spot_img
Friday, April 3, 2026
spot_img

ಏ.14-17: ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ಉಳ್ಳೂರು-11: ಪುನಃ ಪ್ರತಿಷ್ಠಾ ಮಹೋತ್ಸವ ಬ್ರಹ್ಮಕಲಶೋತ್ಸವ

ಬೈಂದೂರು: ಬೈಂದೂರು ತಾಲೂಕು ಮೂಡುಮಠ, ಉಳ್ಳೂರು-11 ಗ್ರಾಮದ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವ ಮತ್ತು ಬ್ರಹ್ಮಕಲಶೋತ್ಸವ, ನೂತನ ಶಿಲಾ ದೇಗುಲ ಲೋಕಾರ್ಪಣೆ ಹಾಗೂ ನಾಗ ದೇವರ ಪುನಃ ಪ್ರತಿಷ್ಠೆ, ತೀರ್ಥಬಾವಿ, ಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವ ಏಪ್ರಿಲ್ 14ರಿಂದ ಏಪ್ರಿಲ್ 17ರ ತನಕ ನಡೆಯಲಿದೆ.

ಏಪ್ರಿಲ್ 14 ಸೋಮವಾರ ಬೆಳಿಗ್ಗೆ ಗಂಟೆ 7ರಿಂದ ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ದೇವ ನಾಂದಿ, ಋತ್ವಿಡ್ವರ್ಣಿ ಏಪ್ರಿಲ್ 15-04-2025ನೇ ಮಂಗಳವಾರ ಬೆಳಿಗ್ಗೆ ಗಂಟೆ 7:30 ರಿಂದ ಗುರುಗಣಪತಿ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಷಣ್ಣಾರಿಕೇಲ ಗಣಹೋಮ, ನವಗ್ರಹ ಹೋಮ, ಬಿಂಬ ಶುದ್ದಿ ಹೋಮ ಇತ್ಯಾದಿ. ಸಂಜೆ ಗಂಟೆ 4:30 ರಿಂದ ಸ್ಥಾನ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ. ಸಪ್ತಾಧಿವಾಸ ಇತ್ಯಾದಿ.  ಏಪ್ರಿಲ್ 16 ಬುಧವಾರ ಬೆಳಿಗ್ಗೆ ಗಂಟೆ 7:00 ರಿಂದ ಗುರುಗಣಪತಿ ಪೂಜೆ, ರತ್ನನ್ಯಾಸ ಪುರಸ್ಪರ ಶ್ರೀ ದೇವಿಯ ಪ್ರತಿಷ್ಠೆ, ತತ್ವನ್ಯಾಸಗಳು, ತತ್ವಹೋಮ, ತತ್ವಕಲಶಾಭಿಷೇಕ, ನಾಗ ದೇವರ ಪ್ರತಿಷ್ಠೆ ಇತ್ಯಾದಿಗಳು. ಮಧ್ಯಾಹ್ನ 12:00ರಿಂದ ತೀರ್ಥ ಪ್ರಸಾದ ವಿತರಣೆ ಹಾಗೂ “ಅನ್ನಸಂತರ್ಪಣೆ” ಸಂಜೆ ಗಂಟೆ 4:00 ರಿಂದ ಕಲಶ ಸ್ಥಾಪನೆ, ಅಧಿವಾಸ ಹೋಮ, ಪರಿವಾರ ದೈವಗಳ ಪ್ರತಿಷ್ಠಾದಿಗಳು ಏಪ್ರಿಲ್ 17 ಗುರುವಾರ ಬೆಳಿಗ್ಗೆ ಗಂಟೆ 7:00 ರಿಂದ ಬ್ರಹ್ಮಕುಂಭಾಭಿಷೇಕ, ಚಂಡಿಕಾ ಹೋಮ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ. ಮಧ್ಯಾಹ್ನ 12:30 ರಿಂದ “ಮಹಾಅನ್ನಸಂತರ್ಪಣೆ” (ಸೇವೆ: ಮಂಜುನಾಥ ಆಚಾರ್ಯ S/ಔ ಗೋಪಾಲ ಆಚಾರ್ಯ, ನೀರ್ಕೆರೆ, ಉಳ್ಳೂರು-11 ನಡೆಯಲಿದೆ.

ಏಪ್ರಿಲ್ 16ನೇ ಬುಧವಾರ ರಾತ್ರಿ 8 ಗಂಟೆಯಿಂದ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಬಯಲಾಟ ‘ಶುಭ ಲಕ್ಷಣ’ (ಸೇವೆ: ಶ್ರೀಮತಿ ಶಾಂತಾ ಮತ್ತು ರಾಜೀವ ಶೆಟ್ಟಿ ಉಳ್ಳೂರು-11) ಪ್ರದರ್ಶನಗೊಳ್ಳಲಿದೆ.

ಹೊರೆ ಕಾಣಿಕೆ ಸಮರ್ಪಣೆ ಏ.11 ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ 12 ಗಂಟೆಯ ತನಕ ದೇವಸ್ಥಾನದಲ್ಲಿ ಸ್ವೀಕರಿಸಲಾಗುವುದು. ದೇವಸ್ಥಾನದ ಈ ಎಲ್ಲಾ ಕಾರ್ಯಗಳಿಗೆ ದೇಣಿಗೆ ನೀಡುವವರು ಬ್ಯಾಂಕ್ ಆಫ್ ಬರೋಡಾ ತಲ್ಲೂರು ಶಾಖೆ ಖಾತೆ ನಂ. 81770100017742 IFSC CODE : BARBOVJTHAL ಇದಕ್ಕೆ ಜಮಾ ಮಾಡಬಹುದಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!