spot_img
Tuesday, March 17, 2026
spot_img

ಕಂಡ್ಲೂರು ರಾಮ್ಸನ್ ಸರಕಾರಿ ಪ್ರೌಢಶಾಲೆಗೆ ಲ್ಯಾಪ್ ಟಾಪ್, ಪ್ರಿಂಟರ್ ಕೊಡುಗೆ

ಕುಂದಾಪುರ: “ನಮ್ಮ ಸಮಾಜವನ್ನು, ದೇಶವನ್ನು ಸಶಕ್ತ ಗೊಳಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಈ ಶಿಕ್ಷಣ ಸಮರ್ಪಕ ಹಾಗೂ ಮತ್ತಷ್ಟು ಪರಿಣಾಮಕಾರಿಯನ್ನಾಗಿಸಲು ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆ ಕಲಿಕೆಯಲ್ಲಿ ಮಹತ್ವಪೂರ್ಣ ಸ್ಥಾನ ಪಡೆಯುತ್ತದೆ. ವಿದ್ಯಾರ್ಥಿಗಳು ಕಲಿಕೆ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಪ್ರಾಮಾಣಿಕ ಹಾದಿಯಲ್ಲಿ ಸಾಗಿದಾಗ ಬದುಕು ಯಶಸ್ಸಿನ ಪಯಣವಾಗುತ್ತದೆ ತನ್ಮೂಲಕ ವಿದ್ಯಾರ್ಥಿಗಳ ಬದುಕು ಯಶಸ್ಸಿನ ಪಯಣವಾಗುತ್ತದೆ.” ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಂಡ್ಲೂರು ಇದರ ಅಧ್ಯಕ್ಷರು, ಉದ್ಯಮಿ ರಾಜೇಶ್ ಶೇರಿಗಾರ್, ಕೆರೆಕಟ್ಟೆ ಮನೆ ಹೇಳಿದರು.

ಇವರು ಕಂಡ್ಲೂರು ರಾಮ್ಸನ್ ಸರಕಾರಿ ಪ್ರೌಢಶಾಲೆಗೆ ಲ್ಯಾಪ್ ಟಾಪ್, ಪ್ರಿಂಟರ್ ಮತ್ತು ಫ್ಯಾನ್ ಕೊಡುಗೆಯನ್ನು ಹಸ್ತಾಂತರಿಸಿ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿ ಸಾಮ್ರಾಟ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಡುಗೆ ನೀಡಿದ ರಾಜೇಶ್ ಶೇರಿಗಾರ್ ಇವರನ್ನು ಸಂಸ್ಥೆ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಸುರೇಶ್. ಎಸ್ .ಭಟ್, ಶಿಕ್ಷಕರಾದ, ಗೋಪಾಲ್ ವಿಷ್ಣು ಭಟ್ ,ನಿತ್ಯಾನಂದ ಶೆಟ್ಟಿ ಹಳನಾಡು, ಅಜಯ್ ಕುಮಾರ್ ಶೆಟ್ಟಿ, ಅಣ್ಣಪ್ಪ .ಎಂ .ಗೌಡ, ರಜನಿ ಹೆಗಡೆ, ಜ್ಯೋತಿ, ರತ್ನ, ಲಕ್ಷ್ಮೀಶೆಟ್ಟಿ ಉಪಸ್ಥಿತರಿದ್ದರು.

ಸಾನಿಧ್ಯ ಮತ್ತು ಶ್ರಾವ್ಯ ಪ್ರಾರ್ಥಿಸಿದರು. ಸಹ ಶಿಕ್ಷಕ ಸಂತೋಷ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!