spot_img
Friday, April 3, 2026
spot_img

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ  ಕಾಲೇಜಿಗೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ 100 ಫಲಿತಾಂಶದೊಂದಿಗೆ ರಾಜ್ಯ ಮಟ್ಟದ  10 ರ್‍ಯಾಂಕ್   

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 10 ರ್‍ಯಾಂಕ್  ಪಡೆಯುವುದರ ಮೂಲಕ  ಶೇ 100 ಫಲಿತಾಂಶ ದಾಖಲಿಸಿದೆ.
ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಸುಮಿತ್ರಾ ಭಟ್ (593 ) ರಾಜ್ಯಕ್ಕೆ 7ನೇ  ರ್‍ಯಾಂಕ್, ಸನ್ನಿದಿ ಎಮ್ (592) 8 ನೇ ರ್‍ಯಾಂಕ್, ಕೀರ್ತನಾ, ರಂಜಿತಾ (591) 9 ನೇ ರ್‍ಯಾಂಕ್, ಅನನ್ಯ, ಚೈತ್ರಾ, ನಿಶಾ, ಸಾತ್ವಿಕ್( 590) 10 ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.
 ವಾಣಿಜ್ಯ ವಿಭಾಗ ದಲ್ಲಿ  ವಿ. ದಿವೀಶ್ ಶೆಣೈ (592) 8 ನೇ ರ್‍ಯಾಂಕ್, ಪ್ರಣವಿ ಉಳ್ಳೂರ್. ಕೆ (590)  10 ನೇ ರ್‍ಯಾಂಕ್ ಪಡೆದುಕೊಳ್ಳುವುದರ ಮೂಲಕ ಸಾಧನೆ ಮೆರೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 308 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 183 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ  125 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ  ಉತ್ತೀರ್ಣ ರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ154 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 110 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 44ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಂಸ್ಕೃತ 42, ಸಂಖ್ಯಾಶಾಸ್ತ್ರ  26, ಕನ್ನಡ  18,  ವ್ಯವಹಾರ ಅಧ್ಯಯನ  12, ಗಣಿತ ಶಾಸ್ತ್ರ 11, ಕಂಪ್ಯೂಟರ್ ಸೈನ್ಸ್  9, ಲೆಕ್ಕಶಾಸ್ತ್ರ  07, ಅರ್ಥ  ಶಾಸ್ತ್ರ  7,  ರಸಾಯನ ಶಾಸ್ತ್ರ 04, ಭೌತಶಾಸ್ತ್ರ  03, ಜೀವಶಾಸ್ತ್ರ 02  ವಿಷಯವಾರು  ನೂರಕ್ಕೆ ನೂರು ಫಲಿತಾಂಶ ದಾಖಲಿಸಿ ಕಾಲೇಜಿನ  ಮೆರುಗನ್ನು  ಹೆಚ್ಚಿಸಿದ್ದಾರೆ.
ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು  ಅಭಿನಂದಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!