spot_img
Friday, March 6, 2026
spot_img

ರಾಷ್ಟ್ರೀಯ ನಾಟ್ಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟನೆ

ಕುಂದಾಪುರ: ಯಕ್ಷಗಾನವನ್ನು ಯೋಗ್ಯ ಗುರುಗಳಿಂದ ಕಲಿತರೆ ಮುಂದಿನ ಪೀಳಿಗೆಗೆ ಕಲೆಯನ್ನು ಸಮರ್ಪಕವಾಗಿ ದಾಟಿಸಬಹುದಾಗಿದೆ. ಯಕ್ಷಗಾನ ಕಲಿತವರೆಲ್ಲ ಗುರುವಾಗಲು ಸಾಧ್ಯವಿಲ್ಲ. ಸಂಜೀವರಲ್ಲಿ ಯಕ್ಷಗಾನ ತರಬೇತಿ ಪಡೆಯುವುದೇ ಪೂರ್ವ ಜನ್ಮದ ಸುಕೃತ ಫಲ ಎಂದು ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದರು.

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ, ಯಕ್ಷ ಸಂಜೀವ ಪ್ರತಿಷ್ಠಾನದ ಸಹಕಾರದೊಂದಿಗೆ ರಾಷ್ಟ್ರೀಯ ನಾಟ್ಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನೆಯನ್ನು ತಿಂಗಳೆ ಎನ್. ಎಸ್. ಡಿ. ಪ್ರತಿಷ್ಠಾನದಲ್ಲಿ ಮೇ 21ರಂದು ಉದ್ಘಾಟಿಸಿ ಮಾತನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರು ಬನ್ನಂಜೆ ಸಂಜೀವ ಸುವರ್ಣರು ಮಾತನ್ನಾಡಿ, ಕಲಿಯುವ ತುಡಿತ ಸಾಧನೆಯ ಛಲ ಇವೆರಡೂ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂದರು. ತಿಂಗಳೆ ಪ್ರತಿಷ್ಠಾನದ ಪ್ರೊಫೆಸರ್ ವಿವೇಕ್, ಭಾಗವತರಾದ ಲಂಬೋದರ ಹೆಗಡೆ ನಿಟ್ಟೂರು, ಶ್ರೀಧರ ಹೆಗಡೆಯವರು ಉಪಸ್ಥಿತರಿದ್ದರು.

ಸುಮಾರು 30 ವಿದ್ಯಾರ್ಥಿಗಳು 10 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಶಿಷ್ಯರಾದ ಶುತಿ ಬಂಗೇರ, ಪಲ್ಲವಿ ಕೊಡಗು, ಶಿಶಿರ್, ಮನೋಜ್ ಕಾರ್ತಿಕ್, ಸುಮಂತ್ ಮೊದಲಾದವರಿಂದ ಪ್ರಾತ್ಯಕ್ಷಿಕೆ ನಡೆಯಿತು. ಮಣಿಪಾಲದ ವೈದ್ಯ ಪ್ರಶಾಂತ್ ಶೆಟ್ಟಿಯವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!