spot_img
Sunday, June 22, 2025
spot_img

ಕುಂದಾಪುರದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯ ಸ್ಮರಣೆ

ಕುಂದಾಪುರ: ಮಾಜಿ ಪ್ರಧಾನಿ ರಾಜೀವ್ ಗಾಂಧಿ , ಆಧುನಿಕ ಭಾರತದ ಶಿಲ್ಪಿ ಮತ್ತು ಮಾಹಿತಿ ತಂತ್ರಜ್ಞಾನದ ಅಡಿಪಾಯವನ್ನು ದೇಶದಲ್ಲಿ ಹಾಕಿದ ದೂರದೃಷ್ಟಿಯ ನಾಯಕರೆಂದು ಕುಂದಾಪುರ ವಿಧಾನಸಭೆಯ ಕಾಂಗ್ರೆಸ್ ನಾಯಕರಾದ ದಿನೇಶ್ ಹೆಗ್ಡೆ ಹೇಳಿದರು.

ಅವರು ಬುಧವಾರದಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳವಾದ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಕ್ಷದ ಮುಖಂಡರನ್ನು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮ ಶೆಟ್ಟಿಯವರು ರಾಜೀವ್ ಗಾಂಧಿಯವರು ಎಲ್.ಟಿ.ಟಿ ಭಯೋತ್ಪಾದನೆ ನಿರ್ಮೂಲನೆಗೆ ಪಣತೊಟ್ಟು ತನ್ನ ಪ್ರಾಣವನ್ನು ದೇಶಕ್ಕಾಗಿ ಬಲಿಕೊಟ್ಟ ಮಹಾ ನಾಯಕ ಎಂದರು.

ತಾಲೂಕು ಕೆಡಿಪಿ ಸದಸ್ಯರಾದ ರಮೇಶ್ ಶೆಟ್ಟಿ ಅವರು ಮಾತನಾಡಿ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲವನ್ನು ನೀಡಿದ ಮಾಜಿ ಪ್ರಧಾನಿ , ಅಧಿಕಾರ ವಿಕೇಂದ್ರೀಕರಣಕ್ಕೆ ಮನ್ನಣೆಯನ್ನು ನೀಡಿ , ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಅಧಿಕಾರವನ್ನು ನೀಡಿದ ಕೀರ್ತಿ ಸಲ್ಲಬೇಕಾಗುತ್ತದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಅವರು ಮಾತನಾಡಿ ರಾಜೀವ್ ಗಾಂಧಿ ಅವರು ಕೃಷಿ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ದೇಶದಲ್ಲಿ ಸಮಾನವಾಗಿ ಒತ್ತುಕೊಟ್ಟು , ಎಂದೂ ಪ್ರಚಾರಕ್ಕಾಗಿ ತನ್ನ ಎದೆಯಳತೆಯನ್ನು ತಿಳಿಸದೆ ,ಪ್ರಧಾನಿ ಹುದ್ದೆಗೆ ಘನತೆಯನ್ನು ತಂದರು ಎಂದು ಹೇಳಿದರು.

ಸಭೆಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಜೀತ್ ಪೂಜಾರಿ, ಹಿರಿಯರಾದ ಅಬ್ದುಲ್ಲಾ ಕೊಡಿ, ಪಂಚಾಯತ್ ಸದಸ್ಯರಾದ ವಿಜಯಧರ್, ಪುರಸಭಾ ಸದಸ್ಯರಾದ ಶ್ರೀಧರ್ ಶೇರಿಗಾರ್, ಪ್ರಭಾವತಿ ಶೆಟ್ಟಿ, ಅಶೋಕ್ ಸುವರ್ಣ, ಶಶಿಧರ ಕೋಟೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ರೇವತಿ ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಕಾರ್ಯದರ್ಶಿ ಜೋಸೆಫ್ ರೆಬೆಲ್ಲೊ , ಕುಂದೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯೆ ಸೀಮಾ ಚಂದ್ರ ಪೂಜಾರಿ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಮಹಮ್ಮದ್ ಅಲ್ಫಾಜ್, ಅರುಣ್ ಪಟೇಲ್, ವೇಣುಗೋಪಾಲ್, ಮೇಬಲ್ ಡಿಸೋಜಾ, ಎಡೊಲ್ಫ್ ಡಿಕೊಸ್ಟಾ, ಅಬ್ಬಾಸ್ ಬ್ಯಾರಿ, ಇನ್ನಿತರರು ಉಪಸ್ಥಿತರಿದ್ದರು.

ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೋ ಸ್ವಾಗತಿಸಿ, ನಿರೂಪಿಸಿದರು. ತಾಲೂಕು ಗ್ಯಾರೆಂಟಿ ಸಮಿತಿಯ ಸದಸ್ಯೆ ಆಶಾ ಕರ್ವಾಲ್ಲೊ ವಂದಿಸಿದರು.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!