spot_img
Saturday, March 21, 2026
spot_img

ಕುಂದಾಪುರ ಕಲಾಕ್ಷೇತ್ರದಿಂದ ಡಾ. ರಾಜಕುಮಾರ್ ಪುಣ್ಯಸ್ಮರಣೆ

ಕುಂದಾಪುರ: ಡಾ.ರಾಜಕುಮಾರ್ ಧನದಾಹಿ ಆಗಿರದೆ ಗುಣಗ್ರಾಹಿ ಆಗಿದ್ದರು. ಅವರು ತನ್ನ ಅನುಪಮ, ಅಸಾಧಾರಣ, ಅದ್ವಿತೀಯ ಸ್ವಭಾವದಿಂದ, ನಡವಳಿಕೆಯಿಂದ, ವಿನಯದಿಂದ ಸಮಯ ಪರಿಪಾಲನೆಯಿಂದ, ಅಭಿನಯದಿಂದ, ಸಂಭಾಷಣೆ ಹೇಳುವ ಪ್ರತಿಭೆಯಿಂದ, ಉಚ್ಛಾರಣೆಯ ಸ್ಪಷ್ಟತೆಯಿಂದ, ಮಾಧುರ್ಯಭರಿತ ಕಂಠಸಿರಿಯಿಂದ, ತಾನು ಮೈಗೂಡಿಸಿಕೊಂಡ ಯೋಗದ ಹವ್ಯಾಸದಿಂದ ಸಿದ್ದಿಸಿಕೊಂಡ ಸುಂದರವಾದ ಮೈಕಟ್ಟಿನಿಂದ ಎಲ್ಲರನ್ನು ಬೆರಗುಗೊಳಿಸಿದ ಕಲಾಮಾಣಿಕ್ಯ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಕಛೇರಿಯಲ್ಲಿ ಹಮ್ಮಿಕೊಳ್ಳಲಾದ ಡಾ.ರಾಜ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಕಲಾಕ್ಷೇತ್ರ ಅಂಗ ಸಂಸ್ಥೆಯಾದ ಗೀತಗಾಯನದ ಸಂಚಾಲಕರಾದ ಸನತ್ ಕುಮಾರ್ ರೈಯವರು ಮಾತನಾಡುತ್ತಾ ಹೇಳಿದರು.

ಡಾ. ರಾಜ್‌ರವರು ಕೇವಲ ಕರ್ನಾಟಕದಲ್ಲಷ್ಟೆ ಪ್ರಸಿದ್ದರಲ್ಲ, ಒಬ್ಬ ಶ್ರೇಷ್ಠ ನಟನಾಗಿ ಅಷ್ಟೇ ಪ್ರಬುದ್ಧ ಗಾಯಕನಾಗಿ ಗುರುತಿಸಿಕೊಂಡ ವಿಶ್ವದ ಏಕೈಕ ವ್ಯಕ್ತಿ ಇದ್ದರೆ ಅದು ಕರುನಾಡಿನ ಡಾ.ರಾಜ್‌ಕುಮಾರ್ ಎಂಬುವುದು ನಮ್ಮ ಹೆಮ್ಮೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ಕಾರ್ಯದರ್ಶಿ ತ್ರಿವಿಕ್ರಮ ಪೈ, ಕೆ.ಆರ್.ನಾಯ್ಕ್, ರಾಜೇಶ್ ಕಾವೇರಿ, ಪ್ರವೀಣ್ ಕುಮಾರ್ ಟಿ, ಗೋಪಾಲ ವಿ, ಶ್ರೀಧರ ಸುವರ್ಣ, ದಾಮೋದರ್ ಪೈ, ರಾಮಚಂದ್ರ ಬಿ.ಎನ್, ಜೋಯ್ ಕರ್ವೆಲ್ಲೋ, ಮತ್ತು ಗೀತಗಾಯನದ ಸದಸ್ಯರಾದ ಮೋಹನ್ ಸಾರಂಗ್, ಡಾ. ರಾಜಾರಾಮ್, ಡಾ ಅಮ್ಮಾಜಿ, ಹೆಚ್ ಗುರುಪ್ರಸಾದ್, ಪಾರ್ವತಿ ಟೀಚರ್, ಡಾ ನಂದಿನಿ, ಕಿರಣ್ ಶಿವಕುಮಾರ್, ಜ್ಯೋತಿ ಶರತ್, ವೀಣಾ ಕಮಲಾಕ್ಷ, ಶಂಕರನಾರಾಯಣ, ಡಾ ಕೃಷ್ಣರಾವ್, ಡಾ ಹರಿಪ್ರಸಾದ್, ಮೀರಾಬಾ ಕಾಮತ್, ಆನಂದ ಕೋಡಿ, ಡಾ ದುರ್ಗಾಪ್ರಸಾದ ಹೆಗ್ಡೆ, ಹೇಮಾ ಆರ್ ,ಸುಗುಣಾ ರಮೇಶ್, ಸೌಜನ್ಯ, ಕಮಲ್ ಕುಂದಾಪುರ ಇನ್ನಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!