spot_img
Friday, March 6, 2026
spot_img

ಬಾರ್ಕೂರು: ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬಾರ್ಕೂರು: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೂನ್ 1 ರವಿವಾರದಂದು ನಡೆದ ೨೩೨ನೇ ಸತ್ಯನಾರಾಯಣ ಪೂಜೆ ಮತ್ತು ೨೦೨೪-೨೫ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ತೇರ್ಗಡೆಗೊಂಡ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ದೇವಸ್ಥಾನದ ಆಡಳಿತ ಧರ್ಮದರ್ಶಿ ಬಾರ್ಕೂರು ರಂಗನಕೆರೆ ಶ್ರೀನಿವಾಸ್ ಶೆಟ್ಟಿಗಾರ್ ಅವರು ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ, ವಿದ್ಯೆಯೊಂದಿಗೆ ಸಂಸ್ಕಾರ ಬಳಸಿಕೊಂಡು ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಿ ಆದರ್ಶ ವಿದ್ಯಾರ್ಥಿಗಳಾಗಿ ಸಮಾಜಕ್ಕೆ ಕೀರ್ತಿ ತನ್ನಿ ಎಂದು ಕಿವಿಮಾತು ಹೇಳಿದರು.

ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಜಯರಾಮ್ ಶೆಟ್ಟಿಗಾರ್ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಮಾತನಾಡಿದರು.
ದೇವಸ್ಥಾನದ ಕೂಡುಕಟ್ಟಿಗೆ ಸೇರಿದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ನಿರೀಕ್ಷಾ ಕುಂದಾಪುರ, ಪ್ರಜ್ಞಾ, ಸಂಜನಾ, ಧನುಷ್, ಸಮರ್ಥ, ಪ್ರಶ್ಮಾ, ವಿಶ್ರಾಂತ್, ಅನ್ವಿತಾ, ಪಂಕಜ, ನಿರೀಕ್ಷಾ ಬಳ್ಳನೆ, ಮೇಘನಾ, ದೀಕ್ಷಿತ್, ಭವಿಷ್, ವೇದಿಕಾ
ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಗೊಂಡ ಸ್ಮಿತಾ, ಶಶಾಂಕ, ತರುಣ್, ಪವನ, ಡಯಾನ, ಭೂಷಣ್, ಉಜ್ವಲ್, ಪ್ರಜ್ವಲ್, ಮೇಘಶ್ಯಾಮ, ಸ್ವಸ್ತಿಕ್, ಸಾಕ್ಷಿ, ಪ್ರತೀಕ್, ಮನಿಷ್, ಪಂಚಮಿ, ಅದಿತ್, ಸಂಜನಾ, ಶರಧಿ, ಸಾತ್ವಿಕ್ ಇವರಿಗೆ ದೇವಸ್ಥಾನದಲ್ಲಿ ಅನುಗ್ರಹ ಪ್ರಸಾದ ನೀಡಿ ಪ್ರಾರ್ಥಿಸಿಕೊಂಡು, ಅಪರಾಹ್ನ ನಡೆದ ಮಾಸಿಕ ಸಭೆಯಲ್ಲಿ
ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಉತ್ತಮ ಸಾಧನೆಗೆ ವಿದ್ಯಾರ್ಥಿನಿ ನಿರೀಕ್ಷಾ ಕುಂದಾಪುರ ಅನಿಸಿಕೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ೨೩೨ನೇ ಮಾಸಿಕ ಸತ್ಯನಾರಾಯಣ ನಾರಾಯಣ ಪೂಜಾ ಸೇವಕರ್ತರಾದ ಶ್ರೀಮತಿ ಪೂರ್ಣಿಮಾ ಮತ್ತು ಶ್ರೀ ಭಾಸ್ಕರ ಶೆಟ್ಟಿಗಾರ್ ಅಸೋಡು, ಮುಂಬೈ ಇವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ವೀರೇಶ್ವರ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿಗಾರ್ ಮಣಿಪಾಲ, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಸದಾಶಿವ ಶೆಟ್ಟಿಗಾರ್, ಯುವ ವೇದಿಕೆ ಅಧ್ಯಕ್ಷ ಸಂಜೀವ ಶೆಟ್ಟಿಗಾರ ಸಾಸ್ತಾನ, ಕಾರ್ಯದರ್ಶಿ ಜನಾರ್ದನ್ ಶೆಟ್ಟಿಗಾರ ಚೇರ್ಕಾಡಿ, ನಾರಾಯಣ ಶೆಟ್ಟಿಗಾರ್ ಸುರತ್ಕಲ್, ಸಂಘಟನಾ ಸಮಿತಿ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್ ಸಂತೆಕಟ್ಟೆ, ಶ್ರೀ ಬ್ರಹ್ಮಲಿಂಗ ವೀರಭದ್ರ ಪದ್ಮಶಾಲಿ/ ಶೆಟ್ಟಿಗಾರ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸುಧಾಕರ ವಕ್ವಾಡಿ ಹಾಗೂ ಸಹ ಮೊಕ್ತೇಸರರು, ಮಾಗಣೆ ಗುರಿಕಾರರು, ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಭಾಸ್ಕರ್ ಶೆಟ್ಟಿಗಾರ ವರದಿ ವಾಚಿಸಿದರು. ಚಂದ್ರಶೇಖರ್ ಶೆಟ್ಟಿಗಾರ್ ಹೊಸಾಳ ಅಯ- ವ್ಯಯ ಮಂಡಿಸಿದರು. ಸಹ ಮೊಕ್ತೇಸರ
ಡಾ. ಶಿವಪ್ರಸಾದ್ ಶೆಟ್ಟಿಗಾರ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!