spot_img
Wednesday, April 1, 2026
spot_img

ರೌಡಿ ಶೀಟರ್‌ ಸುಹಾಸ್ ಶೆಟ್ಟಿ ಕೊ*ಲೆಯಲ್ಲಿ ಫಾಸಿಲ್‌ ಸಹೋದರ ಭಾಗಿ | ತಿಂಗಳ ಹಿಂದೆಯೇ ನಡೆದಿತ್ತು ಕೊ*ಲೆಯ ಪ್ಲ್ಯಾನ್‌ !

ಜನಪ್ರತಿನಿಧಿ (ಮಂಗಳೂರು) : ರೌಡಿ ಶೀಟರ್ ಸುಹಾಸ್‌ ಶೆಟ್ಟಿ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಪ್ರತಿಕಾರಕ್ಕಾಗಿ ಹತ್ಯೆ ನಡೆದಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದು, ತಂಡದಿಂದ ಪ್ಲ್ಯಾನ್ ಮಾಡಿ ಈ  ಹತ್ಯೆ ನಡೆದಿದೆ.

ಮೀನು ಸಾಗಿಸುವ ಮಿನಿ ಕಂಟೇನರ್ ಲಾರಿಯನ್ನು ನಟೋರಿಯಸ್ ಸಫ್ವಾನ್  ಚಲಾಯಿಸುತ್ತಿದ್ದ, ಸ್ವಿಫ್ಟ್ ಕಾರನ್ನು ಮುಝಂಬಿಲ್ ಚಲಾಯಿಸಿದ್ದ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 2022ರ ಜುಲೈ 28ರಂದು ನಡೆದಿದ್ದ ಸುರತ್ಕಲ್‌ನ ಫಾಜಿಲ್ ಹ*ತ್ಯೆ ಪ್ರಕರಣದಲ್ಲಿ ಸುಹಾಸ್‌ ಶೆಟ್ಟಿ ಭಾಗಿಯಾಗಿದ್ದ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ನಡೆದಿದ್ದ ಫಾಜಿಲ್ ಹತ್ಯೆ ಕೇಸ್‌ನಲ್ಲಿ ಸುಹಾಸ್‌ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ. ಇದುವೇ ಈತನ ಜೀವಕ್ಕೆ ಮುಳುವಾಯಿತು ಎಂಬುದು ಈಗ ಬಹಿರಂಗವಾಗಿದೆ. ಏಕೆಂದರೆ ಬಂಧಿತರಲ್ಲಿ  ಅದಿಲ್‌ ಮೆಹರೂಫ್‌ ಎಂಬಾತ ಫಾಸಿಲ್‌ ಸಹೋದರ ಎಂದು ವಿಚಾರಣೆಯಲ್ಲಿ  ತಿಳಿದುಬಂದಿದೆ.

ರೌಡಿ ಶೀಟರ್ ಸುಹಾಸ್ ಶೆಟ್ಟಿ ಹಂತಕರ ಪಟ್ಟಿ :

1)ಅಬ್ದುಲ್ ಸಫ್ವಾನ್ ( ಶಾಂತಿಗುಡ್ಡೆ ನಿವಾಸಿ, 29ವರ್ಷ, ಡ್ರೈವರ್ ಕೆಲಸ )
2) ನಿಯಾಜ್ (ಶಾಂತಿಗುಡ್ಡೆ ನಿವಾಸಿ, 28 ವರ್ಷ, ಮೇಸ್ತ್ರಿ  ಹೆಲ್ಪರ್ ಕೆಲಸ )
3) ಮೊಹಮ್ಮದ್ ಮುಝಮಿಲ್ ( ಕೆಂಜಾರು ಅಪಾರ್ಟ್ಮೆಂಟ್ ನಿವಾಸಿ,  32 ವರ್ಷ, 4 ತಿಂಗಳ ಹಿಂದೆ ಸೌದಿ ಅರೇಬಿಯಾ ದಲ್ಲಿ ಸೇಲ್ಸ್ ಮ್ಯಾನ್ ಆಗಿ, 4 ತಿಂಗಳ ಹಿಂದೆ ಮದುವೆಯಾಗಿದ್ದ)
4)ಕಲಂದರ್ ಶಾಫಿ (31 ವರ್ಷ, ಕುರ್ಸು ಗುಡ್ಡೆ ನಿವಾಸಿ, ಬೆಂಗಳೂರಿನಲ್ಲಿ ಸೇಲ್ಸ್ ಮ್ಯಾನ್ )
5) ರಂಜಿತ್ (19 ವರ್ಷ, ಚಿಕ್ಕಮಗಳೂರು ನಿವಾಸಿ, ಡ್ರೈವಿಂಗ್ ಕೆಲಸ )
6) ನಾಗರಾಜ್ (20 ವರ್ಷ, ಚಿಕ್ಕಮಗಳೂರು ನಿವಾಸಿ, ಶಾಮಿಯಾನ ಅಂಗಡಿಯಲ್ಲಿ ಕೆಲಸ )
7) ಮೊಹಮ್ಮದ್ ರಿಜ್ವಾನ್ (28 ವರ್ಷ, ಜೋಕಟ್ಟೆ ಮಂಗಳೂರು ನಿವಾಸಿ, ಸೌದಿ ಅರೇಬಿಯಾ ಆಯಿಲ್ ಪ್ಲಾಂಟ್ ಶಟ್ ಡೌನ್ ಕೆಲಸ)
8) ಅದಿಲ್‌ ಮೆಹರೂಫ್‌ (ಫಾಜಿಲ್ ಸಹೋದರ)

ಇದಕ್ಕೂ ಮುನ್ನ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಕೃತ್ಯದಲ್ಲಿ ಭಾಗವಹಿಸಿದ ಎಂಟು ಜನರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಿದರು. ಅವರೆಲ್ಲರೂ ಈಗ ಪೊಲೀಸ್ ಕಸ್ಡಡಿಯಲ್ಲಿ ಇದ್ದಾರೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ನಡೀತಾ ಇದೆ. ಸಿಕ್ಕಿದ ಎಂಟು ಜನರ ತನಿಖೆ ಆಗ್ತಿದೆ. ಸುಹಾಸ್ ಶೆಟ್ಟಿ ಘಟನೆ ಮತ್ತು ನಾಲ್ಕು ದಿನದ ಹಿಂದಿನ ಅಶ್ರಫ್ ಕೊಲೆ ಮತ್ತೆ ಇಲ್ಲಿ ಕೋಮು ಸೌಹಾರ್ದಕ್ಕೆ ಸವಾಲಾಗಿದೆ. ಸುಹಾಸ್ ಶೆಟ್ಟಿ ಕೇಸ್ ನಲ್ಲಿ ಎಂಟು ಜನರು‌ ಹಾಗೂ ಅಶ್ರಫ್ ಕೇಸ್ ನಲ್ಲಿ 21 ಜನರ ಬಂಧನ ಆಗಿದೆ. ನಾವು ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಶಾಂತಿ ಹಾಳು ಮಾಡಲು ಬಿಡಲ್ಲ ಎಂದಿದ್ದಾರೆ.

ಕಳಸದ ಇಬ್ಬರು ಹಿಂದೂ ಯುವಕರು ಭಾಗಿ !

ಕೊಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸದ ಇಬ್ಬರು ಯುವಕರ ಹೆಸರು ಮುನ್ನಲೆಗೆ ಬಂದಿರುವ ಹಿನ್ನೆಲೆ ಸುಹಾಸ್ ಕೊಲೆಗೆ ತಿಂಗಳಿಂದ ನಡೆದಿತ್ತಾ ಸಂಚು? ಎಂಬ ಶಂಕೆ ದಟ್ಟವಾಗಿದೆ. ರಂಜಿತ್ ಮತ್ತು ನಾಗರಾಜ್ ಎಂಬ ಕಳಸದ ಯುವಕರು ಕೆಲಸ ಬಿಟ್ಟು ತಿಂಗಳ ಹಿಂದೆಯೇ ಮಂಗಳೂರು ಸೇರಿದ್ದರು. ಕಳಸ ಪಟ್ಟಣದ ಶಾಮಿಯಾನದಲ್ಲಿ ಕೆಲಸ ಮಾಡುತ್ತಿದ್ದರು. ಸದಾ ಮದ್ಯ ಸೇವಿಸುತ್ತಿದ್ದ ಇಬ್ಬರು ಯುವಕರು ಮದ್ಯಪಾನದ ದಾಸರಾಗಿದ್ದರು ಎಂದು ತಿಳಿದುಬಂದಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!