spot_img
Thursday, April 2, 2026
spot_img

ರತ್ನಗಿರಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ: ಕ್ಷೇತ್ರ ಮಹಾತ್ಮೆ ರಚನೆಗೆ ಚಾಲನೆ

ಕುಂದಾಪುರ: ಹಾಲಾಡಿ, ಕಕ್ಕುಂಜೆ ಹಾಗೂ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಗಡಿಬಾಗದಲ್ಲಿದ್ದು, ಮೂರು ಗ್ರಾಮಕ್ಕೆ ಶಿಖರೋಪಾದಿಯಲ್ಲಿ, ಅತಿ ಎತ್ತರದ ಪ್ರದೇಶದಲ್ಲಿರುವ ಜಮದಗ್ನಿ ಮುನಿ ಕರಾರ್ಚಿತ ರತ್ನಗಿರಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಚರಿತ್ರೆಯನ್ನು ಯಕ್ಷ ರೂಪಕವಾಗಿ ರಚಿಸಲು ಜು.13ರಂದು ಪ್ರಸಂಗಕರ್ತರಾದ ಕೌಲಾಳಿ ಚಂದ್ರಶೇಖರ ಶೆಟ್ಟಿಯವರಿಗೆ, ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ವೇ.ಬ್ರ. ಕಂಬಿಕಲ್ಲು ಶ್ರೀಪತಿ ಭಟ್ ಇವರು ತಾಂಬೂಲವನ್ನು ನೀಡಿದರು.
ಶ್ರೀ ಕ್ಷೇತ್ರವೂ ಅತ್ಯಂತ ಪೌರಾಣಿಕ ಹಿನ್ನಲೆಯನ್ನು ಹೊಂದಿದ್ದು, ಋಷಿ ಮುನಿಗಳ ಕಾಲದಲ್ಲಿ ಎತ್ತರದ ಮರಬು ಕಲ್ಲಿನ ಮೇಲೆ ಶ್ರೀ ಲಕ್ಷ್ಮೀ ಸಹಿತನಾದ ನರಸಿಂಹ ಸ್ವಾಮಿಯೂ ಸ್ವಯಂಭೂ ಲಿಂಗ ಸ್ವರೂಪಿಯಾಗಿ ಇಲ್ಲಿ ಉದ್ಭವನಾಗಿದ್ದು, ಬೇಡಿ ಬಂದ ಭಕ್ತರ ಮನದ ಇಷ್ಟಾರ್ಥವನ್ನು ಈಡೇರಿಸುತ್ತ, ದಿನದಿಂದ ದಿನಕ್ಕೆ ತನ್ನ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿರುವುದು ಇತಿಹಾಸ. ಇಂತಹ ಕ್ಷೇತ್ರದ ಸ್ಥಳ ಪುರಾಣವನ್ನು ಯಕ್ಷಗಾನ ಕ್ಷೇತ್ರ ಮಹಾತ್ಮೆಯ ಮೂಲಕ ಪ್ರಸಾರ ಮಾಡಬೇಕೆಂಬ ಕ್ಷೇತ್ರದ ಭಕ್ತರ ಒತ್ತಾಸೆಯಂತೆ, ಕ್ಷೇತ್ರ ಪುರಾಣವನ್ನು ಆಧರಿಸಿ ಪ್ರಸಂಗ ರಚಿಸಲು ಪ್ರಸಂಗಕರ್ತರಿಗೆ ತಾಂಬೂಲ ನೀಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉದ್ಯಮಿ ಪ್ರಕಾಶ ಶೆಟ್ಟಿ, ಗೈನಾಡಿ. ಖಜಾಂಚಿ ಸುರೇಶ ಭಟ್, ಜಮದಗ್ನಿ, ಸಂತೋಷ ಶೆಟ್ಟಿ ಹಾಲಾಡಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!