spot_img
Sunday, March 22, 2026
spot_img

ಏ.22ರಿಂದ ಏ.25: ಶ್ರೀ ಮಹಾಲಿಂಗೇಶ್ವರ ಸನ್ನಿಧಿ, ಮಕ್ಕಿ ದೇವಸ್ಥಾನ ನೂತನ ಶಿಲಾ ದೇಗುಲ ಸಮರ್ಪಣೆ

ಬೈಂದೂರು: ಬೈಂದೂರು ತಾಲೂಕು ಬಿಜೂರು ಗ್ರಾಮದ ಶ್ರೀ ಮಹಾಲಿಂಗೇಶ್ವರ ಸನ್ನಿಧಿ, ಮಕ್ಕಿ ದೇವಸ್ಥಾನದ ಶಿಲಾ ದೇಗುಲದ ಲೋಕಾರ್ಪಣೆ, ಶಿಖರ ಕಲಶ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಕೋಟಿ ಶಿವ ಪಂಚಾಕ್ಷರಿ ಜಪ-ಯಜ್ಞ, ಮಹಾ ಅನ್ನಸಂತರ್ಪಣೆ, ಧಾರ್ಮಿಕ-ಸಾಂಸ್ಕøತಿಕ ವೈಭವೋತ್ಸವ ದಿನಾಂಕ 22-04-2025ರಿಂದ 25-04-2025ರ ವರೆಗೆ ನಡೆಯಲಿದೆ.

ಮಕ್ಕಿ ದೇವಸ್ಥಾನದ ದಿ. ಶಿವಭಟ್ಟರ ಪ್ರೇರಣೆಯಂತೆ ದಿ. ಉಮಾಭಾಯಿ ಮತ್ತು ದಿ. ಮಹಾಬಲೇಶ್ವರ್ ರಾವ್ ಸ್ಮರಣಾರ್ಥ `ಶ್ರೀ ಪ್ರಭಾಕರ್ ಮಹಾಬಲೇಶ್ವರ್ ರಾವ್ ಮತ್ತು ಶ್ರೀಮತಿ ಸುಮಲತ ಪ್ರಭಾಕರ್ ರಾವ್ ಬಂಟ್ವಾಳ್ ಪುಣೆ” ಇವರಿಂದ ನೂತನವಾಗಿ ನಿರ್ಮಿಸಿದ ಮಕ್ಕಿ ಮಹಾಲಿಂಗೇಶ್ವರ ದೇವರ ನೂತನ ಶಿಲಾ ದೇಗುಲ ಸಮರ್ಪಣೆ, ಶಿಖರ ಕಲಶ ಪ್ರತಿಷ್ಠಾ, ಬ್ರಹ್ಮಕಲಶೋತ್ಸವ, ಕೋಟಿ ಶಿವ ಪಂಚಾಕ್ಷರಿ ಯಜ್ಞ ರಾಜರ್ಷಿ ಡಾ| ಡಿ| ವೀರೇಂದ್ರ ಹೆಗ್ಗಡೆಯವರ ಶುಭ ಹಾರೈಕೆಗಳೊಂದಿಗೆ, ದಿನಾಂಕ 23-04-2025ನೇ ಬುಧವಾರ ದಿವಾಗಂಟೆ 9.25ಕ್ಕೆ ಸಲುವ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠ ಇವರ ದಿವ್ಯಾಮೃತ ಹಸ್ತದಿಂದ ಶಿಲಾದೇಗುಲ ಲೋಕಾರ್ಪಣೆ, ಶಿಖರ ಕಲಶ ಪ್ರತಿಷ್ಠಾ, ಬ್ರಹ್ಮಕಲಶೋತ್ಸವ (ಕಲಶಾಭಿಷೇಕ) ಜರಗಲಿವೆ.

ಈ ದೇವತಾ ಕಾರ್ಯವು ವೇ| ಮೂ| ತಾಂತ್ರಿಕ ಆಗಮ ಶಾಸ್ತ್ರಜ್ಞ ಕಟ್ಟೆ ಶಂಕರ ಪರಮೇಶ್ವರ ಭಟ್ಟ, ವೇ| ಮೂ| ವಿಶ್ವನಾಥ ಭಟ್ಟ ತಲ್ಲೂರು, ವೇ| ಮೂ| ತಾಂತ್ರಿಕ ದಿಲೀಪ ಶ್ರೀಧರ ಭಟ್ಟ ಷಡಕ್ಷರಿ ಗೋಕರ್ಣ ಇವರ ಸಹಭಾಗಿತ್ವದಲ್ಲಿ ನಡೆಯಲಿದೆ.

ದಿನಾಂಕ 22-04-2025ನೇ ಮಂಗಳವಾರ ಬೆಳಿಗ್ಗೆ 8-00ಕ್ಕೆ ಧಾರ್ಮಿಕ ಕಾರ್ಯಕ್ರಮಗಳ ಪ್ರಾರಂಭ,ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯ ಮಠ, ಕುಕ್ಕೆ ಸುಬ್ರಹ್ಮಣ್ಯ ಇವರ ದಿವ್ಯ ಉಪಸ್ಥಿತಿಯಲ್ಲಿ ಅಷ್ಟೋತ್ತರ ಶತ ನಾಳಿಕೇರ ಖಂಡ ಮಹಾ ಗಣಪತಿ ಯಾಗದ ಪೂರ್ಣಾಹುತಿ. ಮಹಾಪೂಜಾ, ಮಹಾಮಂಗಳಾರತಿ, ಮಧ್ಯಾಹ್ನ ಗಂಟೆ 12:30ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 6:00 ರಿಂದ ವಿವಿಧ ಹೋಮಹವನಾದಿಗಳು, ಬ್ರಹ್ಮಮಂಡಲ ದರ್ಶನ, ಬ್ರಹ್ಮಕಲಶ ಸ್ಥಾಪನೆ, ಬ್ರಹ್ಮಕಲಶ ಅಧಿವಾಸ ಹೋಮ, ನವಕುಂಡಗಳಲ್ಲಿ ಅಧಿವಾಸ ಹೋಮ, ಮಹಾಮಂಗಳಾರತಿ, ಪ್ರಸಾದ ವಿತರಣೆ. ರಾತ್ರಿ ಗಂಟೆ 8:00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ 23-04-2025ನೇ ಬುಧವಾರ ಬೆಳಿಗ್ಗೆ 6:00ಕ್ಕೆ ಗುರುಗಣಪತಿ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ಆರಂಭ. ದಿವಾಗಂಟೆ 9:25ಕ್ಕೆ ಸಲುವ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠ ಇವರ ದಿವ್ಯಾಮೃತ ಹಸ್ತದಿಂದ ಶಿಲಾದೇಗುಲ ಲೋಕಾರ್ಪಣೆ, ಶಿಖರ ಕಲಶ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಈಶಾನ ಸಂಹಿತೋಕ್ತ ಮಹಾರುದ್ರಯಾಗದ ಪೂರ್ಣಾಹುತಿ. ಶ್ರೀ ಸೂಕ್ತ ಹವನ, ಸರ್ಪ ಸೂಕ್ತ ಹವನ, ಧ್ವಜಾರೋಹಣ, ಧ್ವಜಬಲಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ. ಮಧ್ಯಾಹ್ನ ಗಂಟೆ 12:30ಕ್ಕೆ ಮಹಾ ಅನ್ನಸಂತರ್ಪಣೆ ಸಂಜೆ ಗಂಟೆ 6:00 ರಿಂದ ಅಧಿವಾಸ ಹೋಮ, ಸುದರ್ಶನಾಸ್ತ ಹೋಮ, ಪಾಶುಪತಾಸ್ತ್ರ ಹೋಮ, ಆಶ್ಲೇಷ ಬಲಿ, ರಂಗಪೂಜಾ, ಅಷ್ಟಾವದಾನ ಸೇವೆ, ಬಲಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ. ರಾತ್ರಿ ಗಂಟೆ 8:00 ರಿಂದ ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ 24-04-2025ನೇ ಗುರುವಾರ ಬೆಳಿಗ್ಗೆ 7:00ರಿಂದ ಗುರುಗಣಪತಿ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ಆರಂಭ. ದಿವ್ಯಕ್ಷೇತ್ರ ಹರಿಪುರದ ಶ್ರೀ ಆದಿಶಂರಾಚಾರ್ಯ ಶಾರದ ಲಕ್ಷ್ಮೀನೃಸಿಂಹ ಪೀಠಾಧೀಶ್ವರರಾದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶತಚಂಡಿಕಾ ಯಾಗ ಪುರ್ಣಾಹುತಿ. ಪುರುಷ ಸೂಕ್ತ ಹವನ, ಶಾಂತಿ ಪ್ರಾಯಶ್ಚಿತ್ತ ಹೋಮಗಳು, ಮಹಾ ಮಂಗಳಾರತಿ ಪ್ರಸಾದ ವಿತರಣೆ. ಮಧ್ಯಾಹ್ನ ಗಂಟೆ 12:30ರಿಂದ ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 6:00 ರಿಂದ ವಿವಿಧ ಹೋಮಗಳು, ಅರಣಿ ಮಥನ, ಅಷ್ಟಾವದಾನ ಸೇವೆ, ಶ್ರೀರಂಗ ಪೂಜಾ, ಕಟ್ಟೆ ಉತ್ಸವ, ಧ್ವಜಾವರೋಹಣ, ಮಹಾ ಮಂಗಳಾರತಿ, ಪ್ರಸಾದ ವಿತರಣೆ. ರಾತ್ರಿ ಗಂಟೆ 8:00ರಿಂದ ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ 25-04-2025ನೇ ಶುಕ್ರವಾರ ಬೆಳಿಗ್ಗೆ ಗಂಟೆ 6:00 ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭ, 11:00 ಗಂಟೆಗೆ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಮಹಾಸ್ವಾಮಿಗಳು ಪೇಜಾವರ ಅಧೋಕ್ಷಜ ಮಠ ಉಡುಪಿ ಇವರ ದಿವ್ಯ ಸಾನಿಧ್ಯದಲ್ಲಿ ಕೋಟಿ ಶಿವ ಪಂಚಾಕ್ಷರಿ ಜಪ ಯಜ್ಞ ಪೂರ್ಣಾಹುತಿ, ಕಲಶಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ. ಮಧ್ಯಾಹ್ನ 12:30 ರಿಂದ ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 7:00 ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ, ರಾತ್ರಿ ಗಂಟೆ 8:00 ರಿಂದ ಮಹಾ ಅನ್ನಸಂತರ್ಪಣೆ.

ಸಾಂಸ್ಕೃತಿಕ ಕಾರ್ಯಕ್ರಮಗಳು:
ದಿನಾಂಕ 22-04-2025 ಮಂಗಳವಾರ ನಿರಂತರ ಭಜನಾ ಕಾರ್ಯಕ್ರಮ ಬೆಳಿಗ್ಗೆ 9:00 ರಿಂದ ಸಂಜೆ ಗಂಟೆ 5:00 ರ ತನಕ ಆಹ್ವಾನಿತ ಭಜನಾ ತಂಡಗಳಿಂದ ಸಂಜೆ ಗಂಟೆ 5:00 ರಿಂದ 6:30ರ ತನಕ ಸ್ಥಳೀಯ ಬಾಲ ಪ್ರತಿಭೆಗಳಿಂದ. ಸಂಜೆ ಗಂಟೆ 6:45 ರಿಂದ 8:15ರ ವರೆಗೆ ಯಕ್ಷಗಾನ ಗಾನ ವೈಭವ, ಗಾನ ಕೋಗಿಲೆ ವಿದ್ವಾನ್ ಶ್ರೀ ಗಣಪತಿ ಭಟ್ ಯಲಾಪುರ ಮತ್ತು ತಂಡ.
ರಾತ್ರಿ ಗಂಟೆ 8:30 ರಿಂದ 10.30ರ ವರೆಗೆ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇವರಿಂದ
ಗೊಂಬೆಯಾಟ ಚೂಡಾಮಣಿ-ಲಂಕಾದಹನ.

ದಿನಾಂಕ 23-04-2025 ಬುಧವಾರ ಸಂಜೆ ಗಂಟೆ 5-00 ರಿಂ 6:00 ರ ತನಕ ಸ್ಥಳೀಯ ಯುವ ಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವೋತ್ಸವ’ಸಂಜೆ ಗಂಟೆ 6-15 ರಿಂ 7:45 ರ ವರೆಗೆ ಹೆಸರಾಂತ ಪ್ರಸಿದ್ಧ ನೂಪುರ ತಂಡ ನಾಗೂರು ಇವರಿಂದ
ಅಮೋಘ ಶಾಸ್ತ್ರೀಯ ವೈವಿಧ್ಯಮಯ, ಭರತ ನಾಟ್ಯ ವೈಭವ ನಿರ್ದೇಶನ : ವಿದುಷಿ ಮಾನಸ ರಾಘವೇಂದ್ರ ಮಯ್ಯ ಸಾಲಿಗ್ರಾಮ
ರಾತ್ರಿ ಗಂಟೆ 8:00 ರಿಂದ 10:30ರ ತನಕ ಓಂಕಾರ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ವಿನೂತನ ಶೈಲಿಯ ಹೊಸ ಕುಂದಗನ್ನಡದ ಹಾಸ್ಯಮಯ ನಕ್ಕು ನಗಿಸುವ ನಗೆ ನಾಟಕ ‘ಎಂತಾರೂ ಬಿಡುದಿಲ’್ಲ.

ದಿನಾಂಕ 24-04-2025 ಗುರುವಾರ ಸಂಜೆ ಗಂಟೆ 4:00 ರಿಂ 6:00 ರ ತನಕ ಜಿಲ್ಲೆಯ ಸುಪ್ರಸಿದ್ದ ಹವ್ಯಾಸಿ ಕಲಾವಿದರ ಕೂಡುವಿಕೆಯಿಂದ ಶ್ರೀ ವೇದ ಮೂರ್ತಿ ನಾಗಭೂಷಣ ಭಟ್ಟರ ಸಾರಥ್ಯದಲ್ಲಿ ಹಾಗೂ ಯಕ್ಷಗಾನ ದಿಗ್ಗಜ ಗಾನ ಗಂಧರ್ವ ಹೇರಂಜಾಲು ಗೋಪಾಲ ಗಾಣಿಗರ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಲೆ ಪ್ರಸಂಗ : “ಶರಸೇತು ಬಂಧನ”. ದಿನಾಂಕ 24-04-2025 ಗುರುವಾರ ಸಂಜೆ ಗಂಟೆ 6:00 ರಿಂ 7:30 ರ ತನಕ ಸ್ಥಳೀಯ ಪ್ರತಿಭಾನ್ವಿತ ಪ್ರತಿಭೆಗಳಿಂದ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮ ರಾತ್ರಿ ಗಂಟೆ 8:00 ರಿಂದ 10:00ರ ವರೆಗೆ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಕಲಾವಿದರು ಮಂಗಳೂರು ಇವರು ಅಭಿನಯಿಸುವ ಕೊಲ್ಲೂರು ಶ್ರೀ ಮೂಕಾಂಬಿಕಾ ನೃತ್ಯ ಗಾಥೆ (ನಿರ್ದೇಶನ : ಶ್ವೇತಾ ಅರೆಹೊಳೆ)

ದಿನಾಂಕ 25-04-2025 ಶುಕ್ರವಾರ ಸಂಜೆ ಗಂಟೆ 5-00 ರಿಂ 7:00 ರ ತನಕ ಜಿಲ್ಲೆಯ ಸುಪ್ರಸಿದ್ಧ ಹೆಸರಾಂತ ಕಲಾವಿದೆ ಪ್ರಮೀಳಾ ಕುಂದಾಪುರ ಮತ್ತು ತಂಡದವರಿಂದ “ಸುಗಮ ಸಂಗೀತ” ಸಂಜೆ ಗಂಟೆ 7:15ರಿಂದ 10:ರ ತನಕ ಆಹ್ವಾನಿತ ಭಜನಾ ತಂಡಗಳಿಂದ “ಕುಣಿತ ಭಜನಾ ಸ್ಪರ್ಧೆ” ರಾತ್ರಿ ಗಂಟೆ 10:30 ರಿಂದ ರಸರಾಗ ಚಕ್ರವರ್ತಿ, ಕರಾವಳಿ ಗಾನ ಕೋಗಿಲೆ ಶ್ರೀ ರಾಘವೇಂದ್ರ ಮಯ್ಯರ ಸಾರಥ್ಯದಲ್ಲಿ ಮತ್ತು ನೀಲ್ನೋಡು ಶಂಕರ ಹೆಗಡೆ ಇವರ ಸಹಯೋಗದೊಂದಿಗೆ ಮಯ್ಯ ಯಕ್ಷ ಬಳಗ ಹಾಲಾಡಿ ಇವರಿಂದ ಅದ್ದೂರಿ ಯಕ್ಷಗಾನ ಪ್ರದರ್ಶನ “ಬ್ರಹ್ಮಕಪಾಲ -ಮೀನಾಕ್ಷಿ ಕಲ್ಯಾಣ” ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ:
ಏ.22ರಂದು ಪ್ರಾತಃಕಾಲ 8.30ಕ್ಕೆ ಶಿವಶಕ್ತಿ ಕಲಾ ವೇದಿಕೆಯಲ್ಲಿ ಸದ್ಯೋಜಾತ-ರಾಜ ಧರ್ಮ ಸಭೆ, ಧಾರ್ಮಿಕ, ಸಾಂಸ್ಕøತಿಕ ವೈಭವೋತ್ಸವದ ಶ್ರೀ ಭಗವನ್ ಧ್ವಜಾರೋಹಣ ಸಮಾರಂಭ ನಡೆಯಲಿದೆ. ಏ.22 ಮಧ್ಯಾಹ್ನ 2.30ರಿಂದ ವಾಮದೇವ-ಧರ್ಮದರ್ಶಿ ಸಭೆ ನಡೆಯಲಿದೆ. ಏ.23 ಮಧ್ಯಾಹ್ನ 12.30ರಿಂದ ಅಘೋರ ಗುರು ಬ್ರಹ್ಮಸಭೆ, ಏ.24 ಮಧ್ಯಾಹ್ನ 12.30ರಿಂದ ತತ್ಪುರುಷ-ಶ್ರೀಮಾತಾ ಸಭೆ ನಡೆಯಲಿದೆ. ಏ.25 ರಂದು ಮಧ್ಯಾಹ್ನ 12.30ಕ್ಕೆ ಈಶಾನ-ಶಿವ ಪಂಚಾಕ್ಷರಿ ಸಭೆ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!