spot_img
Wednesday, April 1, 2026
spot_img

ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: “ಚಿತ್ರಸಿರಿ” ಚಿತ್ರಕಲಾ ಸ್ಪರ್ಧೆ, ಚಲನಚಿತ್ರ ಕಲಾವಿದರಿಗೆ ಸನ್ಮಾನ

ಬಾರ್ಕೂರು : ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಚಿತ್ರಸಿರಿ” ಚಿತ್ರಕಲಾ ಸ್ಪರ್ಧೆ ಮತ್ತು ಸಾಸ್ತಾನ ಮಠದ ತೋಟದ ಕುಟುಂಬಿಕರಿಂದ ನಡೆದ 233ನೇ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಸ್ಕೂಲ್ ಲೀಡರ್ ಚಲನಚಿತ್ರ ಕಲಾವಿದರನ್ನು ಜುಲೈ 6ರಂದು ಗೌರವಿಸಲಾಯಿತು.
“ಚಿತ್ರಸಿರಿ” ಸ್ಪರ್ಧೆಯಲ್ಲಿ ಐದನೇ ತರಗತಿಯೊಳಗಿನ ನಿನಾದ್, ಆಶ್ಲೇಶ್, ದಿಕ್ಷೀತ್ 6 ರಿಂದ 10 ನೇ ತರಗತಿಯೊಳಗಿನ ಸಿಂಚನಾ, ನಮ್ರತಾ, ವಿಮರ್ಶ್ ಪಿಯುಸಿಯಿಂದ ಪದವಿವರೆಗಿನ ಸ್ಪರ್ಧೆಯಲ್ಲಿ ಪ್ರಜ್ಞಾ, ಮೇಘನಾ, ಪ್ರಜ್ವಲ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ನಿರ್ಣಾಯಕರಾಗಿ ಡಾ. ಜಯರಾಮ್ ಶೆಟ್ಟಿಗಾರ್, ಶಂಕರನಾರಾಯಣ ಶೆಟ್ಟಿಗಾರ್ ಕಾರ್ಕಡ, ವಿಠಲ ಶೆಟ್ಟಿಗಾರ್ ಸಗ್ರಿ ಭಾಗವಹಿಸಿದ್ದರು.ನೀಲಾವರ ಕುಟುಂಬಿಕರು ಬಹುಮಾನದ ಪ್ರಾಯೋಜಕರಾಗಿದ್ದರು.
ಇದೇ ಸಂದರ್ಭದಲ್ಲಿ ಸ್ಕೂಲ್ ಲೀಡರ್ ಚಲನಚಿತ್ರದ ನಟರಾದ ಅಶ್ವಿನಿ, ಶ್ರೀಜಯ್, ರಿತ್ವಿಕ್ ಮತ್ತು ಶಿಲ್ಪ ಕಲಾ ಸಾಧಕ ಯೊಗೀಂದ್ರ ಶ್ರೀವತ್ಸ ಅವರನ್ನು ಸನ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಹೆಚ್.ಎ. ಗೋಪಾಲ್ ಅವರು ಸಾಧಕರಿಗೆ ತನ್ನ ವೈಯಕ್ತಿಕ ನೆಲೆಯಲ್ಲಿ ಗೌರವ ಧನ ನೀಡಿ ಕಾರ್ಯಕ್ರಮ ನಿರೂಪಿಸಿದರು.
ಅನಾರೋಗ್ಯ ಪೀಡಿತರಾದ ಜಪ್ತಿ ಮಾಗಣೆಯ ಗುರಿಕಾರರಾದ ಶ್ರೀ ಕೃಷ್ಣ ಶೆಟ್ಟಿಗಾರ್ ಅವರಿಗೆ ದೇವಳದ ಶ್ರೀ ಬ್ರಹ್ಮಲಿಂಗ ವೀರಭದ್ರ ಪದ್ಮಶಾಲಿ/ ಶೆಟ್ಟಿಗಾರ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!