spot_img
Sunday, February 15, 2026
spot_img

ಸಿದ್ದಾಪುರದಲ್ಲಿ ಅಚಲ್ ಎಂಟರ್‌ಪ್ರೈಸಸ್ ನಿಪ್ಪೊನ್ ಪೇಂಟ್ ಮಳಿಗೆ ಶುಭಾರಂಭ

ಸಿದ್ದಾಪುರ: ಅಚಲ್ ಎಂಟರ್‌ಪ್ರೈಸಸ್ ಕೋಟೇಶ್ವರ ಇದರ ನೂತನ ಸಿದ್ದಾಪುರ ಶಾಖೆಯ ನಿಪ್ಪೊನ್ ಪೇಂಟ್ ಮಳಿಗೆ ಸಿದ್ದಾಪುರ ಶಂಕರನಾರಾಯಣ ರಸ್ತೆಯ ಮಹಾಲಸ ಕಟ್ಟಡದಲ್ಲಿ ರವಿವಾರ ವೇ|ಮೂ| ಮಹೇಶ ಭಟ್ ಬಸ್ರೂರು ಅವರ ಪೌರೋಹಿತ್ಯದಲ್ಲಿ ಲಕ್ಷ್ಮೀ ಪೂಜೆಯೊಂದಿಗೆ ಶುಭಾರಂಭಗೊಂಡಿತು.

ಬೆಳ್ವೆ ಕಿಣಿ ಕುಟುಂಬದ ಹಿರಿಯರಾದ ಬಿ. ಉಮೇಶ ಕಿಣಿ ಬೆಳ್ವೆ ಅವರು ದೀಪಾ ಬೆಳಗಿಸುವ ಮೂಲಕ ಅಚಲ್ ಎಂಟರ್‌ಪ್ರೈಸಸ್ ಸಿದ್ದಾಪುರ ಶಾಖೆಯನ್ನು ಉದ್ಘಾಟಿಸಿ, ಶುಭಹಾರೈಸಿದರು.

ಉಳ್ಳೂರು-೭೪ ಶ್ರೀ ಬನಶಂಕರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಪಿಗೇಡಿ ಸಂಜೀವ ಶೆಟ್ಟಿ ಮಾತನಾಡಿ, ಬೆಳೆಯುತ್ತಿರುವ ಸಿದ್ದಾಪುರಕ್ಕೆ ಸುಸಜಿತವಾದ ಪೇಂಟ್‌ಗೆ ಮಳಿಗೆ ಅಗತ್ಯವಾಗಿದೆ. ಯಶಸ್ವಿ ಉದ್ಯಮಿ ಬಿ. ಸತೀಶ ಕಿಣಿ ಅವರ ಅನೇಕ ಉದ್ಯಮಗಳಲ್ಲಿ ನಿಪ್ಪೊನ್ ಪೇಂಟ್ ಮಳಿಗೆ ಒಂದಾಗಿದೆ. ಈ ಉದ್ಯಮ ಇನ್ನಷ್ಟು ಬೆಳೆಯಲ್ಲಿ ಎಂದು ಶುಭಹಾರೈಸಿದರು.

ಉದ್ಯಮಿಗಳಾದ ಶ್ರೀಕಾಂತ ನಾಯಕ್ ಐರಬಲು, ಕೆ. ಭೋಜ ಶೆಟ್ಟಿ ಕಡ್ರಿ, ನಾರಾಯಣ ಶೆಟ್ಟಿ ಜನ್ಸಾಲೆ, ರಮೇಶ ಸೆರ್ವೇಗಾರ, ಎಸ್.ಕೆ. ವಾಸುದೇವ ಪೈ ಮೊದಲಾದವರು ಶುಭಹಾರೈಸಿದರು.

ಅಚಲ್ ಎಂಟರ್‌ಪ್ರೈಸಸ್ ಮಾಲಕರಾದ ಬಿ. ಸತೀಶ ಕಿಣಿ ಬೆಳ್ವೆ, ಸ್ನೇಹ ಎಸ್.ಕಿಣಿ, ಶ್ರೇಯಾಸ್ ಕಿಣಿ, ಕಿಣಿ ಕುಟುಂಬದವರಾದ ಉಷಾ ಉಮೇಶ ಕಿಣಿ, ಬಿ. ಹರೀಶ್ ಕಿಣಿ ಬೆಳ್ವೆ, ಹೇಮಾ ಹರೀಶ್ ಕಿಣಿ, ಕಟ್ಟಡ ಮಾಲಕರಾದ ವೆಂಕಟೇಶ ಭಟ್ ಸಿದ್ದಾಪುರ, ಉದ್ಯಮಿಗಳಾದ ಎನ್. ಚಂದ್ರನಂದ ಶೆಟ್ಟಿ, ಡಿ. ಭರತ್ ಕಾಮತ್, ಕೆ. ಸತೀಶಕುಮಾರ ಶೆಟ್ಟಿ ಕಡ್ರಿ, ಕಟ್ಟಡ ಗುತ್ತಿಗೆದಾರರು, ಗುತ್ತಿಗೆದಾರರು, ಪೇಂಟರ್ ಮೊದಲಾದವರು ಭಾಗವಹಿಸಿದರು.

ಅಚಲ್ ಎಂಟರ್‌ಪ್ರೈಸಸ್‌ನಲ್ಲಿ ಅತೀ ಕಡಿಮೆ ದರದಲ್ಲಿ ಗುಣಮಟ್ಟದ ನಿಪ್ಪೊನ್ ಪೇಂಟ್ ಸೇರಿದಂತೆ ಇತರ ಸಮಾಗ್ರಿಗಳು ದೊರಕಲ್ಲಿದೆ ಎಂದು ಅಚಲ್ ಎಂಟರ್‌ಪ್ರೈಸಸ್ ಮಾಲಕರಾದ ಬಿ. ಸತೀಶ ಕಿಣಿ ಬೆಳ್ವೆ ಮತ್ತು ಬಿ. ಶ್ರೇಯಸ್ ಕಿಣಿ ಅವರು ಹೇಳಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!