spot_img
Wednesday, April 1, 2026
spot_img

‌ಇಬ್ಬರು ಕ್ರಿಶ್ಚಿಯನ್, ಮೂರು ಜನ ಮುಸ್ಲಿಮರಿಗೆ ಅಧಿಕಾರ ಕೊಡಿ ನೋಡೋಣ : ಬಿಜೆಪಿಗೆ ಡಿಕೆಶಿ ಸವಾಲ್‌

ಜನಪ್ರತಿನಿಧಿ (ಗದಗ) : ಸರ್ವರಿಗೆ ಸಮ‌ ಬಾಳು, ಸರ್ವರಿಗೂ ಸಮಪಾಲು ಎಂಬ ತತ್ವಕ್ಕೆ ಬಿಜೆಪಿ ಬದ್ಧ ಇದೆ. ಆದರೆ, ಕಾಂಗ್ರೆಸ್ ಮುಸ್ಲಿಂ ಬಹುಪಾಲು, ಇತರರಿಗೆ ಅಲ್ಪ ಪಾಲು ಎಂಬ ನೀತಿ ಅನುಸರಿಸುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳ ವರದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಮುಸ್ಲಿಂ, ಕ್ರೈಸ್ತ, ಸಿಖ್ ಹಾಗೂ ಬೌದ್ಧರು ನಮ್ಮ ದೇಶದ ಕರ್ನಾಟಕ ಪ್ರಜೆಗಳು. ನಾವು ಅಲ್ಪ ಸಂಖ್ಯಾತರಿಗೆ ಹಿಂದುಳಿದವರ ಬಗ್ಗೆ ಚಿಂತೆ ಮಾಡುತ್ತೇವೆ. ಸಮ ಬಾಳು, ಸಮ‌ಪಾಲು ಅನ್ನುವರು ತಮ್ಮ ಪಕ್ಷದಲ್ಲಿ ಪರಿಷತ್ ಸದಸ್ಯ, ರಾಜ್ಯಸಭಾ ಸದಸ್ಯ, ಕೇಂದ್ರದಲ್ಲಿ ಮಂತ್ರಿ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಇಬ್ಬರು ಕ್ರಿಶ್ಚಿಯನ್, ಮೂರು ಜನ ಮುಸ್ಲಿಮರಿಗೆ ಅಧಿಕಾರ ಕೊಡಿ ನೋಡೋಣ. ಆಗ ವಿಜಯೇಂದ್ರಗೆ ಸಮಬಾಳು, ಸಮಪಾಲು ಅಂತ ಮಾತನಾಡೋದು ಯೋಗ್ಯ ಎನಿಸುತ್ತದೆ ಎಂದು ಹೇಳಿದರು.

ಸಮ ಬಾಳು-ಸಮ‌ಪಾಲು ಎನ್ನುವವರು ಕುವೆಂಪು ನಾಡಗೀತೆ ಸರಿಯಾಗಿ ಓದಲಿ. ಯಾರು ಸೇರಿದರೆ ಶಾಂತಿ ತೋಟ ಆಗುತ್ತೆ ಎಂಬುದನ್ನು ಸರಿಯಾಗಿ ಓದಲಿ ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಇಳಿಯುವ ಮೊದಲು ಶಕ್ತಿ ಪ್ರದರ್ಶನ ಕುರಿತು ಮಾತನಾಡಿ ಈ ಬಗ್ಗೆ ಅನೇಕ ಜನರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ವಿಧಾನಸಭಾ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸುವಂತೆ ಸಚಿವರಿಗೆ ಸೂಚಿಸಲಾಗಿದೆ. ಇದನ್ನು ಮೊದಲು ಮಾಡಬೇಕು. ನಂತರ, ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿವೆ ಇದರ ಆಚರಣೆಯನ್ನೂಮಾಡಬೇಕು. ಇದನ್ನು ಸಹ ಮಾಡುತ್ತೇವೆಂದು ಹೇಳಿದರು.

ಅಲ್ಪಸಂಖ್ಯಾತ ಮೀಸಲಾತಿಯ ಮೂಲಕ ಕಾಂಗ್ರೆಸ್ ಸಂವಿಧಾನವನ್ನು ಉಲ್ಲಂಘಿಸಿದೆ ಎಂಬ ಬಿಜೆಪಿಯ ರವಿಶಂಕರ್ ಪ್ರಸಾದ್ ಅವರ ಟೀಕೆ ಕುರಿತು ಮಾತನಾಡಿ, ಮಾಧ್ಯಮಗಳು ಏನು ಹೇಳುತ್ತವೆಯೋ ಅದನ್ನು ನಾನು ಅನುಸರಿಸುವುದಿಲ್ಲ. ಅವರು ಏನು ಹೇಳಿದ್ದಾರೆಂದು ತಿಳಿದ ನಂತರ ಪ್ರತಿಕ್ರಿಯೆ ನೀಡುತ್ತೇನೆಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!