spot_img
Monday, March 16, 2026
spot_img

ಕುಂದಾಪುರಕ್ಕೆ ಹೆಚ್ಚುವರಿ ಮೆಟ್ರಿಕ್‌ ನಂತರದ ಹಾಸ್ಟೆಲ್‌ ಒದಗಿಸಿ : ಕಲಾಪದಲ್ಲಿ ಶಾಸಕ ಕೊಡ್ಗಿ

ಜನಪ್ರತಿನಿಧಿ (ಬೆಂಗಳೂರು/ಕುಂದಾಪುರ) : ಕುಂದಾಪುರಕ್ಕೆ ಹೆಚ್ಚುವರಿ ಮೆಟ್ರಿಕ್‌ ನಂತರದ ಹಾಸ್ಟೆಲ್‌ ಒದಗಿಸುವಂತೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅವರು ಇಂದು(ಬುಧವಾರ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಿಗೆ ಮನವಿ ಮಾಡಿಕೊಂಡರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೨೦೨೩-೩೪ರಲ್ಲಿ೩೪೫ ವಿದ್ಯಾರ್ಥಿಗಳಿಗೆ ಹಾಸ್ಟೇಲ್‌ ಸೌಲಭ್ಯ ದೊರಕಲಿಲ್ಲ. ೨೦೨೪-೨೫ ಸಾಲಿನಲ್ಲಿ ೩೫೦ ವಿದ್ಯಾರ್ಥಿಗಳಿಗೆ ಹಾಸ್ಟೇಲ್‌ ಸೌಲಭ್ಯ ದೊರಕಲಿಲ್ಲ. ಕುಂದಾಪುರ ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೇಲ್‌ ನಿರ್ಮಾಣಕ್ಕೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿತ್ತು. ಆದರೇ, ಈವರೆಗೆ ಇಲಾಖೆಯಾಗಲಿ, ಸಚಿವರಾಗಲಿ ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿ ಹಾಸ್ಟೇಲ್‌ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಹಾಸ್ಟೇಲ್‌ ನ ಅಗತ್ಯವಿದೆ. ಹೆಚ್ಚುವರಿ ಮೆಟ್ರಿಕ್‌ ನಂತರದ ಹಾಸ್ಟೆಲ್‌ ಒದಗಿಸಬೇಕಾದ ಅನಿವಾರ್ಯವಿದೆ ಎಂದು ಹೇಳಿದರು.

ಈ ಸಂಬಂಧಿಸಿದಂತೆ ಉತ್ತರಿಸಿದ ಸಚಿವ ಶಿವರಾಜ್‌ ತಂಗಡಗಿ, ಈಗಾಗಲೇ ಕುಂದಾಪುರದಲ್ಲಿ ಹದಿನೈದು ಹಾಸ್ಟೇಲುಗಳಿದ್ದಾವೆ. ಬಾಲಕರ ಮೆಟ್ರಿಕ್‌ ಪೂರ್ವ ರು ಹಾಸ್ಟೇಲುಗಳು, ಬಾಲಕೀಯರ ಎಂಟು ಹಾಸ್ಟೇಲುಗಳಿವೆ. ಈಗಾಗಲೇ ೩೭೭ ಹಾಸ್ಟೇಲ್‌ ಗಳಿಗಾಗಿ ಅರ್ಜಿ ಸಲ್ಲಿಕೆಯಾಗಿವೆ. ೨೫೦ ಹಾಸ್ಟೇಲ್‌ ಗಳನ್ನು ಈಗಾಗಲೇ ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣ ಮಾಡಲಾಗಿದೆ. ತಾಲೂಕು ಕೇಂದ್ರಗಳಲ್ಲಿ ಹಾಸ್ಟೇಲ್‌ ಗಳ ಬೇಡಿಕೆ ಇದೆ. ಹಾಸ್ಟೇಲ್‌ ಸೌಲಭ್ಯ ದೊರಕದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿಯಲ್ಲಿ ಹತ್ತು ತಿಂಗಳಿಗೆ ೧೫೦೦ ರೂ. ನೀಡಿದ್ದೇವೆ. ಅನುಧಾನದ ಲಭ್ಯತೆಯ ಆಧಾರದ ಮೇಲೆ, ಆದ್ಯತೆ ಮೇರೆಗೆ ಕುಂದಾಪುರ ತಾಲೂಕಿಗೆ ಹೆಚ್ಚುವರಿ ಹಾಸ್ಟೇಲ್‌ ನೀಡಾಲಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!