spot_img
Saturday, February 14, 2026
spot_img

ಹಂಗಳೂರು ಲಯನ್ಸ್ ಕ್ಲಬ್: ನೂತನ ಅಧ್ಯಕ್ಷರಾಗಿ ಲಯನ್ ಸಂದೀಪ್ ಶೆಟ್ಟಿ ಅಧಿಕಾರ ಸ್ವೀಕಾರ

ಕುಂದಾಪುರ: ಹಂಗಳೂರು ಲಯನ್ಸ್ ಕ್ಲಬ್‌ನ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಆರ್.ಎನ್.ಶೆಟ್ಟಿ. ಕಲ್ಯಾಣಭವನದ ಎಸ್.ಎಸ್. ಹೆಗ್ಡೆ ಸಭಾ ಭವನದಲ್ಲಿ ಜು.7ರಂದು ನಡೆಯಿತು.

ಲಯನ್ ರೋವನ್ ಡಿಕೋಸ್ತಾ ರ ಅಧ್ಯಕ್ಷತೆಯಲ್ಲಿ ಜರಾಗಿದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಹಂಗಳೂರು ಇದರ ನೂತನ ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ, ಕಾರ್ಯದರ್ಶಿಯಾಗಿ ವಿಲ್ಫ್ರೇಡ್ ಮೆನೆಜಸ್, ಖಜಾಂಚಿಯಾಗಿ ನಿತೇಶ್ ಡಿ’ಕೋಸ್ತ ಹಾಗೂ ಇತರ ಸದಸ್ಯರು ಅಧಿಕಾರ ಸ್ವೀಕರಿಸಿದರು.

ಪದಪ್ರದಾನವನ್ನು ರೋಟರಿ ನಿಕಟಪೂರ್ವ ಜಿಲ್ಲಾ ಗವರ್ನರ್ ೩೧೭ಸಿ ಲಯನ್ ಕೆ. ಸುರೇಶ್ ಅವರು ನೆರವೇರಿಸಿ ಮಾತನಾಡಿ, ಹಂಗಳೂರು ಲಯನ್ಸ್ ಕ್ಲಬ್ ಕುಂದಾಪುರದ ಭಾಗದಲ್ಲಿ ಮಾನವೀಯ ಮೌಲ್ಯಗಳನ್ನ ಎತ್ತಿ ಹಿಡಿಯುವ ನಿರಂತರ ಕೆಲಸ ಮಾಡಿಕೊಂಡು ಬಂದಿದ್ದು, ಕಳೆದ ೨೮ ವರ್ಷಗಳಲ್ಲಿ ಲಯನ್ಸ್ ಕ್ಲಬ್ ಹಂಗಳೂರು ರೋವನ್ ಡಿ’ಕೋಸ್ತ್ ಅವರ ಅಧ್ಯಕ್ಷತೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದೆ. ಇದು ಲಯನ್ಸ್ ಸದಸ್ಯರಿಗೆ ಹೆಮ್ಮೆಯ ವಿಷಯ ಎಂದರು.

ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ಸಂದೀಪ್ ಶೆಟ್ಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಕೈಗೊಳ್ಳುವ ಎಲ್ಲಾ ಸಮಾಜಮುಖಿ ಕಾರ್ಯಗಳಿಗೆ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಪ್ರಥಮ ಉಪ ರಾಜ್ಯಪಾಲ ಲಯನ್ ರಾಜೀವ್ ಕೋಟ್ಯಾನ್, ನೂತನ ಸದಸ್ಯರುಗಳಾದ ಹಕ್ಲಾಡಿ ರಾಜೀವ ಶೆಟ್ಟಿ, ಮಂಜನಾಥ ಶೆಟ್ಟಿ ಮತ್ತು ವಸಂತ ದೇವಾಡಿಗರಿಗೆ ಪ್ರಮಾಣ ವಚನ ಬೋದಿಸಿ ಕ್ಲಬ್ ಗೆ ಬರಮಾಡಿಕೊಂಡರು.

ಅನಿವಾರ್ಯ ಕಾರ್ಯಗಳಿಂದ ಕ್ಲಬ್ ನ್ನು ಬಿಡುತ್ತಿರುವ ಸ್ಥಾಪಕ ಸದಸ್ಯರಾದ ವಿಲಫ್ರೆಡ್ ಡಿಸೋಜ ಮತ್ತು ನತಾಲಿನ್ ಡಿಸೋಜ ದಂಪತಿಗಳನ್ನು ಅವರ ೨೮ ವರ್ಷಗಳ ಸುದೀರ್ಘ ಲಯನ್ ಸೇವೆಯನ್ನು ಗುರುತಿಸಿ ಸನ್ಮಾನಿಸಿದರು.

ಸೇವಾ ಚಟುವಕೆಗಳ ಅಂಗವಾಗಿ ಆಯ್ದ ಸರಕಾರಿ ಹೈಸ್ಕೂಲ್ ಗಳಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಸ್ಥಾನ ಪಡೆದ ವೈಷ್ಣವಿ, ಅಮೃತ, ನರಸಿಂಹ ಪೂಜಾರಿ ಸುಶಾಂತ್ ನಾಯಕ್, ದ್ವಿತೀಯ ಪಿಯುಸಿಯ ಅನ್ವಿತಾ, ಶಾಶ್ವತ ಸೇವಾಕಾರ್ಯದ ಅಂಗವಾಗಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಪನ್ನಗ ಮಯ್ಯ ಹಾಗೂ ಬಳ್ಕೂರಿನ ಮೇಘನಾ ಇವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಬಿ ಎಂ ಶಾಲೆ ಬಸ್ರೂರು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಉದಯ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ರೋವನ್ ಡಿಕೊಸ್ತ, ಮಾತನಾಡಿ, ನಮ್ಮ ಕ್ಲಬ್ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಬಂದಿದ್ದರೆ ಅದಕ್ಕೆ ಮುಖ್ಯ ಕಾರಣ ಕ್ಲಬ್ ನ ಸರ್ವ ಸದಸ್ಯರ ಸಹಕಾರ ಎನ್ನುತ್ತಾ ಸಹಕರಿಸಿದ ಎಲ್ಲಾ ಸಂಘ ಸಂಸ್ಥೆ ಮಿತ್ರರ ನೆರವನ್ನು ಸ್ಮರಿಸಿದರು

ಸೀತಾರಾಮ ಶೆಟ್ಟಿ ನೂತನ ಹಾಗೂ ನಿರ್ಗಮನ ತಂಡಗಳಿಗೆ ಶುಭಾಶಂಸನೆಗೈದರು.
ರಿಜಿನಲ್ ಛೇರ್ಮನ್ ರಜತ್ ಹೆಗ್ಡೆ, ಜೋನ್ ಛೇರ್ಮನ್ ವಸಂತರಾಜ್ ಶೆಟ್ಟಿ ಶುಭಾಸಶಂಸನೆ ಗೈದರು
ಲಯನ್ಸ್‌ನ ಅರುಣಕುಮಾರ್ ಹೆಗ್ಡೆ, ಏಕನಾಥ್ ಬೋಳಾರ್, ಲಯನ್ ಕಾರ್ಯದರ್ಶಿಗಳಾದ ಮಾಥೆವ ಜೋಸೆಪ್, ವಿಲಫ್ರೆಡ್ ಮೆನೇಜಸ್, ಕೋಶಾಧಿಕಾರಿಗಳಾದ ಪುನೀತ್ ಶೆಟ್ಟಿ ಉಪಸ್ಥಿತರಿದ್ದರು.

ರೋವನ್ ಡಿಕೊಸ್ತಾ ಸ್ವಾಗತಿಸಿದರು. ಗ್ರೇಟ್ಟ ಡಿಕೋಸ್ತಾ ಗತವರ್ಷದ ವರದಿ ವಾಚಿಸಿದರು. ನಿತೇಶ ಡಿಕೋಸ್ತಾ ವಂದಿಸಿದರು, ಅಶ್ವಿನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!