spot_img
Friday, March 6, 2026
spot_img

ಪಂಚಗಂಗಾವಳಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ: ಓರ್ವ ವಶಕ್ಕೆ

ಕುಂದಾಪುರ: ಕುಂದಾಪುರದ ಪಂಚಗಂಗಾವಳಿ ಹೊಳೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದು ಓರ್ವನನ್ನು ವಶಕ್ಕೆ ಪಡೆಯಲಾಗಿದೆ.

ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆಯ ಕೊನೆಯಲ್ಲಿ ರಿಂಗ್ ರೋಡ್ ಸಮೀಪ ಪಂಚಗಂಗಾವಳಿ ಹೊಳೆಯಲ್ಲಿ ಕೆಲವು ಜನರು ಮರಳನ್ನು ತೆಗೆದು ದೋಣಿಯಲ್ಲಿ ತುಂಬಿಸುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ್ ಅವರು ಠಾಣಾ ಸಿಬ್ಬಂದಿಯರೊಂದಿಗೆ ದಾಳಿ ನಡೆಸಿದಾಗ ಆರೋಪಿತ ಉದಯ ಮೆಂಡನ್ ಎಂಬಾತನು ವಶಕ್ಕೆ ಸಿಕ್ಕಿದ್ದು ಇನ್ನೋರ್ವ ವ್ಯಕ್ತಿ ಸುನಿಲ್ ಎಂಬಾತನು ಓಡಿ ಹೋಗಿದ್ದಾನೆ.

ಈ ಸ್ಥಳದಲ್ಲಿ ಒಂದು ದೋಣಿಯಲ್ಲಿ ಸುಮಾರು ಒಂದುವರೆ ಯುನಿಟ್ ನಷ್ಟು ಮರಳನ್ನು ತುಂಬಿಸಿಟ್ಟಿರುವುದು ಹಾಗೂ ಟಿಪ್ಪರ್ ವಾಹನ ನಿಂತಿರುವುದು ಕಂಡು ಬಂದಿದೆ. ಸ್ಥಳದಲ್ಲಿದ್ದ ದೋಣಿಯಲ್ಲಿರುವ ಮರಳನ್ನು ಪಂಚಗಂಗಾವಳಿ ಹೊಳೆಯಿಂದ ತೆಗೆದಿದ್ದು ಮರಳನ್ನು ಸ್ಥಳದಲ್ಲಿರುವ ಟಿಪ್ಪರ್ ವಾಹನಕ್ಕೆ ತುಂಬಿಸಿ ಸಾಗಾಟ ಮಾಡಲು ಟಿಪ್ಪರನ್ನು ತಂದಿರಿಸಿಕೊಂಡಿರುವುದಾಗಿ ಆಪಾದಿತ ಉದಯ ಮೆಂಡನ್ ತಿಳಿಸಿದ್ದು. ಆಪಾದಿತರು ಸಂಘಟಿತರಾಗಿ ಯಾವುದೇ ಪರವಾನಿಗೆ ಇಲ್ಲದೇ ಪಂಚಗಂಗಾವಳಿ ಹೊಳೆಯಿಂದ ಮರಳನ್ನು ಕಳವು ಮಾಡಿ ಸಾಗಾಟ ಮಾಡಲು ಶೇಖರಿಸಿರುವುದು ಕಂಡುಬಂದಿದೆ.

ಸ್ಥಳದಲ್ಲಿದ್ದ ಕೃತ್ಯಕ್ಕೆ ಬಳಸಿದ್ದ ಫೈಬರ್ ದೋಣಿ,  ಒಂದೂವರೆ ಯುನಿಟ್ ಮರಳು, ಟಿಪ್ಪರ್ ವಾಹನ ಹಾಗೂ ಕಬ್ಬಿಣದ ಹಾರೆ, ಫೈಬರ ಬುಟ್ಟಿಗಳನ್ನು ಸ್ವಾಧೀನಪಡಿಸಿಕೊಂಡಿದ್ಡು ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!