spot_img
Thursday, April 2, 2026
spot_img

ಆಸಾಡಿ ಒಡ್ರ್: ಸಾಧಕ ಪುರಸ್ಕಾರಕ್ಕೆ ಸಾಂಸ್ಕೃತಿಕ ಚಿಂತಕಿ ಭಾರತಿ ವಿ.ಮೈಯ್ಯ ಆಯ್ಕೆ

ಕೋಟ: ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಂಯೋಜನೆಯೊಂದಿಗೆ ನಡೆಯಲಿರುವ ನಾಲ್ಕನೇ ವರ್ಷದ “ಆಸಾಡಿ ಒಡ್ರ್” ಸಾಧಕ ಪುರಸ್ಕಾರಕ್ಕೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಮಣೂರು ಭಾರತಿ ವಿಷ್ಣುಮೂರ್ತಿ ಮೈಯ್ಯ ಆಯ್ಕೆಗೊಳಿಸಲಾಗಿದೆ.
ಅಗಸ್ಟ್ 10ರ ಭಾನುವಾರ ಬೆಳಿಗ್ಗೆ 9.ರಿಂದ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ನಡೆಯಲಿರುವ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಹಮ್ಮಿಕೊಳ್ಳಲಿರುವ “ಆಸಾಡಿ ಒಡ್ರ್” ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಿದೆ.
ವಿಶೇಷ ಆಹ್ವಾನಿತರಾಗಿ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಕುಂದಗನ್ನಡ ರವಿ ಬಸ್ರೂರು ಹಾಗೂ ಕುಂದಗನ್ನಡದ ಲೇಖಕಿ ಪೂರ್ಣಿಮಾ ಕಮಲಶಿಲೆ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗ್ರಾಮೀಣ ತಿನಿಸುಗಳು, ಪರಿಕರ ಪ್ರದರ್ಶನ ,ಸ್ಪರ್ಧೆ, ಅನಾಥಾಶ್ರಮಕ್ಕೆ ನೆರವು, ಸ್ನೇಹಕೂಟ ಮಣೂರು ಇವರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!