spot_img
Friday, April 25, 2025
spot_img

ಮಾ.23ರಂದು ಮಂದಾರ್ತಿಯಲ್ಲಿ ಹಿಲಿಯಾಣ ಬೆಳ್ಳಿಯಾನ | ರಜತ ಗುರು ಗೌರವ, ರಜತ ಸ್ಥಂಭ ಗೌರವ ಪ್ರದಾನ | ಅದ್ದೂರಿಯ ತೆಂಕು, ಬಡಗಿನ ಯಕ್ಷಗಾನ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ತೆಂಕು ಬಡಗಿನ ಪ್ರಸಿದ್ಧ ಸ್ತ್ರೀವೇಷಧಾರಿ ಸಂತೋಷ್ ಹಿಲಿಯಾಣ ಅವರ ಯಕ್ಷ ಪಯಣದ ೨೫ರ ಸಂಭ್ರಮ ಹಿಲಿಯಾಣ ಬೆಳ್ಳಿಯಾನ ಮಾರ್ಚ್ ೨೩ ಆದಿತ್ಯವಾರ ಮಂದಾರ್ತಿಯ ಶ್ರೀ ದುರ್ಗಾ ಸನ್ನಿಧಿಯಲ್ಲಿ ಜರುಗಲಿದೆ.
ಮಧ್ಯಾಹ್ನ ೨ ಗಂಟೆಗೆ ಬಡಗಿನ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ರತ್ನಾವತಿ ಕಲ್ಯಾಣ ನಡೆಯಲಿದೆ. ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಸುನಿಲ್ ಭಂಡಾರಿ ಕಡತೋಕ, ಸುಜನ ಹಾಲಾಡಿ, ಮುಮ್ಮೇಳದಲ್ಲಿ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ವಿದ್ಯಾಧರ ಜಲವಳ್ಳಿ, ಪ್ರಕಾಶ ಮೊಗವೀರ ಕಿರಾಡಿ, ಗೋವಿಂದ ಮೊಗವೀರ ವಂಡಾರು, ಕೃಷ್ಣ ನಾಯ್ಕ ಮುಂಡಾಡಿ, ರಾಘವೇಂದ್ರ ಪೇತ್ರಿ ಭಾಗವಹಿಸಲಿದ್ದಾರೆ.

ಸಂಜೆ 5 ಗಂಟೆಗೆ ಮಂದಾರ್ತಿ ದೇವಸ್ಥಾನದಿಂದ ಸಭಾಂಗಣದ ತನಕ ಭವ್ಯ ಮೆರವಣಿಗೆ ನಡೆಯಲಿದೆ. 5.30ಕ್ಕೆ ರಜತಾಭಿನಂದನೆ ಸಮಾರಂಭ ಆರಂಭಗೊಳ್ಳಲಿದ್ದು, ಎಡನೀರು ಮಠಧೀಶರಾದಸ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವವಚನ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಜತಾಶ್ರೀ ಪೂಷಕ ಗೌರವವನ್ನು ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮವನ್ನು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಸಂತೋಷ್ ಹಿಲಿಯಾಣ ಹಾಗೂ ವಿದ್ಯಾ ಅವರಿಗೆ ರಜತಾಭಿನಂದನೆ ನೀಡಿ ಗೌರವಿಸಲಾಗುವುದು. ಹೈದರಬಾದ್ ಉದ್ಯಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ರಜತನೂಪುರ ಪ್ರದಾನ ಮಾಡಲಿದ್ದಾರೆ. ಕುಂದಾಪುರ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹಾಗೂ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ.ಕುಂದರ್ ರಜತ ಗುರು ಗೌರವ ಪ್ರದಾನ ಮಾಡಲಿದ್ದಾರೆ. ರಜತ ಸ್ಥಂಭ ಗೌರವವನ್ನು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಎಚ್.ಧನಂಜಯ ಶೆಟ್ಟಿ ಹಾಗೂ ಕಲಾ ಪೋಷಕರಾದ ವಿಠಲ ಶೆಟ್ಟಿ ಶೇಡಿಕೊಡ್ಲು ಪ್ರದಾನ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ, ಹುಬ್ಬಳ್ಳಿಯ ಹೋಟೆಲ್ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಶ್ರೀ ಗಣೇಶ ಸಮೂಹ ಸಂಸ್ಥೆ ಬೆಳ್ವೆ ಇದರ ಗಣೇಶ್ ಕಿಣಿ ಬೆಳ್ವೆ, ಬಾರಾಳಿ ವಿಜಯನಾಥ ಹೆಗ್ಡೆ, ಸವ್ಯಸಾಚಿ ಬೆಂಗಳೂರು, ತಾರಾನಾಥ ಶೆಟ್ಟಿ ಹಿಲಿಯಾಣ ದೊಡ್ಮನೆ, ಕಾಂಗ್ರೆಸ್ ಮುಖಂಡರಾದ ದಿನೇಶ ಹೆಗ್ಡೆ ಮೊಳಹಳ್ಳಿ, ಹಿಲಿಯಾಣ ಬ್ರಹ್ಮಬೈದಕಳ ಗರಡಿಯ ಅಧ್ಯಕ್ಷರಾದ ಕರುಣಾಕರ ಶೆಟ್ಟಿ, ಕರ್ನಿರೆ ಸುವರ್ಣ ಪ್ರತಿಷ್ಟಾನದ ಪ್ರಭಾಕರ ಡಿ.ಸುವರ್ಣ ಕರ್ನಿರೆ, ಆರ್.ಕೆ ಭಟ್ ಬೆಳ್ಳಾರೆ, ಬೆಂಗಳೂರು, ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀನಿಧಿ ಕಾರ್ಪೋರೇಷನ್ ಬೆಂಗಳೂರು ಇದರ ಉಮೇಶ್ ಕುಂದರ್ ಮಂದಾರ್ತಿ, ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಅಧ್ಯಕ್ಷರಾದ ಶ್ಯಾಮಲ ಎಸ್ ಕುಂದರ್, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷರಾದ ಜಯಂತ್ ಅಮೀನ್, ಉದ್ಯಮಿ ಪ್ರತಾಪ್ ಭಂಡಾರಿ ಈಶ್ವರಕಟ್ಟೆ ಕೊಳಂಬೆ, ಪ್ರಮೋದ್ ಹೆಗ್ಡೆ ಹಿಲಿಯಾಣ ದೊಡ್ಮನೆ, ಪ್ರದೀಪ್ ಗಡಿಯಾರ್ ಬಾರಕೂರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಎಮ್.ಕೆ.ರಮೇಶ ಆಚಾರ್, ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಎಮ್.ಎ.ನಾಯ್ಕ, ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದ ಕಡಬ ಪೂವಪ್ಪ, ತಂತ್ರಾಡಿ ಮಕ್ಕಳ ಯಕ್ಷಗಾನ ಮೇಳದ ವ್ಯವಸ್ಥಾಪಕರಾದ ಟಿ.ಹಿರಿಯಣ್ಣ ಶೆಟ್ಟಿಗಾರ್ ಮಂದಾರ್ತಿ ಇವರುಗಳಿಗೆ ರಜತ ಗುರು ಗೌರವ ಪ್ರದಾನ ಮಾಡಲಾಗುವುದು.

ದಿವಾಕರ ಕಾರಂತ ಎಡಪದವು, ಯಕ್ಷಗಾನ ಕಲಾವಿದರು ಹಾಗೂ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇದರ ಸಂಚಾಲಕರಾದ ಅಶೋ ಭಟ್ ಉಜಿರೆ, ಕಳವಾಡಿ ಮೇಳದ ಯಜಮಾನರಾದ ಗುಂಡು ಕಾಂಚನ್ ಕೋಟ, ಹನುಮಗಿರಿ ಮೇಳದ ಪ್ರಬಂಧಕರಾದ ಹರೀಶ್ ಬಳಂತಿಮುಗುರು ಇವರಿಗೆ ರಜತ ಸ್ಥಂಭ ಗೌರವ ಪ್ರದಾನ ಮಾಡಲಾಗುವುದು.

ಸಂಜೆ 7.30ರಿಂದ ಸಂತೋಷ್ ಹಿಲಿಯಾಣ ಅವರಿಗೆ ಸಾರ್ವಜನಿಕರಿಂದ ಅಭಿನಂದನೆ, 7.45ರಿಂದ ತೆಂಕುತಿಟ್ಟು ಯಕ್ಷಗಾನ ವೇದಿಕೆಯಲ್ಲಿ ಸಹ ಕಲಾವಿದರಿಗೆ ರಜತ ಸ್ಮರಣ ಗೌರವ, ರಾತ್ರಿ 8 ಗಂಟೆಯಿಂದ ಹನುಮಗಿರಿ ಮೇಳದವರಿಂದ ಸಾಕೇತ ಸಾಮ್ರಾಜ್ಞಿ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಹಿಲಿಯಾಣ ಬೆಳ್ಳಿಯಾನ ಅಭಿನಂದನಾ ಸಮಿತಿ ಅಧ್ಯಕ್ಷರಾದ ಅಶೋಕ್ ಕುಂದರ್ ಮಂದಾರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!