spot_img
Saturday, March 21, 2026
spot_img

ಕುಂದಾಪುರ ಬಿಜೆಪಿ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ

ಕುಂದಾಪುರ: ಸಂವಿಧಾನ ಶಿಲ್ಪಿ ಭಾರತ ರತ್ನ ಮಹಾ ಮಾನವತಾವಾದಿ ಬಾಬಾ ಸಾಹೇಬ್ ಡಾ ಬಿ.ಆರ್. ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಕುಂದಾಪುರದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಆಚರಿಸಲಾಯಿತು.

ಕುಂದಾಪುರ ಮಂಡಲ ಬಿಜೆಪಿ ಕ್ಷೇತ್ರಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂವಿಧಾನ ಶಿಲ್ಪಿ ಭಾರತ ರತ್ನ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ಸಂವಿಧಾನ ಶಿಲ್ಪಿ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ.ಭೀಮರಾವ್ ಅಂಬೇಡ್ಕರ್ ಅವರ ಬದುಕು, ತತ್ವ, ಆದರ್ಶಗಳು, ಚಿಂತನೆಗಳು ಪ್ರೇರಣೆಯಾಗಿದೆ. ಪ್ರಗತಿ, ಸಮಾನತೆಯ ಕನಸು ಕಂಡ ಈ ಮೇರು ನಾಯಕನ ಬದುಕು ಸ್ಫೂರ್ತಿದಾಯಕ. ಹಲವಾರು ನೋವು, ಅವಮಾನ, ನಿಂದನೆಗಳನ್ನು ಎದುರಿಸಿ ಅಸ್ಪೃಶ್ಯತೆಯೆಂಬ ಪಿಡುಗನ್ನು ಹೋಗಲಾಡಿಸಲು ಶ್ರಮಿಸಿದ, ಸಮಾನತೆ, ಪ್ರಗತಿಯ ಕನಸು ಕಂಡ ಈ ಮೇರು ನಾಯಕ ಆದರ್ಶ, ಚಿಂತನೆಗಳು, ಜೀವನ ತತ್ವಗಳು, ಜೀವನ ಆದರ್ಶ ಸರ್ವಕಾಲಕ್ಕೂ ಸ್ಮರಣೀಯವಾದದ್ದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್.ಕೆ.ಎಸ್. ಎಸ್ ಸಿ. ಮೋರ್ಚಾದ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಗೋಪಾಲ ಕಳಂಜಿ, ಕುಂದಾಪುರ ಮಂಡಲ ಉಪಾಧ್ಯಕ್ಷರಾದ ಸುನಿಲ್ ಶೆಟ್ಟಿ ಹೇರಿಕುದ್ರು, ರೂಪಾ ಬಾಬು ಪೈ, ಕುಂದಾಪುರ ಎಸ್.ಸಿ. ಮೋರ್ಚಾದ ಅಧ್ಯಕ್ಷ ಮಂಜುನಾಥ್ ಬಳ್ಕೂರು, ಕುಂದಾಪುರ ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಕಾಂಚನ್ ಸಂಗಮ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ, ರೈತ ಮೋರ್ಚಾ ಅಧ್ಯಕ್ಷ ಜಯಶೀಲ್ ಶೆಟ್ಟಿ, ಓಬಿಸಿ ಮೋರ್ಚಾ ಉಪಾದ್ಯಕ್ಷ ದಯಾನಂದ ಖಾರ್ವಿ, ಪುರಸಭಾ ಸದಸ್ಯರಾದ ಶೇಖರ್ ಪೂಜಾರಿ, ಗಿರೀಶ್ ಜಿ.ಕೆ. ಹಾಗೂ ಪಕ್ಷದ ಮುಖಂಡರಾದ ನರಸಿಂಹ ತೆಕ್ಕಟ್ಟೆ ದಿನೇಶ್ ಮುಂತಾದವರು ಉಪಸ್ಥಿರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!