spot_img
Saturday, February 14, 2026
spot_img

ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ರಥೋತ್ಸವದ ವೇಳೆ ಮುರಿದು ಬಿದ್ದ ತೇರು ! | ಅಪಶಕುನ ? ಭಕ್ತರಲ್ಲಿ ಸೃಷ್ಟಿಯಾದ ಆತಂಕ

ಜನಪ್ರತಿನಿಧಿ (ದಕ್ಷಿಣ ಕನ್ನಡ) : ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ರಥೋತ್ಸವದ ಸಂದರ್ಭದಲ್ಲಿ ರಥದ ಮೇಲಿನ ಭಾಗ ಮುರಿದು ಬಿದ್ದಿದೆ. ರಥೋತ್ಸವಕ್ಕೆ ಹಲವು ಭಾಗಗಳಿಂದ ಭಕ್ತರ ದಂಡೇ ಹರಿದು ಬಂದಿತ್ತು. ಜಾತ್ರಾ ಸಂಭ್ರಮದ ವೇಳೆ ಅವಘಡವೊಂದು ಸಂಭವಿಸಿದೆ. ಭಕ್ತರು ಅಪಶಕುನ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ರಥದಲ್ಲಿರುವ ಅರ್ಚಕರು, ಹಾಗೂ ಅಲ್ಲೇ ಪಕ್ಕದಲ್ಲೇ ಇರುವ ಕೆಲವು ಭಕ್ತಾದಿಗಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ದುರ್ಗಾ ಪರಮೇಶ್ವರಿ ರಥೋತ್ಸವದ ಸಂದರ್ಭದಲ್ಲಿ ಮುರಿದ ತೇರು

ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಳದ ರಥೋತ್ಸವ ಅದ್ಧೂರಿಯಾಗಿ ಸಾಗಿತ್ತು. ರಥ ಬೀದಿಗಳಲ್ಲಿ ರಥೋತ್ಸವ ಸಾಗುತ್ತಿದ್ದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿದಿದೆ. ತೇರಿನ ಮೇಲ್ಬಾಗ ಕುಸಿದ ವೇಳೆ ಅರ್ಚಕರು ತೇರಿನಲ್ಲೇ ಇದ್ದರು, ಅದೃಷ್ಟವಶಾತ್  ಯಾವುದೇ ಗಂಭೀರ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

ರಾತ್ರಿ ರಥೋತ್ಸವದ ವೇಳೆ ಅವಘಡ 

ರಾತ್ರಿ‌ ಸುಮಾರು 1.40-2.00 ಗಂಟೆ ವೇಳೆಗೆ ತೇರು ಮುರಿದು ಬಿದ್ದ ಘಟನೆ ನಡೆದಿದೆ ಎನ್ನಲಾಗ್ತಿದೆ. ರಾತ್ರಿ ವೇಳೆಯೂ ಕೂಡ ರಥತೋತ್ಸವ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಈ ಅವಘಡದಿಂದ, ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಭಕ್ತರ ಸಮೂಹದಲ್ಲಿ ಆತಂಕ

ರಥದ ಮುಂಭಾಗ ಕುಸಿದ ಬಳಿಕ ಚಂದ್ರಮಂಡಲ ತೇರಿನಲ್ಲಿ ದೇವರ ಉತ್ಸವ ಮುಂದುವರೆಯಿತು. ರಥೋತ್ಸವದ ವೇಳೆ ತೇರು ಕುಸಿದ ಕಾರಣ ಭಕ್ತರ ಸಮೂಹದಲ್ಲಿ ಆತಂಕ ಹೆಚ್ಚಾಗಿದೆ. ತೇರಿನ ಮುಂಭಾಗ ಕುಸಿದಿದ್ದು ಅಪಶಕುನವಾಗಿದ್ದು, ಮುಂಬರುವ ಅಪಾಯದ ಮುನ್ಸೂಚನೆ ಎಂದು ಭಕ್ತರು ಮಾತಾಡಿಕೊಳ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!