spot_img
Tuesday, March 17, 2026
spot_img

ಕನ್ನಡದಲ್ಲಿ ಹೇಳಬೇಕಾದ ಕತೆಗಳು ಸಾಕಷ್ಟಿವೆ, ಆದರೆ ಯಾರೂ ಹೇಳುವ ಧೈರ್ಯ ಮಾಡುತ್ತಿಲ್ಲ | ಚಿತ್ರರಂಗದಲ್ಲಿ ವೇತನ ಅಸಮಾನತೆ ಬಗ್ಗೆ ರಮ್ಯಾ ಅಸಮಾಧಾನ

ಜನಪ್ರತಿನಿಧಿ (ಬೆಂಗಳೂರು) : ನನ್ನೊಂದಿಗೆ ನಟನೆ ಮಾಡಿದ ಕೆಲವರು ಇವತ್ತು ಸೂಪರ್ ಸ್ಟಾರ್​ಗಳಾಗಿದ್ದಾರೆ. ನನ್ನ ಜೊತೆಗೆ ಆರಂಭದಲ್ಲಿ ಸಿನಿಮಾ ಮಾಡುವಾಗ, ನನಗಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದ ನಟರು, ಆ ಒಂದು ಸಿನಿಮಾ ಹಿಟ್ ಆದ ಕೂಡಲೇ ಮುಂದಿನ ಸಿನಿಮಾಖ್ಕೆ ನನಗಿಂತ 5ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದರು, ಅವರಿಗೆ 5ಕೋಟಿ ನಟನ ಸಂಭಾವನೆ ಇದ್ದರೆ ನನಗೆ 1ಕೋಟಿ ಇರುತ್ತಿತ್ತು. ಅವರಷ್ಟೆ ಕೆಲಸ ನಾವೂ ಮಾಡುವಾಗ ನಮಗೆ ಕಡಿಮೆ ಸಂಭಾವನೆ ಅವರಿಗೆ ಹೆಚ್ಚು ಸಂಭಾವನೆ ಏಕೆ? ಎಂದು ಮೋಹಕ ತಾರೆ ನಟಿ ರಮ್ಯಾ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ, ಸಂಭಾವನೆಯ ವಿಚಾರದಲ್ಲಿ ಚಿತ್ರರಂಗದಲ್ಲಿ ಇರುವ ಅಸಮಾನತೆಯ ಬಗ್ಗೆ ಅವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ ನಟಿ ರಮ್ಯಾ, ‘ಕನ್ನಡದಲ್ಲಿ ಹೇಳಬೇಕಾದ ಕತೆಗಳು ಸಾಕಷ್ಟಿವೆ ಆದರೆ ಯಾರೂ ಹೇಳುವ ಧೈರ್ಯ ಮಾಡುತ್ತಿಲ್ಲ. ಈಗಲೂ ನಾವು ಮಹಿಳಾ ಪ್ರಧಾನ ಸಿನಿಮಾ ಎಂದರೆ ಮಹಿಳೆಯರು ಪೊಲೀಸ್ ಡ್ರೆಸ್ ಹಾಕಿಕೊಂಡು ರೌಡಿಗಳನ್ನು ಹೊಡೆಯುವ ಸಿನಿಮಾಗಳನ್ನೇ ಮಾಡುತ್ತಿದ್ದೇವೆ. ಇದು ಮಹಿಳಾ ಪ್ರಧಾನ ಸಿನಿಮಾ ಎನಿಸಿಕೊಳ್ಳುವುದಿಲ್ಲ. ಮಲಯಾಳಂ ಸಿನಿಮಾಗಳು ಅದ್ಭುತವಾದ ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡುತ್ತಿವೆ. ಕನ್ನಡದಲ್ಲಿ ಇತ್ತೀಚೆಗೆ ನನಗೆ ಇಷ್ಟವಾದ ಸಿನಿಮಾಗಳೆಂದರೆ ‘ಗಂಟುಮೂಟೆ’, ‘ಹದಿನೇಳೆಂಟು’, ‘ಸಪ್ತಸಾಗರದಾಚೆ ಎಲ್ಲೊ’ ಮತ್ತು ‘ಆಚಾರ್ಯ ಅಂಡ್ ಕೋ ’ ಎಂದಿದ್ದಾರೆ.

ನಟಿಯರನ್ನು ಚಿತ್ರರಂಗ ಹೇಗೆ ನಡೆಸಿಕೊಳ್ಳುತ್ತದೆ ಎಂಬ ಬಗ್ಗೆ ಮಾತನಾಡಿದ ನಟಿ ರಮ್ಯಾ, ವಿದ್ಯಾ ಬಾಲನ್ ತುಂಬಾ ಟ್ಯಾಲೆಂಟ್ ನಟಿ, ಆದರೆ ದಕ್ಷಿಣ ಭಾರತದಲ್ಲಿ ಸದ್ದು ಮಾಡಲಿಲ್ಲ. ನಟಿಯರು ಒಂದರ ಹಿಂದೊಂದು ಹಿಟ್ ಸಿನಿಮಾ ಕೊಡಲಿಲ್ಲ ಅಂದರೆ ಅವರಿಗೆ ನೆಗೆಟಿವ್ ಟ್ಯಾಗ್ ಕೊಡುತ್ತಾರೆ. ಒಂದು ಸಿನಿಮಾ ಹಿಟ್ ಕೊಟ್ಟರೆ 10 ಪ್ರಾಜೆಕ್ಟ್ ನಮ್ಮನ್ನು ಹುಡುಕಿಕೊಂಡು ಬರುತ್ತವೆ’ ಎಂದರು. ಈಗಿನ ಕಾಲಘಟ್ಟದಲ್ಲಿ ನಟಿಯರು ಯಾಕೆ ಜನರ ಮನಸಲ್ಲಿ ಉಳಿಯುತ್ತಿಲ್ಲ..? ಅನ್ನೋ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ‘ತ್ರಿಷಾ, ನಯನತಾರಾ ಹಾಗೆ ಜನಪ್ರಿಯ ನಟಿ ಇವತ್ತು ಇಲ್ಲ ಅದಕ್ಕೆ ಕಾರಣ ಸಿನಿಮಾ ಆಯ್ಕೆ, ಕಥೆ, ಪಾತ್ರ, ಜನರೇಶನ್ ಚೇಂಜ್ ಆಗಿದೆ, ಅದಕ್ಕೆ ತಕ್ಕಂತೆ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!