spot_img
Wednesday, April 1, 2026
spot_img

ಕುಂದಾಪುರ : ತೋಟಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಕಿಡಿಗೇಡಿಗಳು !

ಜನಪ್ರತಿನಿಧಿ (ಕುಂದಾಪುರ) : ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಡಿ ಮೇಲ್ ಹೊಸೂರು ಎಂಬಲ್ಲಿ ಬಾಳೆ ಹಾಗೂ ತೆಂಗಿನ ಕೃಷಿ ಮಾಡಿದ್ದ ತೋಟಕ್ಕೆ ನುಗ್ಗಿದ ಕಿಡಿಗೇಡಿಗಳು ಸೋಮವಾರ ರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ನಡೆದಿದೆ.

ಮರ್ಡಿ ಮೇಲ್ ಹೊಸೂರಿನ ಬಾಲಕೃಷ್ಣ ಶೆಟ್ಟಿ ಎಂಬುವವರ ಪತ್ನಿ ಗಣಪು ಶೆಡ್ತಿ ಎನ್ನುವವವರು, ತೋಟಕ್ಕೆ ಹಾಗೂ ವಾಸ್ತವ್ಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಹಾಗೂ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಪೊಲೀಸರಲ್ಲಿ ದೂರು ಸಲ್ಲಿಸಿದ್ದಾರೆ.

ಸೋಮವಾರ ತಡರಾತ್ರಿ 1 ಗಂಟೆಗೆ ವೇಳೆಗೆ, ಮನೆಯಲ್ಲಿ ಮಲಗಿದ್ದವರು, ಎಚ್ಚರಗೊಂಡು ನೋಡಿದಾದ ಆರೋಪಿಗಳಾದ ನಾಗರತ್ನ, ಸಿಂಗಾರಿ ಮತ್ತು ಇತರ 2-3 ಜನ ಗಂಡಸರು ಸ್ಥಳದಲ್ಲಿದ್ದು, ಅವರು ತೋಟಕ್ಕೆ ಮತ್ತು ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚಿರುವುದನ್ನು ಕಂಡು ಆಕೆ ಗಟ್ಟಿಯಾಗಿ ಕೂಗಿಕೊಂಡಾಗ, ಗಂಡಸರು ಓಡಿ ಹೋಗಿದ್ದಾರೆ. ಸ್ಥಳದಲ್ಲಿದ್ದ ನಾಗರತ್ನ ಕೈಯಲ್ಲಿ ಪೆಟ್ರೋಲ್ ಹಾಗೂ ಸಿಂಗಾರಿ ಕೈಯಲ್ಲಿ ಹಿಡಿದಿದ್ದ ಕತ್ತಿಯಲ್ಲಿ ಕೆಲ ಬಾಳೆ ಗಿಡಗಳನ್ನು ಕಡಿದು ಹಾಗೂ ಕಿತ್ತು ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ನಿನಗೆ ಎಚ್ಚರವಾಗದೇ ಇದ್ದಿದ್ದರೇ ಸುಟ್ಟು ಕರಕಲಾಗುತ್ತಿದ್ದೆ. ಇನ್ನು ಮುಂದೆ ಕೂಡ ನಿನ್ನನ್ನು ಬೆಂಕಿ ಹಾಕಿ ಕೊಲೆ ಮಾಡದೇ ಬಿಡುವುದಿಲ್ಲ ಎಂಬುದಾಗಿ ಇಬ್ಬರು ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ಸುಮಾರು ₹ 60 ಸಾವಿರ ನಷ್ಟವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!