spot_img
Thursday, March 19, 2026
spot_img

ಕಾರಣೀಕ ಪ್ರಸಿದ್ಧ ಲಕ್ಕೊಳ್ಳಿ ಸಿದ್ಧಿವಿನಾಯಕ ದೇವಸ್ಥಾನ: ಏ.21ಕ್ಕೆ ನೂತನ ಸ್ವಾಗತ ಗೋಪುರ ಉದ್ಘಾಟನೆ

 

ಕುಂದಾಪುರ: ಶಂಕರನಾರಾಯಣ ಸಿದ್ದಾಪುರದ ಕಡೆಗೆ ಪ್ರಯಾಣಿಸುವಾಗ ಸರಕಾರಿ ಪದವಿಪೂರ್ವ ಕಾಲೇಜಿನ ಬಳಿ ಕಾಣಿಸುವ ಪುಟ್ಟ ದೇವಸ್ಥಾನವೇ ಲಕ್ಕೊಳ್ಳಿ ಶ್ರೀ ಸಿದ್ದಿವಿನಾಯಕ ದೇವಸ್ಥಾನ. ಕಾರಣಿಕ ಪ್ರಸಿದ್ಧ ಈ ದೇವಸ್ಥಾನಕ್ಕೆ ಸುಂದರವಾದ ಸ್ವಾಗತಗೋಪುರ ನಿರ್ಮಾಣ ಮಾಡಲಾಗಿದ್ದು ಏ.21 ಸೋಮವಾರ ಉದ್ಘಾಟನೆ ನೆರವೇರಲಿದೆ.

ಕ್ಷೇತ್ರ ಇತಿಹಾಸ: ಹಿಂದೆ ಹುಲ್ಲಿನ ಮಾಡು ಹಾಗೂ ಮಣ್ಣಿನ ಗೋಡೆಗಳಿಂದ ಚಿಕ್ಕ ಗುಡಿಯಂತೆ ಇದ್ದ ಈ ದೇಗುಲ ಸುಮಾರು ೨೫ ವರ್ಷಗಳ ಹಿಂದೆ ಚಾರ್ಮಕ್ಕಿ ದಿ.ನಾರಾಯಣ ಶೆಟ್ಟಿ ಯವರ ಕುಟುಂಬ ಹಾಗೂ ಊರ ಭಕ್ತಾದಿಗಳು ಸೇರಿ ದೇವಸ್ಥಾನವನ್ನು ನಿರ್ಮಿಸಿದ್ದು. ಇದೀಗ ಭಕ್ತಾದಿಗಳ ನೆರವಿನಿಂದ ಸ್ವಾಗತ ಗೋಪುರದ ಭಾಗ್ಯ ಕಂಡಿದೆ. ಸುತ್ತಲಿನ ಶಂಕರನಾರಾಯಣ ಕುಳ್ಳುಂಜೆ ಹಾಗೂ ಸುತ್ತಮುತ್ತಲಿನ ಊರಿನ ಭಕ್ತಾದಿಗಳು ನಂಬಿಕೊಂಡು ಬಂದಿದ್ದು ಭಕ್ತಾದಿಗಳ ಬೇಡಿಕೆಯನ್ನು ಶ್ರೀ ಸಿದ್ದಿವಿನಾಯಕ ನಡೆಸುತ್ತಾನೆ ಎನ್ನುವ ನಂಬಿಕೆ ಇದೆ.
ಈ ದೇವಾಲಯವು ಅತಿ ಪುರಾತನವಾಗಿದ್ದು ದೇವಸ್ಥಾನದ ಎದುರಿನಲ್ಲಿ ಇರುವ ಕೆರೆ ಮೊದಲಾದ ಅವಶೇಷಗಳು ಇದಕ್ಕೆ ಪುಷ್ಟಿ ನೀಡುತ್ತಿದೆ. ಶ್ರೀ ಕ್ರೋಢ ಶಂಕರನಾರಾಯಣ ದೇವಸ್ಥಾನ ಕ್ಕೂ ಈ ಸಿದ್ದಿವಿನಾಯಕನಿಗೂ ಸಂಬಂದವಿರುವುದನ್ನು ಅನೇಕರು ಉಲ್ಲೇಖಿಸುತ್ತಾರೆ. ಶಂಕರನಾರಾಯಣ ಕ್ಷೇತ್ರ ಮಹಾತ್ಮೆಯಲ್ಲಿ ಬರುವ ಖರ ರಟ್ಟಾಸುರರು ತಮಗೆ ಮರಣ ನಿಶ್ಚಿತ ಎಂದು ಅರಿತು ಈ ಸ್ಥಳದಲ್ಲಿ ಹೊಕ್ಕೊಳ್ಳುತ್ತಾರೆ. ಇದನ್ನು ಅರಿತ ಗಣಪತಿ ಶಂಕರನಾರಾಯಣ ದೇವರಿಗೆ ತಿಳಿಸುತ್ತಾನೆ. ಹಾಗೇಯೇ ಇಲ್ಲಿಭಕ್ತರ ಬೇಡಿಕೆಯನ್ನು ಈಡೇರಿಸುವ ಶ್ರೀ ಸಿದ್ಧಿವಿನಾಯಕನಾಗಿ ನೆಲೆ ನಿಲ್ಲುತ್ತಾನೆ. ಹಾಗೇಯೇ ಖರ ರಟ್ಟಾಸುರರು ಹೊಕ್ಕೊಂಡ ಸ್ಥಳವಾದ್ದರಿಂದ ಈ ಸ್ಥಳಕ್ಕೆ ಹೊಕ್ಕೊಳಿ ಕಾಲಕ್ರಮೇಣ ಲಕ್ಕೊಳ್ಳಿ ಎನ್ನುವುದಾಗಿ ಹೆಸರನ್ನು ಪಡೆಯುತ್ತದೆ ಎಂದು ಹೇಳುತ್ತಾರೆ.

ಈ ದೇವಸ್ಥಾನ ಇರುವ ಜಾಗ ಹಿಂದೆ ರಾಯರ ಕುಟುಂಬಕ್ಕೆ ಸೇರಿದ್ದು. ಈ ರಾಯರ ಕುಟುಂಬದವರು ಸಾಗರ ಸಮೀಪದ ಬಿಳಗಿ ಅರಸರ ಆಸ್ಥಾನದಲ್ಲಿ ಲೆಕ್ಕಾಧಿಕಾರಿಗಳಾಗಿದ್ದು. ಈ ವಂಶದವರು ತುಂಬಾ ಗೌರವಕ್ಕೆ ಪಾತ್ರರಾಗಿದ್ದರು. ಹಿಂದೆ ಇವರ ಹಿರಿಯರನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿಸುತ್ತಿದ್ದರು ಎನ್ನುವ ಪ್ರತೀತಿಯು ಇದೆ. ಮುಂದೆ ಯುದ್ಧದ ಕಾಲದಲ್ಲಿ ಘಟ್ಟದ ಕೆಳಗೆ ಬಂದು ನೆಲೆಸಿದರು ಎನ್ನುವ ಮಾಹಿತಿಯನ್ನು ಈ ಕುಟುಂಬದ ಹಿರಿಯರು ನೀಡುತ್ತಾರೆ. ಕುಂಬಾರಮಕ್ಕಿ ಮೆಕೋಡು ಲಕ್ಕೊಳ್ಳಿ ಹೀಗೆ ದೊಡ್ಡ ಭೂ ಮಾಲೀಕರಾಗಿದ್ದ ಈ ವಂಶದ ಹಿರಿಯರು ಅನೇಕ ದೇವಸ್ಥಾನಗಳ ಉಸ್ತುವಾರಿಯನ್ನು ನಡೆಸಿಕೊಂಡು ಬಂದಿದ್ದು. ಅದರಲ್ಲಿ ಈ ಲಕ್ಕೊಳ್ಳಿ ದೇವಸ್ಥಾನವು ಒಂದು. ಈ ಗಣಪತಿಯ ವಿಶೇಷ ಮಹಿಮೆಯನ್ನು ಅರಿತ್ತಿದ್ದ ರಾಯರ ಕುಟುಂಬದವರು ಇದರ ಪೂಜೆಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ಕೆದ್ಲಾಯರು ಎನ್ನುವ ಅರ್ಚಕ ಮನೆತನದವರಿಗೆ ಒಂದಿಷ್ಟು ಜಾಗವನ್ನು ಉಂಬಳಿಯಾಗಿ ನೀಡಿ ಪೂಜೆ ನಿರ್ವಿಘ್ನವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಇಂದಿಗೂ ಈ ಕೆದ್ಲಾಯ ಮನೆತನದವರು ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದು. ಹಿರಿಯರಾದ ಶಂಕರನಾರಾಯಣ ಕೆದ್ಲಾಯರ ಮಾರ್ಗದರ್ಶನದಲ್ಲಿ ದೇವಸ್ಥಾನದಲ್ಲಿ ಗಣಹೋಮ ಕಡಬಿನ ಸೇವೆ ಮೂಡುಗಣಪತಿ ವಾರ್ಷಿಕ ವರ್ದಂತಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಗಣೇಶ ಕೆದ್ಲಾಯರು ಹಾಗೂ ಸಹೋದರರು ನಡೆಸಿಕೊಂಡು ಬರುತ್ತಿದ್ದಾರೆ. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನಿವೃತ್ತ ಮುಖ್ಯೋಪಾಧ್ಯಾಯ ಎಂ ವಿಶ್ವನಾಥ್ ಶೆಟ್ಟಿಯವರ ನೇತೃತ್ವದಲ್ಲಿ ಇದೀಗ ಸ್ವಾಗತ ಗೋಪುರ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ.

ಈ ದೇವಸ್ಥಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿದ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆಯಿದ್ದು ಉಚಿತವಾಗಿ ನೇತ್ರ ಚಿಕಿತ್ಸೆ ಲಭ್ಯವಿದೆ. ರಾಜ್ಯದಲ್ಲಿಯೇ ವಿಶಿಷ್ಠವಾದ ಕಣ್ಣಿನ ಆಸ್ಪತ್ರೆ ಇದಾಗಿದೆ. ಈ ಕಣ್ಣಿನ ಆಸ್ಪತ್ರೆಯ ಸಮೀಪದಲ್ಲಿಯೇ ಪುರಾಣ ಪ್ರಸಿದ್ಧ ಲಕ್ಕೊಳ್ಳಿ ಸಿದ್ಧಿವಿನಾಯಕ ದೇವಸ್ಥಾನ ಇರುವುದು ವಿಶೇಷ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!