spot_img
Saturday, May 2, 2026
spot_img

ಪಾಕ್‌ ಉಗ್ರವಾದದ ವಿರುದ್ಧ ಹೋರಾಡಲು ಶಶಿ ತರೂರ್‌ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗ ಶೀಘ್ರದಲ್ಲೇ ವಿದೇಶಕ್ಕೆ !

ಜನಪ್ರತಿನಿಧಿ (ನವದೆಹಲಿ) : ಆಪರೇಷನ್ ಸಿಂಧೂರ್ ಮೂಲಕ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ದ ಪ್ರತೀಕಾರ ತೀರಿಸಿಕೊಂಡಿರುವ ಭಾರತ, ಇದೀಗ ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನ ಉಗ್ರರ ಬಂಡವಾಳ ಬಯಲು ಮಾಡಲು ಪಣ ತೊಟ್ಟಿದ್ದು, ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗವನ್ನು ವಿದೇಶಕ್ಕೆ ಕಳುಹಿಸಲು ನಿರ್ಧರಿಸಿದೆ.

ಪಾಕಿಸ್ತಾನದ ವಿರುದ್ದ ಬೃಹತ್ ರಾಜತಾಂತ್ರಿಕ ದಾಳಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ತಲಾ 5 ಸಂಸದರನ್ನು ಒಳಗೊಂಡ 5-6 ಸಂಸದರ ನಿಯೋಗವೊಂದನ್ನು ವಿಶ್ವದ ವಿವಿಧ ದೇಶಗಳಿಗೆ ರವಾನಿಸಲು ನಿರ್ಧರಿಸಿದೆ.

ಈ ನಿಯೋಗ ಮೇ.22ರಿಂದ ವಿದೇಶ ಪ್ರವಾಸ ಆರಂಭಿಸಲಿದ್ದು, ಅಮೆರಿಕಾ, ಬ್ರಿಟನ್, ದಕ್ಷಿಣ ಆಫ್ರಿಕಾ, ಕತಾರ್, ಯುಎಇ ಮತ್ತಿತರ ದೇಶಗಳಿಗೆ ಪ್ರವಾಸ ಮಾಡಲಿದೆ.

ಭೇಟಿ ವೇಳೆ ಭಾರತ-ಪಾಕಿಸ್ತಾನ ಸಂಘರ್ಷ, ಆಪರೇಷನ್ ಸಿಂಧೂರಕ್ಕೆ ಕಾರಣವಾದ ಅಂಶಗಳು, ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವ ವಿಚಾರಗಳ ಕುರಿತು ವಿದೇಶಿ ನಾಯಕರಿಗೆ ವಿವರಣೆ ನೀಡಲಿದ್ದಾರೆ. ಈ ಮೂಲಕ ಪಾಕಿಸ್ತಾನದ ಬಂಡವಾಳ ಬಯಲು ಮಾಡುವ ಪ್ರಯತ್ನ ನಡೆಸಲಿದ್ದಾರೆ.

ಈ ಪ್ರಮುಖ ಕಾರ್ಯವನ್ನು ನಿರ್ವಹಿಸಲು ಕೇಂದ್ರ ಸರ್ಕಾರ ಶನಿವಾರ (ಮೇ 17) ಶಶಿ ತರೂರ್ ಮತ್ತು ವಿರೋಧ ಪಕ್ಷದ ಇಬ್ಬರು ಮತ್ತು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ನಾಲ್ವರು ಸೇರಿದಂತೆ ಆರು ಇತರ ಸಂಸದರನ್ನು ಹೆಸರಿಸಿದೆ.

ಅತ್ಯಂತ ಮುಖ್ಯವಾದ ಕ್ಷಣಗಳಲ್ಲಿ, ಭಾರತ ಒಗ್ಗಟ್ಟಿನಿಂದ ನಿಲ್ಲುತ್ತದೆ” ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಿಯೋಗದಲ್ಲಿರುವ ಎಲ್ಲ ಏಳು ಮಂದಿ ಸದಸ್ಯರು ಭಾರತದ “ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಹಂಚಿಕೆಯ ಸಂದೇಶ”ವನ್ನು ಹೊತ್ತುಕೊಂಡು ಶೀಘ್ರದಲ್ಲೇ ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಭೇಟಿ ನೀಡಲಿವೆ. ರಾಜಕೀಯವನ್ನು ಮೀರಿ, ಭಿನ್ನಾಭಿಪ್ರಾಯಗಳನ್ನು ಮೀರಿ ರಾಷ್ಟ್ರೀಯ ಏಕತೆಯ ಪ್ರಬಲ ಪ್ರತಿಬಿಂಬ ಇದು ಎಂದು ಹೇಳಿದ್ದಾರೆ.

7 ಮಂದಿ ಸದಸ್ಯರ ನಿಯೋಗದಲ್ಲಿ ಶಶಿ ತರೂರ್‌ (ಕಾಂಗ್ರೆಸ್), ರವಿಶಂಕರ್‌ ಪ್ರಸಾದ್‌ (ಬಿಜೆಪಿ), ಸಂಜಯ್‌ ಕುಮಾರ್‌ ಝಾ (ಜೆಡಿಯು), ಬೈಜಯಂತ್‌ ಪಂಡಾ (ಬಿಜೆಪಿ), ಕನ್ನಿಮೊಳಿ ಕರುಣಾನಿಧಿ (ಡಿಎಂಕೆ), ಸುಪ್ರಿಯಾ ಸುಳೆ (ಎನ್‌ ಸಿಪಿ), ಶ್ರೀಕಾಂತ್‌ ಏಕನಾಥ್‌ ಶಿಂಧೆ (ಶಿವಸೇನೆ) ಇರಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!