spot_img
Tuesday, March 31, 2026
spot_img

ಸೂರ್ಯ ಘರ್‌ ಯೋಜನೆ : ಐದು ಪಂಚಾಯತ್‌ ಗಳ ಆಯ್ಕೆಗೆ ಶಿಫಾರಸು : ಕೋಟ

ಜನಪ್ರತಿನಿಧಿ (ಉಡುಪಿ) : ಪ್ರಧಾನಮಂತ್ರಿ ಸೂರ್ಯಘರ್‌ ಯೋಜನೆಯಡಿ ಸೋಲಾರ್‌ ಪಂಚಾಯತಿಗಳಾಗಿ ಆಯ್ಕೆ ಮಾಡಲು ಜಿಲ್ಲೆಯ ಐದು ಪಂಚಾಯಿತಿಗಳ ಆಯ್ಕೆಗೆ ಶಿಫಾರಸು ಮಾಡಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟತಟ್ಟು, ಬೈಂದೂರಿನ ಕಿರಿಮಂಜೇಶ್ವರ, ಕಾರ್ಕಳದ ನಿಟ್ಟೆ, ಕಾಪುವಿನ ಮಜೂರು, ಉಡುಪಿಯ ಉಪ್ಪೂರು ಪಂಚಾಯಿತಿಗಳನ್ನು ಸೂರ್ಯ ಘರ್‌ ಯೋಜನೆಯಡಿ ಮಾರಿ ಸೋಲಾರ್‌ ಗ್ರಾಮ ಪಂಚಾಯತಿಗಳಾಗಿ ಆಯ್ಕೆ ಮಾಡಲು ಶಿಫಾರಸು ಮಾಡಿಲಾಗಿದೆ.

ಪ್ರಧಾನಮಂತ್ರಿ ಸೂರ್ಯಘರ್‌ ಯೋಜನೆಯಡಿ ಮನೆಮನೆಗೂ ಸ್ವಯಂ ವಿದುಯತ್‌ ಉತ್ಪಾದನೆ ಮಾಡಿಕೊಳ್ಳಲು  ಸಂಕಲ್ಪದಲ್ಲಿ ೩೦೦ ಯೂನಿಟ್‌ ವಿದುತ್‌ ಉತ್ಪದನೆ ಮಾಡಿಕೊಳ್ಳುವ ಸಂಕಲ್ಪದಲ್ಲಿ ೩೦೦ ಯೂನಿಟ್‌ ವಿದ್ಯುತ್‌ ಉತ್ಪಾದನೆ ಗುರಿಯೊಂದಿಗೆ ೨.೨೦ ಲಕ್ಷ ರೂ ಸಾಲ ಸೌಲಭ್ಯವನ್ನು ರಾಷ್ಟ್ರೀಕೃತ ಬ್ಯಾಂಕ್‌ ಗಳು ನೀಡುತ್ತಿದ್ದು, ಸೋಲಾರ್‌ ಅಳವಡಿಕೆ ಮಾಡಿಕೊಂಡ ಕುಟುಂಬಗಳಿಗೆ ೭೮ ಸಾವಿರ ಸಹಾಯಧನ ನೀಡಲಾಗಿತ್ತಿದೆ.

ಪ್ರತಿ ಪಂಚಾಯಿತಿ ಹಾಗೂ ನಗರಾಡಳಿತ ಸಂಸ್ಥೆಗಳ ಎಲ್ಲಾ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದ ಯೋಜನೆ ಅಳವಡಿಕೆ ಶ್ರಮವಹಸಲು ಕ್ರಮಕೈಗೊಳ್ಳಲಾಗುವುದು. ಪ್ರಥಮ ಹಂತದಲ್ಲಿ ಆಯ್ಕೆ ಮಾಡಲಾದ ಐದು ಪಂಚಾಯಿತಿಗಳ ಯಶಸ್ಸನ್ನು ಪರಿಗಣಿಸಿ, ಉಳಿದೆಲ್ಲಾ ಪಂಚಾಯಿತಿಗಳಿಗೆ ವಿಸ್ತರಿಸಲಾಗುವುದು ಹಾಗೂ ಆಯ್ಕೆಯಾದ ಗ್ರಾಮ ಪಂಚಾಯಿತಿಗಳಿಗೆ ವಿಶೇಷ ಅನುದಾನ ನೀಡಲು ಶಿಫಾರಸು ಮಾಡಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ, ಜಿ. ಪಂ ಸಿಇಒ ಪ್ರತೀಕ್‌ ಬಾಯಲ್‌, ಉಡುಪಿ ಮೆಸ್ಕಾಂ ಅಧೀಕ್ಷಕ ಎಂಜಿಣಿಯರ್‌ ಪಿ. ದಿನೇಶ್‌ ಉಪಾಧ್ಯಾಯ ಇದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!