spot_img
Friday, March 6, 2026
spot_img

ಯಶಸ್ವಿ ಕಲಾವೃಂದ: ಗಾನ ಗಾರುಡಿಗ ದಿ. ಕಾಳಿಂಗ ನಾವಡರಿಗೆ ಗಾನ ನಮನ

ತೆಕ್ಕಟ್ಟೆ: ಕಾಳಿಂಗ ನಾವಡರ ಹೆಸರೇ ಯಕ್ಷ ಪ್ರಪಂಚದಲ್ಲಿ ರೋಮಾಂಚನ. ಸರಿಸಾಟಿಯಿಲ್ಲದ ಕಂಠ ಸಿರಿಯನ್ನು ಹೊಂದಿದ ಕಾಳಿಂಗ ನಾವಡರು ತನ್ನ ಎಳವೆಯಲ್ಲಿಯೇ ಅದ್ಭುತ ಸಾಧನೆಗೈದು ಇಹಲೋಕ ತ್ಯಜಿಸಿ ಅಜರಾಮರರಾದರು, ಗಾನಗಾರುಡಿಗರಾಗಿ ಯಕ್ಷ ಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದರು ಎಂದು ಯಕ್ಷಗುರು ಲಂಬೋದರ ಹೆಗಡೆ ನಿಟ್ಟೂರು ಸಂಸ್ಮರಣಾ ನುಡಿಗಳನ್ನಾಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಮೇ ೩೧ರಂದು ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ ಆಶ್ರಯದಲ್ಲಿ ಗಂಪು ಪೈ ಸಾಲಿಗ್ರಾಮ ಸಹಕಾರದಲ್ಲಿ ಕಾಳಿಂಗ ನಾವಡರ ಸಂಸ್ಮರಣೆಯಾಗಿ ಯಕ್ಷ ಗಾನ ನಮನ ಕಾರ್ಯಕ್ರಮದಲ್ಲಿ ಲಂಬೋದರ ಹೆಗಡೆ ಮಾತನ್ನಾಡಿದರು.

ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಮಾತನ್ನಾಡಿ, ಲಕ್ಷೆಪಲಕ್ಷ ಕಲಾಭಿಮಾನಿಗಳ ಮನ ತಟ್ಟಿದ ಕಾಳಿಂಗ ನಾವಡರು ಯಕ್ಷ ಪರಂಪರೆಯಲ್ಲಿ ಇನ್ನಿಲ್ಲದ ಸಾಧನೆಗೈದವರು. ಇವರ ಸ್ಮರಣೆಯಲ್ಲಿಯೇ ಅನುದಿನವೂ ಯಕ್ಷಾಭಿಮಾನಿಗಳು ಇರುವುದನ್ನು ಅಲ್ಲಗಳೆಯುವಂತಿಲ್ಲ ಎಂದರು. ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಉದ್ಯಮಿ ಗೋಪಾಲ ಪೂಜಾರಿ ಬಾಳೆಹಿತ್ಲು, ಯುವ ಭಾಗವತರಾದ ರಾಜೇಶ್ ಕೋಡಿ, ಹರೀಶ್ ಕಾವಡಿ, ವಿಶ್ವನಾಥ ಐರೋಡಿ, ಸುಕುಮಾರ ಶೆಟ್ಟಿ, ಲೋಹಿತ್ ಕೊಮೆ, ರಾಹುಲ್ ಕುಂದರ್, ರಾಹುಲ್ ಅಮೀನ್, ಪವನ್ ಆಚಾರ್ ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!