಪಣೆ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳು ಸಾಂಗವಾಗಿ ಜರುಗಿದವು.

ಮಾರುಕಟ್ಟೆ ದುಬಾರಿ: ನಾಗರ ಪಂಚಮಿ ಪ್ರಯುಕ್ತ ಕೆಂದಾಳೆ ಸೀಯಾಳ, ಬಾಳೆ ಹಣ್ಣು, ಹೂವಿನ ಬೆಲೆ ಗಗನಕ್ಕೇರಿತ್ತು. ಏಲಕ್ಕಿ ಬಾಳೆ ಹಣ್ಣು ಸೋಮವಾರವೇ ಕೊರತೆ ಆಗಿತ್ತು. ಅಲ್ಲಲ್ಲಿ ಕೇದಿಗೆ ಹೂ ಮಾರಾಟ ಜೋರಾಗಿತ್ತು.

ನಾಡಿನ ಪ್ರಸಿದ್ಧ ನಾಗಕ್ಷೇತ್ರಗಳಲ್ಲಿ ಭಕ್ತರ ದಂಡೇ ಹರಿದು ಬಂತು. ಗುಡ್ಡಮ್ಮಾಡಿ, ಕಾಳಾವರ, ತೆಕ್ಕಟ್ಟೆ, ಕಂದಾವರ ಮೊದಲಾದ ಪುರಾಣ ಪ್ರಸಿದ್ಧ ನಾಗಕ್ಷೇತ್ರಗಳು ಭಕ್ತಾದಿಗಳಿಂದ ತುಂಬಿತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!