spot_img
Sunday, February 15, 2026
spot_img

ಪಾರ್ವತಿ ಜಿ.ಐತಾಳ್ ಅವರ ʼಅಂತರಂಗದ ಸ್ವಗತ’ ನೇರ ಮತ್ತು ಸರಳ ನಿರೂಪಣೆಯ ಸೊಗಸಿದೆ-ಅಗ್ರಹಾರ ಕೃಷ್ಣಮೂರ್ತಿ

ಬೆಂಗಳೂರು : ಬದುಕಿನಲ್ಲಿ ಸಂಭವಿಸಿದ ಪ್ರಮುಖ ಘಟನೆಗಳನ್ನು ಸತ್ಯ ಹಾಗೂ ಪ್ರಾಮಾಣಿಕತೆಗಳಿಂದ ಸ್ಪೂರ್ತಿದಾಯಕವಾಗಿ ಓದುಗರೊಂದಿಗೆ ಹಂಚಿಕೊಳ್ಳುವುದು ಆತ್ಮಕಥೆಗಳ ಉದ್ದೇಶ. ‘ಆಂತರಂಗದ ಸ್ವಗತ’ ಎಂಬ ಪಾರ್ವತಿ ಜಿ.ಐತಾಳ್ ಅವರ ಈ ಆತ್ಮಕಥನದಲ್ಲಿ ನೇರ ಮತ್ತು ಸರಳ ನಿರೂಪಣೆಯ ಸೊಗಸಿದೆ. ಬಾಲ್ಯದಿಂದ ಆರಂಭಿಸಿ ಇದುವರೆಗಿನ ಎಲ್ಲ ಮುಖ್ಯ ಘಟನೆಗಳನ್ನು ಮನಮುಟ್ಟುವ ರೀತಿಯಲ್ಲಿ ಅವರು ಹಂಚಿಕೊಂಡಿದ್ದಾರೆ ’ ಎಂದು ಪ್ರಸಿದ್ಧ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪೂರ್ವ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಹೇಳಿದ್ದಾರೆ.

ಅವರು ಎನ್.ಆರ್.ಕಾಲನಿಯಲ್ಲಿರುವ ಬಿ.ಎಂ.ಶ್ರೀ.ಪ್ರತಿಷ್ಠಾನದ ಕಲಾಭವನದಲ್ಲಿ ಅಂಕಿತ ಪುಸ್ತಕವು ಏರ್ಪಡಿಸಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡುಂಡಿರಾಜ್ ( ಹದಿನಾಲ್ಕು ಕಿರು ನಾಟಕಗಳು) , ಪಾರ್ವತಿ ಜಿ.ಐತಾಳ್ (ಅಂತರಂಗದ ಸ್ವಗತ) ಮತ್ತು ರಘುನಾಥ್ ಚ.ಹ (ಇನ್ನು ಮುಂದಿನದ್ದೆಲ್ಲ ಕಥೆ ’ ಮತ್ತು ’ಇಳಿಸಲಾಗದ ಶಿಲುಬೆ’) ಅವರ ಕೃತಿಗಳನ್ನು ಅನಾವರಣಗೊಳಿಸಿ ಮಾತನಾಡಿದರು. ಪತ್ರಕರ್ತ ಲೇಖಕ ಹೆಚ್.ಎಸ್.ಸತ್ಯನಾರಾಯಣ ಮತ್ತು ವಿಮರ್ಶಕ ಡಾ.ರವಿಕುಮಾರ್ ಕೃತಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಪಾರ್ವತಿ ಜಿ.ಐತಾಳ್, ಡುಂಡಿರಾಜ್ ಮತ್ತು ರಘುನಾಥ್ ಚ.ಹ.ಅವರು ತಮ್ಮ ಕೃತಿ ರಚನೆಯ ಹಿನ್ನೆಲೆಯ ಬಗ್ಗೆ ಮಾತನಾಡಿದರು. ಪ್ರಕಾಶ್ ಕಂಬತ್ತಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!