spot_img
Tuesday, March 17, 2026
spot_img

ಸಿದ್ದಾಪುರದಲ್ಲಿ ಜಿಲ್ಲಾ ಮಟ್ಟದ ಅಬಾಕಸ್ ಸ್ಪರ್ಧೆ

ಸಿದ್ಧಾಪುರ: ಆಧುನಿಕ ಭರಾಟೆಯಲ್ಲಿ ನೈತಿಕೆಯನ್ನು ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಅಗತ್ಯವಾಗಿದೆ. ಶಿಕ್ಷಣಕ್ಕೆ ಪೂರಕವಾದ ಅಬಾಕಸ್ ಸ್ಪರ್ಧೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನಿವಾರ್ಯವಾಗಿದೆ. ಅಬಾಕಸ್ ಶಿಕ್ಷಣದಿಂದ ಬುದ್ದಿ ಚುರುಕುಗೊಳಿಸುವ ಮೂಲಕ ಗಣಿತ ಶಿಕ್ಷಣ ಸುಲಭಗೊಳ್ಳುತ್ತದೆ. ವಿದ್ಯಾರ್ಥಿಗಳು ಈ ಸ್ಪರ್ಧೆಯನ್ನು ಸ್ಪರ್ಧೆಯಾಗಿ ಸ್ವಿಕರಿಸಿ, ಮುಂದಿನ ಶಿಕ್ಷಣವನ್ನು ಯಶಸ್ಸುಗೊಳಿಸಿಕೊಳ್ಳಿ ಎಂದು ಪತ್ರಕರ್ತ ಸತೀಶ ಆಚಾರ್ ಹೇಳಿದರು.

ಅವರು ಸಿದ್ದಾಪುರ ಆಚಾರ್ಯಸ್ ಅಕಾಡಮಿ ವತಿಯಿಂದ ಸಿದ್ದಾಪುರ ಆನಂತಪದ್ಮನಾಭ ಸಭಾ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಅಬಾಕಸ್ ಸ್ಪರ್ಧೆ ಕಾರ್ಯಕ್ರಮ ಉದ್ಘಾಟನೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹಲ್ನಾಡು ಹಳೆಯಮ್ಮ ದೈವಸ್ಥಾನದ ಟ್ರಸ್ಟಿ ಮಂಜಯ್ಯ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು.

ಸಮಾರೋಪ ಸಮಾರಂಭದಲ್ಲಿ ಅಂಪಾರು ಸಂಜಯಗಾಂಽ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಅವರು ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿ, ಆಚಾರ್ಯಸ್ ಅಕಾಡಮಿಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಆಚಾರ್ಯಸ್ ಅಕಾಡಮಿಯ ಮುಖ್ಯ ಶಿಕ್ಷಕಿ ಶ್ರೇಯಾ ಆಚಾರ್ಯ ಅವರು ಸಿದ್ದಾಪುರದಂತ ಗ್ರಾಮೀಣ ಭಾಗದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಆಯೋಜಿಸಿ, ಯಶಸ್ಸುಗಳಿಸಿದ್ದಾರೆ ಎಂದರು.

ನಿವೃತ್ತ ನೇವಿಯ ಸೈನಿಕ ಮಧುಸೂದನ್ ಹೆಗ್ಡೆ, ಗುತ್ತಿಗೆದಾರ ಸುರೇಂದ್ರ ಶೆಟ್ಟಿ ಹಾಲಾಡಿ, ಸಭಾ ಭವನದ ಮಾಲಕ ರಾಜೇಶ ಉಡುಪ, ಸಹ ಶಿಕ್ಷಕಿ ಸುಧಾ, ಶುತಿ, ವ್ಯವಸ್ಥಾಪಕ ಪ್ರದೀಪ್ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.

ಸುಮಾರು ೧೦೦ಕ್ಕೂ ಹೆಚ್ಚು ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೋಷಕರು, ವಿವಿಧ ಶಾಲೆಗಳ ಆಡಳಿತ ಮಂಡಳಿ ಹಾಗೂ ಅಧ್ಯಾಪಕರು ಭಾಗವಹಿಸಿದರು.

ಮುಖ್ಯ ಶಿಕ್ಷಕಿ ಶ್ರೇಯಾ ಪಿ.ಆಚಾರ್ಯ ಸ್ವಾಗತಿಸಿದರು. ಶುತಿ ಉಡುಪ ಸಹಕರಿಸಿದರು. ಅನಗ ಉಡುಪ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!