spot_img
Friday, January 30, 2026
spot_img

ಮೇಡೇ ಕಾಲ್ ಬಗ್ಗೆ ನಿಮಗೆಷ್ಟು ಮಾಹಿತಿ ಇದೆ ? ಪೈಲೆಟ್ ಲಾಸ್ಟ್ ಕಾಲ್ ಅಂದರೇ ಏನು ? ಇಲ್ಲಿದೆ ಮಾಹಿತಿ

ಜನಪ್ರತಿನಿಧಿ (ಮಾಹಿತಿ) : ಲಂಡನ್ ಗೆ 242 ಮಂದಿಯನ್ನು ಕೊಂಡೊಯ್ಯುತ್ತದ್ದ ಏರ್ ಇಂಡಿಯಾ ಬೋಯಿಂಗ್ 787-8(Flight ಎ|171) ವಿಮಾನ ಅಹಮದಾಬಾದ್ ನ ರ‍್ಧಾರ್ ವಲ್ಲಭಭಾಯಿ ಪಟೇಲ್
ಅಂತರ್ ದೇಶಿಯ ಮಟ್ಟದ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು.
ಪೈಲೇಟ್ ಟೇಕ್ ಆಫ್ ಆದ ಕೆಲ ಕ್ಷಣಗಳಲ್ಲೇ ಅಪಘಾತದ ಸೂಚನೆಗಳನ್ನು ಕಂಡುಕೊ0ಡಿದ್ದರು ಎನ್ನಲಾಗಿದೆ. ಮಾತ್ರವಲ್ಲದೇ ಮೇಡೇ ಸಂದೇಶವನ್ನು ಕೂಡ ಕಳುಹಿಸಿದ್ದರು ಎನ್ನಲಾಗಿದೆ.

ಪೈಲೇಟ್ ಮೇಡೇ ಸಂದೇಶ ಕಳುಹಿಸಿದ ಕೆಲವೇ ಕ್ಷಣಗಳಲ್ಲೇ ತುರ್ತು ಪ್ರೋಟೋಕಾಲ್ ಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ವರದಿಯಾಗಿದೆ. ಅಗ್ನಿಶಾಮಕದಳಖ, ವೈದ್ಯಕೀಯ ತಂಡಗಳು ಮತ್ತು ಭದ್ರತಾ ಸಿಬ್ಬಂದಿಗಳನ್ನು ತಕ್ಷಣವೇ ಸ್ಥಳಕ್ಕೆ ರವಾನಿಸಲಾಗಿತ್ತು.

‘ಮೇಡೇ’ ಸಂದೇಶ ಅಂದರೇ ಏನು ?
1920ರ ಸಂದರ್ಭದಲ್ಲಿ ಬಳಕೆಗೆ ಬಂದ ಪದವಿದು. ಮೂಲತಃ ಫ್ರೆಂಚ್ ಪದವಾದ ಇದು, ಮೇಡರ್ (ನನಗೆ ಸಹಾಯ ಮಾಡಿ) ಎಂಬ ಪದದಿಂದ ತೆಗೆದುಕೊಳ್ಳಲಾಗಿದೆ. ಇದನ್ನು ತುರ್ತು ಸಂದರ್ಭಗಳಲ್ಲಿ ಬಳಕೆಗೆ ತಂದವರು ರೇಡಿಯೋ ಅಧಿಕಾರಿಯಾಗಿದ್ದ ಫ್ರೆಡರಿಕ್ ಸ್ಟಾನ್ಲಿ ಮಾರ್ಕಫೋರ್ಡ್ ಎಂದು ಹೇಳಲಾಗಿದೆ. ತುರ್ತಾಗಿ ಸಹಾಯ ಮಾಡಿ ಎಂದು ಹೇಳುವುದಕ್ಕೆ ‘ಮೇಡೇ’ ಎನ್ನುವ ಪದವನ್ನು ವಿಮಾನಗಳಲ್ಲಿ ಬಳಸಲಾಗುತ್ತದೆ. ತುರ್ತು ಅಪಾಯಕಾರಿ ಸಂದರ್ಭಗಳಲ್ಲಿ, ಮಾರಣಾಂತಿಕ ಸಂದರ್ಭಗಳಲ್ಲಿ ಕಂಟ್ರೋಲ್ ರೂಮ್ ಗೆ ‘ಮೇಡೇ’ ಸಂದೇಶ ಕಳುಹಿಸುತ್ತಾರೆ.

1923ರ ಸಂದರ್ಭದಲ್ಲಿ ಅಧಿಕೃತವಾಗಿ ಪೈಲೇಟ್ ಹಾಗೂ ನಾವಿಕರಿಗೆ
ಅಂತರ್ ದೇಶಿಯ ಮಟ್ಟದ ರೇಡಿಯೋ ಸಂವಹನದ ಭಾಗವಾಗಿ ಇದರ ಬಳಕೆ ಆರಂಭವಾಯಿತು.

‘ಮೇಡೇ’ ಸಂದೇಶ ಹೇಗೆ ಕಾರ್ಯ ನಿರ್ವಹಿಸುತ್ತದೆ ?
ಯಾವುದೇ ವಿಮಾನದ ಪೈಲೆಟ್ ಮೇಡೇ ಮೇಡೇ ಮೇಡೇ ಎಂಬ ಸಂದೇಶವನ್ನು ರವಾನಿಸುತ್ತಿದ್ದಾನೆ ಎಂದಾದಲ್ಲಿ ವಿಮಾನ ಪೈಲೇಟ್ ಕಂಟ್ರೋಲ್ ತಪ್ಪಿದೆ ಎನ್ನುವುದು ಇದರ ಅರ್ಥ. ವಿಮಾನ ಅಪಾಯಕಾರಿ ತುರ್ತು ಸ್ಥಿತಿಯಲ್ಲಿದೆ ಎನ್ನುವುದು ಇದರ ಅರ್ಥ. ಮೇಡೇ ಸಂದೇಶವನ್ನು ಪೈಲೆಟ್ ರವಾನಿಸುತ್ತಿದ್ದಾನೆಂದರೇ ಆತ ತುರ್ತು ಸಹಾಯ ಕೇಳುತ್ತಿದ್ದಾನೆ ಎಂಬುವುದು ಅದರ ಅರ್ಥ.

ಈ ಸಂದರ್ಭದಲ್ಲಿ ಎಲ್ಲಾ ಅನಿವಾರ್ಯವಲ್ಲದ ರೇಡಿಯೋ ಸಂವಹನಗಳೂ ಸ್ಥಗಿತಗೊಳ್ಳಬೇಕು ಹಾಗೂ ಎಟಿಸಿ ಎಂದು ಕರೆಯಲ್ಪಡುವ ವಾಯು ಸಂಚಾರ ನಿಯಂತ್ರಣ ಆ ಕರೆಗೆ ಆದ್ಯತೆಯನ್ನು ನೀಡುತ್ತದೆ.

ಈ ಬಳಿಕ ಪೈಲೆಟ್ ಅಪಾಯದ ಸ್ಥಿತಿ, ಸ್ಥಳ, ತುರ್ತು ಪರಿಸ್ಥಿತಿಯ ಸ್ವರೂಪ, ವಿಮಾನದಲ್ಲಿರುವವರ ಸಂಖ್ಯೆ ಹಾಗೂ ಮನವಿಗಳೇನಾದರೂ ಇದ್ದಲ್ಲಿ ಅದನ್ನು ತಿಳಿಸುತ್ತಾರೆ. ಇದರಿಂದ ರಕ್ಷಣಾ ತಂಡಗಳಿಗೆ ಸಂದೇಶ ರವಾನೆಯಾಗುತ್ತದೆ. ತ್ವರಿತಗತಿಯಲ್ಲಿ ಮುಂದಿನ ಕಾರ್ಯಾಚರಣೆಗೆ ತೊಡಗಿಕೊಳ್ಳುವುದಕ್ಕೆ ಸಹಾಯವಾಗುತ್ತದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!