spot_img
Friday, October 2, 2026
spot_img

ಆತ್ರಾಡಿ ವಿಜಯ ಮಕ್ಕಳಕೂಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷಗಾನ ತಾಳಮದ್ದಳೆ: ಕಲಾವಿದರಿಗೆ ಗೌರವಾರ್ಪಣೆ

ಕುಂದಾಪುರ: ವಂಡ್ಸೆ ಗ್ರಾಮದ ಆತ್ರಾಡಿಯ ವಿಜಯ ಮಕ್ಕಳಕೂಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷ ವಿಜಯ ತೇರು ಶೀರ್ಷಿಕೆಯಲ್ಲಿ ಸುಪ್ರಸಿದ್ಧ ಅರ್ಥಧಾರಿಗಳ ಕೂಡುವಿಕೆಯಲ್ಲಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಾರಥ್ಯದಲ್ಲಿ ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನ ತಾಳಮದ್ದಳೆ ನಡೆಯಿತು.

ಈ ಸಂದರ್ಭದಲ್ಲಿ ಕಲಾವಿದರಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮದ್ದಳೆ-ರಾಘವೇಂದ್ರ ಹೆಗಡೆ ಯಲ್ಲಾಪುರ, ಕೋಟ ಶಿವಾನಂದ, ಅರ್ಥಧಾರಿಗಳಾದ ಜಬ್ಬಾರ್ ಸಮೋ ಸಂಪಾಜೆ, ವಾಸುದೇವ ರಂಗ ಭಟ್, ಮಧೂರು, ಸತೀಶ್ ಶೆಟ್ಟಿ ಮೂಡುಬಗೆ, ಪ್ರಸಾದ್ ಭಟ್ಕಳ, ಮನು ಹಂದಾಡಿ ಅವರನ್ನು ಗೌರವಿಸಲಾಯಿತು.

ನಿವೃತ್ತ ಮುಖ್ಯೋಪಾಧ್ಯಾಯರಾದ ರಾಜೀವ ಶೆಟ್ಟಿ ಬಗ್ವಾಡಿ, ಶಶಿಧರ ಶೆಟ್ಟಿ ವಂಡ್ಸೆ, ನಿರಾಮಯ ಸೊಸೈಟಿ ಅಧ್ಯಕ್ಷರಾದ ಉದಯಕುಮಾರ ಶೆಟ್ಟಿ, ತಾ.ಪಂ ಮಾಜಿ ಸದಸ್ಯ ಉದಯ ಜಿ ಪೂಜಾರಿ, ವಿಜಯ ಮಕ್ಕಳ ಕೂಟ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕರಾದ ಸುಭಾಶ್ಚಂದ್ರ ಶೆಟ್ಟಿ, ಸಂಸ್ಥೆಯ ಮುಖ್ಯೋಪಾಧ್ಯಾಯರಾದ ದೀಪಿಕಾ ಸುಭಾಶ್ ಉಪಸ್ಥಿತರಿದ್ದರು.

ಪ್ರಸಿದ್ಧ ಅರ್ಥಧಾರಿಗಳ ಸಂಗಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಾದ ಅನನ್ಯ, ದಿಶಾಂತ್, ಶನ್ವಿತ್, ಸುರಕ್ಷಾ, ಸೌಖ್ಯ ಭಾಗವಹಿಸುವಿಕೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ ತಾಳಮದ್ದಳೆ ಜರಗಿತು.

ತಾಳಮದ್ದಳೆಯೆಂಬ ಅಪೂರ್ವ ಜ್ಞಾನಯಜ್ಞವನ್ನು ಸಂಸ್ಥೆಯ ವಿದ್ಯಾರ್ಥಿಗಳು ಆಸಕ್ತಿಯಿಂದ ಆಲಿಸಿದರು. ಹಿರಿಯ ಕಲಾವಿದರ ಜೊತೆಯಲ್ಲಿ ಸಂಸ್ಥೆಯ ಆಸಕ್ತ ವಿದ್ಯಾರ್ಥಿ/ನಿಯರು ಕೂಡಾ ಕೆಲವೊಂದು ಸನ್ನಿವೇಶಕ್ಕೆ ಅರ್ಥ ಹೇಳುವ ಮೂಲಕ ಗಮನ ಸಳೆದರು. ಸಂಸ್ಥೆಯ ಸಾಂಸ್ಕೃತಿಕ ವೇದಿಕೆಯಾದ ಕನ್ನಡಮ್ಮನ ಹರಕೆ ಮರೆಯದಿರು ಚಿನ್ನ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಆಂಗ್ಲಮಾಧ್ಯಮ ಶಾಲೆಯಾದರೂ ಅಂಕಗಳಿಕೆಗೆ ಮಾತ್ರ ಸೀಮತವಾಗದೆ ಮಕ್ಕಳ ಸರ್ವಾಂಗೀಣ ಪ್ರಗತಿಯಲ್ಲಿ ಶ್ರಮಿಸುತ್ತಿದೆ. ಯಕ್ಷಗಾನ ತರಬೇತಿಯ ನೀಡಿ ಪ್ರತೀ ವರ್ಷ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ನೀಡುತ್ತಿದೆ. ಇದೇ ಪ್ರಪ್ರಥಮ ಬಾರಿಗೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ತಾಳಮದ್ದಳೆ ಆಯೋಜಿಸಿ ಗಮನ ಸಳೆದಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!