spot_img
Friday, January 30, 2026
spot_img

ಮಳೆ | ಕೆಂಪು, ಕಿತ್ತಳೆ ಮತ್ತು ಹಳದಿ, ಹಸಿರು ಅಲರ್ಟ್ ಗಳ ಬಗ್ಗೆ ನಿಮಗೆ ತಿಳಿದಿದೆಯೇ ? ಇಲ್ಲಿದೆ ಮಾಹಿತಿ.

ಜನಪ್ರತಿನಿಧಿ (ಮಾಹಿತಿ) : ಮಳೆಗಾಲದಲ್ಲಿ ಸಾಮಾನ್ಯವಾಗಿ ಭಾರತ ಹವಾಮಾನ ಇಲಾಖೆ (India Meteorological Department) ಎಲ್ಲೋ, ಆರೇಂಜ್, ರೆಡ್, ಗ್ರೀನ್ ಅಲರ್ಟ್ ಇವುಗಳನ್ನು ಘೋಷಣೆ ಮಾಡುವುದನ್ನು ನಾವು ಆಗಾಗ ಸುದ್ದಿಗಳಲ್ಲಿ ನೋಡುತ್ತಲೇ ಇರುತ್ತೇವೆ. ಜಿಲ್ಲಾಡಳಿತವೂ ಮಳೆಗಾಲದಲ್ಲಿ ಈ ಬಗ್ಗೆ ಎಚ್ಚರಿಕೆ ನೀಡುತ್ತಲೇ ಇರುತ್ತದೆ. ಆದರೇ ಈ ಬಗ್ಗೆ ಬಹುಶಃ ಪೂರ್ಣ ಮಾಹಿತಿ ನಮಗೆ ಇಲ್ಲ. ಈ ಬಗ್ಗೆ ಮಾಹಿತಿಯನ್ನು ಸಂಕ್ಷಿಪ್ತವಾಗಿ ಇಲ್ಲಿ ನಾವು ನೀಡಿದ್ದೇವೆ.

ಕೆಂಪು, ಕಿತ್ತಳೆ ಮತ್ತು ಹಳದಿ, ಹಸಿರು ಅಲರ್ಟ್ ಗಳ ಅರ್ಥವೇನು?

ಹವಾಮಾನ ಪರಿಸ್ಥಿತಿಗಳ ಬಗ್ಗೆ, ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಭಾರತ ಹವಾಮಾನ ಇಲಾಖೆ (ಐಎಂಡಿ) ಬಣ್ಣ-ಕೋಡೆಡ್ ಎಚ್ಚರಿಕೆ ವ್ಯವಸ್ಥೆಯನ್ನು ಬಳಸುತ್ತದೆ. ಹಾಗಾಗಿ, ಈ ಮುನ್ಸೂಚನೆಯ ಮಳೆಯ ತೀವ್ರತೆಯನ್ನು ಅವಲಂಬಿಸಿ ಆಯಾ ಕ್ಷೇತ್ರದ ಅಧಿಕಾರಿಗಳು ಮತ್ತು ನಾಗರಿಕರು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಈ ಎಚ್ಚರಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ.

ಗ್ರೀನ್ (ಹಸಿರು) ಅಲರ್ಟ್: ಮಳೆ ಇಲ್ಲ ಎಂದರ್ಥ. ಇದು ಅತ್ಯಂತ ಕಡಿಮೆ ಮಟ್ಟದ ಹವಾಮಾನ ಎಚ್ಚರಿಕೆಯಾಗಿದ್ದು, ಮಳೆ ಇಲ್ಲ ಅಥವಾ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ ಎನ್ನುವುದನ್ನು ಸೂಚಿಸುತ್ತದೆ.

ಎಲ್ಲೋ (ಹಳದಿ) ಅಲರ್ಟ್: ಎಚ್ಚರಿಕೆಯಿಂದಿರಿ.
ಮಳೆಗಾಲದಲ್ಲಿ ಈ ಎಚ್ಚರಿಕೆಯನ್ನು ಹೆಚ್ಚಾಗಿ ಇಲಾಖೆ ಹೊರಡಿಸುತ್ತದೆ. ಇದು 24 ಗಂಟೆಗಳ ಅವಧಿಯಲ್ಲಿ 64.5 ಮಿಮೀ ಮತ್ತು 115.5 ಮಿಮೀ ನಡುವಿನ ಮಧ್ಯಮ ಮಳೆಯಾಗುವ ಸಂಭವನೀಯತೆಯನ್ನು ಸೂಚಿಸುತ್ತದೆ.

ಆರೆಂಜ್ (ಕಿತ್ತಳೆ) ಅಲರ್ಟ್: ಎಲ್ಲದಕ್ಕೂ ಸಿದ್ಧರಿರಿ.
ಒಂದೇ ದಿನದಲ್ಲಿ 115.6 ಮಿಮೀ ಮತ್ತು 204.4 ಮಿಮೀ ನಡುವೆ ಮಳೆಯಾಗುವ ನಿರೀಕ್ಷೆಯಿರುವಾಗ ಈ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡುತ್ತದೆ. ಗುಡ್ಡಗಾಡು ಪ್ರದೇಶಗಳಲ್ಲಿ ಸಂಭಾವ್ಯ ಗುಡ್ಡ ಕುಸಿತ, ನೆರೆ ಪ್ರವಾಹ, ಸಂಚಾರ ಅಡಚಣೆಗಳ ಬಗ್ಗೆ ಈ ಅಲರ್ಟ್ ಸೂಚನೆ ನೀಡುತ್ತದೆ. ಆರೇಂಜ್ ಅಲರ್ಟ್ ಘೋಷಿಸಿದ ಸ್ಥಳಗಳಲ್ಲಿ ಅಲ್ಲಿನ ನಿವಾಸಿಗಳು ಮನೆಯೊಳಗೆ ಇರಬೇಕು, ತುರ್ತು ಪರಿಸ್ಥಿತಿಗಳಿಗೆ ಸಿದ್ಧರಾಗಿರಬೇಕು ಮತ್ತು ಹವಾಮಾನ ಸಂಬAಧಿತ ಸಲಹೆಗಳನ್ನು ಅನುಸರಿಸಬೇಕು ಎನ್ನುವುದನ್ನು ಇದು ಸೂಚಿಸುತ್ತದೆ.

ರೆಡ್ (ಕೆಂಪು) ಅಲರ್ಟ್: ‘ಸೂಕ್ತ ಕ್ರಮ ಕೈಗೊಳ್ಳಿ’
24 ಗಂಟೆಗಳಲ್ಲಿ 204.5 ಮಿಮೀ ಮೀರುವ ಮಳೆಯಾಗುವ ಸಾಧ್ಯತೆಯಿರುವಾಗ ಕೆಂಪು ಎಚ್ಚರಿಕೆಯನ್ನು (ರೆಡ್ ಅಲರ್ಟ್) ನೀಡಲಾಗುತ್ತದೆ. ಇದು ಜೀವ ಮತ್ತು ಆಸ್ತಿಗೆ ಅಪಾಯವನ್ನುಂಟುಮಾಡುವ ತೀವ್ರ ಹವಾಮಾನ ಪರಿಸ್ಥಿತಿಯನ್ನು ಸೂಚಿಸುತ್ತದೆ. ಈ ವೇಳೆ ಜನರನ್ನು ಸ್ಥಳಾಂತರಗೊಳ್ಳುವ0ತೆ ಅಧಿಕಾರಿಗಳು ಸೂಚನೆ ನೀಡಬಹುದು, ಸಾರಿಗೆ ಸಂಪರ್ಕಗಳನ್ನು ಬಂದ್ ಮಾಡಬಹುದು ಮತ್ತು ರೆಡ್ ಅಲರ್ಟ್ ಅಡಿಯಲ್ಲಿ ಆ ಪ್ರದೇಶಗಳಿಗೆ ರಕ್ಷಣಾ ತಂಡಗಳನ್ನು ಕೂಡ ನಿಯೋಜಿಸಬಹುದು.

ಇವಿಷ್ಟು ಮಳೆಗಾಲದಲ್ಲಿ ಹವಾಮಾನ ಪರಿಸ್ಥಿತಿಯನ್ನು ಆಧರಿಸಿ ಭಾರತೀಯ ಹವಾಮಾನ ಇಲಾಖೆ ಕೊಡುವ ಎಚ್ಚರಿಕೆಗಳ ಸಂಕ್ಷಿಪ್ತ ಮಾಹಿತಿಯಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!